ದರ್ಶನ್ & ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ : ಚಾರ್ಜ್ ಶೀಟ್ ಪ್ರತಿ ವೈರಲ್!

Spread the love

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ 3991 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಇದೀಗ ಚಾರ್ಜ್ ಶೀಟ್ನ ಪ್ರತಿಯೊಂದು ಇದೀಗ ವೈರಲ್ ಆಗಿದೆ.

ರೇಣುಕಾಸ್ವಾಮಿ ಪವಿತ್ರ ಗೌಡಗೆ ಮೆಸೇಜ್ ಮಾಡಿರುವುದರಿಂದ ಹಿಡಿದು ಆತನನ್ನು ಕಿಡ್ನ್ಯಾಪ್ ಮಾಡಿಕೊಂಡು ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಪಟ್ಟಣಗೆರೆ ಶೆಡ್ಗೆ ತಂದಿದ್ದು, ಅಲ್ಲಿ ರೇಣುಕಾ ಸ್ವಾಮಿಯ ಮೇಲೆ ಉಳಿದ ಆರೋಪಿಗಳು ಹಲ್ಲೆ ಮಾಡಿದ್ದು, ನಂತರ ದರ್ಶನ್ ಪವಿತ್ರ ಗೌಡ ಕೂಡ ರೇಣುಕಾ ಸ್ವಾಮಿಯ ಮೇಲೆ ಹಲ್ಲೆ ಮಾಡಿ, ಆಟ ಮರಣ ಹೊಂದಿದ ನಂತರ ನಂತರ ಶವವನ್ನು ರಾಜ್ಯ ಕಾಲುವಿಗೆ ಬಿಸಾಡಿದ್ದು, ಅನಂತರ ಕೆಲವು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದು ಎಲ್ಲಾ ಅಂಶಗಳನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. 

ಇನ್ನೊಂದೆಡೆ ಪೊಲೀಸರು ಮಹಜರು ನಡೆಸುತ್ತಿರುವ ಸಂದರ್ಭದಲ್ಲಿ ದರ್ಶನ ಶೂ ಕೊಟ್ಟಿರುವುದು ಫೋಟೋ ಇದೀಗ ವೈರಲ್ ಆಗಿದೆ. ದರ್ಶನ್ ಬಳಸಿದ್ದ ಶೂ ವನ್ನು ಪತ್ನಿ ವಿಜಯಲಕ್ಷ್ಮಿ ಅವರು ಬ್ಯಾಗಲ್ಲಿ ಹಾಕಿ ಕೊಡುತ್ತಿರುವ ಫೋಟೋ ಕೂಡ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ದರ್ಶನ ಟಿ-ಶರ್ಟ್ ಕೂಡ ಪೊಲೀಸರು ಮಹಾಜರುಗಳೇ ಪಡೆದುಕೊಂಡಿರುವ ಫೋಟೋ ಕೂಡ ವೈರಲಾಗಿದೆ.