ಮುಂಡಗೋಡ : ಬಂಕಾಪುರ ರಸ್ತೆಯಲ್ಲಿರುವ ಚಹಾ ಅಂಗಡಿಯಲ್ಲಿ ರಾತ್ರಿ ಸರಾಯಿ ಮಾರಾಟ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಅಂಬೇಡ್ಕರ್ ಓಣಿಯ ಪೀಟರ್ ಲಾರೆನ್ಸ ಫರ್ನಾಂಡಿಸ್ ಎಂಬಾತ ಬಂಕಾಪುರ ರಸ್ತೆಯಲ್ಲಿ ಚಹಾ ಅಂಗಡಿ ಹೊಂದಿದ್ದ. ರಾತ್ರಿ 8 ಗಂಟೆ ನಂತರ ಅಲ್ಲಿ ಬರುವವರಿಗೆ ಮದ್ಯ ಮಾರಾಟ ಮಾಡುತ್ತಿದ್ದ. ಸೆ 9ರಂದು ಆತ ಚಹಾ ಅಂಗಡಿಯ ಮುಂದೆ ನಿಂತು ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸ್ ನಿರೀಕ್ಷಕ ರಂಗನಾಥ ನೀಲಮ್ಮನವರ್ ಅಲ್ಲಿಗೆ ತೆರಳಿದ್ದರು. ಆಗ ಆತ ಸಿಕ್ಕಿಬಿದ್ದಿದ್ದು, ಪ್ರಶ್ನಿಸಿದಾಗ ಆತನ ಬಳಿ ಸರಾಯಿ ಮಾರಾಟಕ್ಕೆ ಅನುಮತಿ ಇರಲಿಲ್ಲ.
ಜೊತೆಗೆ ಅಲ್ಲಿ ಆಗಮಿಸುವವರಿಗೆ ಸರಾಯಿ ಸೇವನೆಗೂ ಸಹ ಆತ ಅಲ್ಲಿ ಅವಕಾಶ ನೀಡಿದ್ದ. ಕೂಡಲೇ ಪೊಲೀಸರು ಆತನ ಬಳಿಯಿದ್ದ ಎಲ್ಲಾ ಮದ್ಯದ ಪ್ಯಾಕೇಟ್ ಹಾಗೂ ನೀರಿನ ಬಾಟಲಿಗಳ ಜೊತೆ 350ರೂ ಹಣವನ್ನು ವಶಕ್ಕೆ ಪಡೆದರು.