ಶಿಥಿಲವಾಗಿರುವ ಮನೆಯಲ್ಲಿ ವಾಸಮಾಡಬೇಡಿ : ಮುಂಡಗೋಡ ಅಧಿಕಾರಿಗಳಿಂದ ಸೂಚನೆ

Spread the love

ಮುಂಡಗೋಡ : ಮಳೆ ಆಗುತ್ತಿರುವ ಕಾರಣ ತಾಲೂಕಿನ ಗ್ರಾಮಗಳ ಮತ್ತು ಮುಂಡಗೋಡ ಪಟ್ಟಣದ ಸಾರ್ವಜನಿಕರು ತಮ್ಮ ಮನೆ ಮಳೆಯಿಂದ ಸೋರುವ, ಬೀಳುವ ಹಂತದಲ್ಲಿ ಇದ್ದರೆ ಅಥವಾ ಶಿಥಿಲ ಸ್ಥಿತಿಯಲ್ಲಿದ್ದಲ್ಲಿ ಅಂತಹ ಮನೆಯಲ್ಲಿ ವಾಸ ಮಾಡಬಾರದು. ಸುರಕ್ಷಿತ ಮನೆಗಳಿಗೆ, ಸಂಬಂಧಿಕರ ಮನೆಗಳಿಗೆ ಹೋಗಬೇಕು.ತಮ್ಮ ಮನೆ ಮಳೆಯಿಂದ ಹಾನಿ ಆಗಿದ್ದಲ್ಲಿ, ಸೋರುವ ಶಿಥಿಲ ಸ್ಥಿತಿಯಲ್ಲಿದ್ದಲ್ಲಿ ಕೂಡಲೇ ತಮ್ಮ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO)ಅಥವಾ ಗ್ರಾಮ ಆಡಳಿತ ಅಧಿಕಾರಿ( VAO) ಗಮನಕ್ಕೆ ತರಬೇಕು ಎಂದು ತಹಶೀಲದಾರ ಶಂಕರ ಗೌಡಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೈ.ದಾಸನಕೊಪ್ಪ, ಪ.ಪಂ.ಮುಖ್ಯಾಧಿಕಾರಿ ಚಂದ್ರಶೇಖರ ತಿಳಿಸಿದ್ದಾರೆ.

ಮಳೆಯಿಂದ ಮನೆ ಸೋರುವುದು, ಹಾನಿ ಆಗಿರುವುದು ಇದ್ದಲ್ಲಿ,  ತಮ್ಮ ವಾಸಕ್ಕೆ ಬೇರೆ ವ್ಯವಸ್ಥೆ ಮಾಡಲಾಗುವುದು. ಈ ಕುರಿತು  ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರಬೇಕು. ಅತಿವೃಷ್ಟಿಯ ಕಾರಣ ಏನಾದರೂ ಸಮಸ್ಯೆಗಳನ್ನು ಹೊಂದಿದ್ದರೆ, ತಹಶೀಲ್ದಾರ್ ಕಚೇರಿಯ ಸಹಾಯವಾಣಿ  08301-222122  ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು. ತಹಶೀಲ್ದಾರ್ ಅವರ ಮೊಬೈಲ್ ಪೋನ್ ಸಂಖ್ಯೆ: 9164874231 ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.