`ಅರಣ್ಯ ಅಪರಾಧ’ ಕೇಸ್ ಗಳಲ್ಲಿ ವಲಯ ಅರಣ್ಯಾಧಿಕಾರಿಗಳೇ `FIR’ ದಾಖಲಿಸಬೆಕು : ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ

Spread the love

ಬೆಂಗಳೂರು : ಅರಣ್ಯ ಅಪರಾಧ ಪ್ರಕರಣಗಳಲ್ಲಿ ವಲಯ ಅರಣ್ಯಾಧಿಕಾರಿಗಳೇ  ಎಫ್.ಐ.ಆರ್’ ದಾಖಲಿಸಬೆಕು ಎಂದು ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.

ಸದರಿ ಸೆಕ್ಷನ್ ಪ್ರಕಾರ ವಲಯ ಅರಣ್ಯಾಧಿಕಾರಿಗಿಂತ ಕೆಳಹಂತದ ಉಪ ವಲಯ ಅರಣ್ಯಾಧಿಕಾರಿಗಳು ಕಂ ಮೊಜಣಿದಾರರು ಹಾಗೂ ಬೀಟ್ ಫಾರೆಸ್ಟ‌ರ್ಗಳು ಎಫ್.ಐ.ಆರ್. ಗೆ ಸಹಿ ಹಾಕಿ ಮೊಕದ್ದಮೆ ದಾಖಲಿಸಲು ಕಾಯ್ದೆಯಡಿ ಅವಕಾಶವಿರುವುದಿಲ್ಲ. ಕೆಲವು ಪ್ರಕರಣಗಳಲ್ಲಿ ಕೆಳಹಂತದ ಸಿಬ್ಬಂದಿಗಳು ದಾಖಲಿಸಿದ ಅರಣ್ಯ ಮೊಕದ್ದಮೆಗಳು ಮೇಲ್ಕಂಡ ಕಾಯ್ದೆಯ ಅವಕಾಶಗಳನ್ನಯ ನ್ಯಾಯಾಲಯಗಳಲ್ಲಿ ವಜಾಗೊಳ್ಳುತ್ತವೆ. ಈ ವಿಷಯದ ಬಗ್ಗೆ, ಸರ್ಕಾರದ ಮಟ್ಟದಲ್ಲಿ ಕಾನೂನು ಇಲಾಖೆಯ ಅಭಿಪ್ರಾಯ ಪಡೆಯಲಾಗುತ್ತಿದೆ. 

ರಾಜ್ಯದ ಅರಣ್ಯ ಇಲಾಖೆಯ ವತಿಯಿಂದ ಹೂಡಲಾಗಿರುವ ಅರಣ್ಯ ಅಪರಾಧ ಪ್ರಕರಣಗಳು ಮಾನ್ಯ ನ್ಯಾಯಾಲಯದಲ್ಲಿ ಈಗಾಗಲೇ ತಿಳಿಸಿರುವ ತಾಂತ್ರಿಕ ಕಾರಣದಿಂದ ವಜಾ ಆಗುತ್ತಿರುವುದನ್ನು ಸರ್ಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಮಾನ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಉಲ್ಲೇಖಿತ ಪತ್ರಗಳಲ್ಲಿ ತಿಳಿಸುತ್ತಾ, ಮಾನ್ಯ ನ್ಯಾಯಲಯಗಳಲ್ಲಿ ಅರಣ್ಯ ಇಲಾಖೆಯು ದಾಖಲಿಸಿರುವ ಅಪರಾಧ ಪ್ರಕರಣಗಳು ಈ ಕಾರಣಕ್ಕಾಗಿ ವಜಾವಾಗುತ್ತಿರುವುದು ತಪ್ಪಿಸಲು ಸಂಬಂಧಪಟ್ಟ ನ್ಯಾಯವ್ಯಾಪ್ತಿಯ ವಲಯ ಅರಣ್ಯ ಅಧಿಕಾರಿಗಳಿಂದಲೇ ಎಫ್.ಐ.ಆರ್. ದಾಖಲಿಸಲು ಸೂಚಿಸಿ ಸುತ್ತೋಲೆ ಹೊರಡಿಸಲು ಸೂಚಿಸಿರುತ್ತಾರೆ.