ಕೋವಿಡ್ : 24 ಗಂಟೆಗಳಲ್ಲಿ 41, 831 ಪ್ರಕರಣಗಳು ಪತ್ತೆ

Spread the love

ನವದೆಹಲಿ : ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 40 ಸಾವಿರಕ್ಕಿಂತ ಅಧಿಕ ಕೋವಿಡ್ 19 ಹೊಸ ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಆದಿತ್ಯವಾರ (ಆಗಷ್ಟ್ 01) ಬಿಡುಗಡೆ ಮಾಡಿರುವ ಅಂಕಿ ಅಂಶದಲ್ಲಿ ಮಾಹಿತಿ ನೀಡಿದೆ.

ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 41, 831 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಜುಲೈ 27ರಂದು ಭಾರತದಲ್ಲಿ 30,000ಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳು ವರದಿಯಾಗಿತ್ತು. ಇದು ಕಳೆದ 132 ದಿನಗಳ ಬಳಿಕದ ಕಡಿಮೆ ಪ್ರಮಾಣದ ಪ್ರಕರಣವಾಗಿತ್ತು. ಆದರೆ ಜುಲೈ 28ರಂದು 43,654 ಪ್ರಕರಣ ಪತ್ತೆಯಾಗಿತ್ತು. ನಂತರ ಜುಲೈ 29ರಂದು 43,509 ಪ್ರಕರಣ, ಜುಲೈ 30ರಂದು 44,230 ಪ್ರಕರಣ, ಜುಲೈ 31 ರಂದು 41, 649 ಪ್ರಕರಣ ಹಾಗೂ ಇಂದು ಮತ್ತೆ ಸೋಂಕಿನ ಪ್ರಮಾಣ ಹೆಚ್ಚಳವಾಗಿದ್ದು, ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಏತನ್ಮಧ್ಯೆ ಕೋವಿಡ್ ಸೋಂಕಿನಿಂದ ಕಳೆದ 24ಗಂಟೆಗಳಲ್ಲಿ 541 ಮಂದಿ ಸಾವನ್ನಪ್ಪಿದ್ದು, ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಒಟ್ಟು 3,16,55,824ಕ್ಕೆ ಏರಿಕೆಯಾಗಿದೆ. ಅದೇ ರೀತಿ ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಖ್ಯೆ 4,24,351ಕ್ಕೆ ಹೆಚ್ಚಳವಾಗಿದೆ.

ಕೇರಳವು ಅತಿ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು 20,624 ಎಂದು ವರದಿ ಮಾಡಿದೆ, ಮಹಾರಾಷ್ಟ್ರ 6,959 ಪ್ರಕರಣಗಳು, ಆಂಧ್ರ ಪ್ರದೇಶ 2,058 ಪ್ರಕರಣಗಳು, ಕರ್ನಾಟಕ 1,987 ಪ್ರಕರಣಗಳು ಮತ್ತು ತಮಿಳುನಾಡು 1,986 ಪ್ರಕರಣಗಳು ದಾಖಲಾಗಿವೆ.