ಮಳಗಿಯಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ತಾಲೂಕ ಮಟ್ಟದ ಕ್ರೀಡಾಕೂಟ

Spread the love

ಮುಂಡಗೋಡ : 14 ವರ್ಷ ವಯೋಮಿತಿಯೊಳಗಿನವರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ತಾಲೂಕಾ ಮಟ್ಟದ ಇಲಾಖಾ ಕ್ರೀಡಾಕೂಟವು ಮಳಗಿಯ ಕೆಪಿಎಸ್ ಮಳಗಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆಯಿತು.  

ಈ ಕಾರ್ಯಕ್ರಮವನ್ನು ಮಳಗಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಕಸ್ತೂರಿ ತಳವಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ, ಕೆಪಿಎಸ್ ಮಳಗಿಯ ಪ್ರಿನ್ಸಿಪಾಲರಾದ ಜಿ.ಎನ್.ಹೆಗಡೆ ಕ್ಷೇತ್ರ ಸಮನ್ವಯಾಧಿಕಾರಿ ಜಿ.ಎನ್.ನಾಯ್ಕ, ಮಳಗಿ ಪಂಚಾಯತಿ ಪಿಡಿಒ ಶ್ರೀನಿವಾಸ್ ಮರಾಠೆ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪ್ರಮೋದ ಢವಳೆ, ಕೆಪಿಎಸ್ ಮಳಗಿ ಉಪಾಧ್ಯಕ್ಷರಾದ ವಿನಾಯಕ್ ಶೆಟ್ಟಿ, ವಿಎಸ್ಎಸ್ ಬ್ಯಾಂಕಿನ ಅಧ್ಯಕ್ಷರಾದ ಚಂದ್ರಗೌಡ ಪಾಟೀಲ್, ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷರಾದ ಚೇತನ್ ನಾಯ್ಕ, ಕೃಷ್ಣಮೂರ್ತಿ ನಾಡಿಗ, ಆರ್.ಜಿ.ನಾಯ್ಕ,  ಕೃಷ್ಣ ಭರತನಹಳ್ಳಿ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರದೀಪ್ ಕುಲಕರ್ಣಿ, ಶಿಕ್ಷಕ ಕೆ.ಕೆ.ಕರವಿನಕೊಪ್ಪ,  ಹನುಮಂತ ವಡ್ಡರ, ರಾಜೇಂದ್ರ ಗಾಣಿಗ, ಮಳಗಿ ಗ್ರಾಮ ಪಂಚಾಯತ ಸದಸ್ಯರು ಮುಂತಾದವರಿದ್ದರು.