ಬೆಂಗಳೂರು: ಮುಡಾ ಸೈಟ್ ಹಗರಣದ ವಿಚಾರಣೆ ಬಹುತೇಕ ಮುಕ್ತಾಯದ ಹಂತ ತಲುಪಿದೆ. ಸೆ.12ಕ್ಕೆ ವಿಚಾರಣೆ ನಡೆದ ಬಳಿಕ ತೀರ್ಪು ಪ್ರಕಟವಾಗುವ ಸಾಧ್ಯತೆಯಿದೆ. ಹೈಕೋರ್ಟ್ ತೀರ್ಪಿನ ನಂತರ ರಾಜ್ಯ ರಾಜಕೀಯದಲ್ಲಿ ಅಸಲಿ ಗೇಮ್ ಶುರುವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಮುಡಾ ಕೇಸಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆಯಲಿದೆ. ಸರ್ಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಲಿದ್ದಾರೆ. ಇದಲ್ಲದೇ ಸೆ. 12ರಂದು ಕೂಡ ವಾದ ಸರಣಿ ಮುಂದುವರೆಯಲಿದೆ. ಅಂದು ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ. ಹೀಗಾಗಿ ಇಂದು ಹೈಕೋರ್ಟ್ ಆದೇಶ ನೀಡುವ ಸಾಧ್ಯತೆ ಕಡಿಮೆ ಇದೆ.
ತೀರ್ಪಿನತ್ತ ಚಿತ್ತ:
ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆಯ ಗಾಳಿ ಬೀಸ್ತಿದೆಯಾ? ಮುಡಾ ಕೇಸಲ್ಲಿ ಪ್ರಾಸಿಕ್ಯೂಷನ್ ಭೀತಿ ಎದುರಿಸ್ತಿರುವ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸನ್ನಿವೇಶ ಉದ್ಭವವಾಗುತ್ತಾ? ಗೊತ್ತಿಲ್ಲ. ಆದ್ರೆ ಒಂದು ಅವಕಾಶ ಸಿಕ್ಕಿದರೆ ಸಿಎಂ ಆಗಿಯೇ ಬಿಡೋಣ ಎಂದು ಕಾಂಗ್ರೆಸ್‌ನ ಕೆಲವರು ಪ್ರಯತ್ನ ಶುರು ಮಾಡಿದಂತೆ ಕಾಣುತ್ತಿದೆ.