ಹಾಸನ: ಇನ್ನೂ ಅನಾಹುತ ಕಡಿಮೆಯಾಗಿಲ್ಲ. ಮಳೆ ಹೆಚ್ಚಾಗಲಿದೆ. ಐದು ಕಡೆಯಲ್ಲಿ ತೊಂದರೆ ಎದುರಾಗಲಿದೆ. ಆಕಾಶದಲ್ಲಿ ದೊಡ್ಡ ಆಘಾತವೇ ಉಂಟಾಗಲಿದೆ. ಭೂಮಿ, ಆಕಾಶ, ಅಗ್ನಿ, ವಾಯು, ಜಲಗಳಿಂದ ಕಂಟಕ ಎದುರಾಗಲಿದೆ ಎಂಬುದಾಗಿ ಕೋಡಿಮಠದ ಶಿವಾನಂದ ಶಿವಾಚಾರ್ಯ ಶ್ರೀಗಳು ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಳೆ ಇನ್ನೂ ಜಾಸ್ತಿ ಆಗಲಿದೆ. ಪ್ರಾಕೃತಿಕ ದೋಷವಿದೆ. ಐದು ಕಡೆ ತೊಂದರೆಯಿದೆ. ಭೂಮಿ, ಆಕಾಶ, ಅಗ್ನಿ, ವಾಯು ಎಲ್ಲಾ ಕಡೆಗೂ ತೊಂದರೆ ಆಗ್ತಿದೆ. ಯುದ್ಧದಲ್ಲಿ ಸಾಯುತ್ತಾರೆ ಅಂದಿದ್ದೆ, ಗುಡ್ಡ ಹೋಗುತ್ತದೆ ಎಂದಿದ್ದೆ, ಭೂಮಿ ಬಿರಿಯುತ್ತೆ ಅಂತ ಹೇಳಿದೆ ಅದರಂತೆ ಆಗಿದೆ ಎಂದರು.
ಇನ್ನೂ ಆಕಾಶದಲ್ಲಿ ದೊಡ್ಡ ಆಘಾತ ಉಂಟಾಗುವಂತ ಘಟನೆ ನಡೆಯಲಿದೆ. ಇನ್ನೂ ಅನಾಹುತವಿದೆ. ಇನ್ನೂ ಮಳೆಯಿದೆ, ಅನಾಹುತವಿದೆ. ಒಂದು ಆಕಾಶ ತತ್ವದ ಪ್ರಕಾರ ತೊಂದರೆ ಆಗಬಹುದು. ಅದು ರಾಜನ ಮೇಲೂ ತೊಂದರೆ ಆಗಬಹುದು ಎಂದರು.
ಮಹಾಭಾರತದಲ್ಲಿ ಕೃಷ್ಣ ಇದ್ದ, ಗಧಾಯುದ್ಧದಲ್ಲಿ ಭೀಮ ಗೆದ್ದ. ಈಗ ಕೃಷ್ಣ ಇಲ್ಲ ದುರ್ಯೋಧನ ಗೆಲ್ಲುತ್ತಾನೆ. ಸೆಂಟ್ರಲ್ಲೂ ಇದೆ, ಸ್ಟೇಟಲ್ಲೂ ಇದೆ. ಸರ್ಕಾರಕ್ಕೆ ಏನೂ ತೊಂದರೆ ಆಗಲ್ಲ ಎಂದರು.