ಧರ್ಮಾ ಜಲಾಶಯದಲ್ಲಿ ಓರ್ವನ ರಕ್ಷಣೆ..!ಮತ್ತೊಬ್ಬ ನಾಪತ್ತೆ..!!

Spread the love

ಮುಂಡಗೋಡ : ತಾಲೂಕಿನ ಮಳಗಿ ಬಳಿಯ ಧರ್ಮಾ ಜಲಾಶಯವನ್ನು ನೋಡಲು ಹೋಗಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ನಾಪತ್ತೆಯಾದರೆ ಮತ್ತೊಬ್ಬನನ್ನು ರಕ್ಷಿಸಿದ ಘಟನೆ ನಡೆದಿದೆ. 

ಮುಡಸಾಲಿಯ ಶ್ರೀನಾಥ ಎಂಬಾತನೇ ಧರ್ಮಾ ಜಲಾಶಯದಲ್ಲಿ ಕೊಚ್ಚಿಕೊಂಡು ಹೋದರೆ ಮತ್ತೊಬ್ಬ ಪೀರಪ್ಪನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.