ಮುಂಡಗೋಡ ತಾಲೂಕಿನಲ್ಲಿ ಶೇ.44 ರಷ್ಟು ರೈತರು ಮಾತ್ರ ಆರ್.ಟಿ.ಸಿ.ಗೆ ಆಧಾರ್ ಲಿಂಕ್ ಮಾಡಿದ್ದಾರೆ : ತಹಶೀಲದಾರ ಶಂಕರ ಗೌಡಿ

Spread the love

ಮುಂಡಗೋಡ : ತಾಲೂಕಿನಲ್ಲಿ ಇಲ್ಲಿಯವರೆಗೆ ಕೇವಲ ಶೇ.44 ರಷ್ಟು ರೈತರು ಮಾತ್ರ ತಮ್ಮ ಜಮೀನುಗಳ ಪಹಣಿ ಪತ್ರಿಕೆ ( ಆರ್.ಟಿ.ಸಿ) ಗೆ ಆಧಾರ್ ಲಿಂಕ್ ಮಾಡಿಕೊಂಡಿದ್ದಾರೆ. ಇದು ಅತ್ಯಂತ ಕಡಿಮೆ ಸಂಖ್ಯೆ ಆಗಿದೆ ಎಂದು ತಹಶೀಲದಾರ ಶಂಕರ ಗೌಡಿ ತಿಳಿಸಿದ್ದಾರೆ.

ಇನ್ನು ಮುಂದೆ ತಮ್ಮ ಜಮೀನಿನ ದಾಖಲೆಗಳನ್ನು ಸುರಕ್ಷಿತವಾಗಿ ಇಡಲು, ವಿವಿಧ ಸೌಲಭ್ಯಗಳನ್ನು ಪಡೆಯಲು, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಭೂಮಿಯ ಹಕ್ಕು ಬದಲಾವಣೆ ಮಾಡಿಕೊಳ್ಳಲು ನಿಮ್ಮ ಪಹಣಿ ಪತ್ರಿಕೆಗೆ ಕಡ್ಡಾಯವಾಗಿ ಆಧಾರ್ ಸಂಖ್ಯೆ ಲಿಂಕ್ ಆಗಿರಬೇಕು. ಇಲ್ಲದಿದ್ದಲ್ಲಿ ರೈತರು ವಿವಿಧ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಕೂಡಲೇ ನಿಮ್ಮ ಗ್ರಾಮಗಳ ಗ್ರಾಮ ಆಡಳಿತ ಅಧಿಕಾರಿಯನ್ನು (ಶಾನುಭೋಗ) ಮತ್ತು ಗ್ರಾಮ ಸಹಾಯಕರನ್ನು ಸಂಪರ್ಕಿಸಿ ಆಧಾರ್ ಲಿಂಕ್ ಮಾಡಿಕೊಳ್ಳಬೇಕು. ಇದಕ್ಕೆ ಇನ್ನು ಕೆಲವೇ ದಿನಗಳ ಆವಕಾಶ ಮಾತ್ರ ಇದೆ ಎಂದು ಅವರು ಹೇಳಿದ್ದಾರೆ.