ಮಲೆನಾಡು ಸ್ಲೀಪರ್ ಸೆಲ್‌ಗಳ ತಾಣವಾಗ್ತಿದೆ – ಭಯೋತ್ಪಾದಕ ಕೃತ್ಯ ಎಸಗಲು ಇಲ್ಲಿ ತರಬೇತಿ ನೀಡಲಾಗ್ತಿದೆ: ಸಿ.ಟಿ ರವಿ ಬಾಂಬ್‌

Spread the love

ಮೈಸೂರು: ಮಲೆನಾಡು ಸ್ಲೀಪರ್ ಸೆಲ್‌ಗಳ ತಾಣವಾಗುತ್ತಿದೆ, ಭಯೋತ್ಪಾದಕ ಕೃತ್ಯ (Terrorist activity) ಎಸಗಲು ಇಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ ರವಿ ಬಾಂಬ್‌ ಸಿಡಿಸಿದ್ದಾರೆ. 

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರಿನಲ್ಲಿ (Chikkamagaluru) ಪ್ಯಾಲೆಸ್ತೀನ್‌ ಬಾವುಟ ಹಾರಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ.  

ಮಲೆನಾಡು ಸ್ಲೀಪರ್ ಸೆಲ್‌ಗಳ ತಾಣವಾಗುತ್ತಿದೆ, ಭಯೋತ್ಪಾದಕ ಕೃತ್ಯ ಎಸಗಲು ಇಲ್ಲಿ ತರಬೇತಿ ನೀಡಲಾಗುತ್ತಿದೆ. ಈ ಹಿಂದೆ ಕೊಪ್ಪದಲ್ಲಿ ಯಾಸೀನ್ ಭಟ್ಕಳ್ ನೇತೃತ್ವದಲ್ಲಿ ಭಯೋತ್ಪಾದಕ ತರಬೇತಿ ಶಿಬಿರ ನಡೆಸಲಾಗುತ್ತಿತ್ತು. ಅದನ್ನ ಪತ್ತೆ ಬಜರಂಗದಳ ಪತ್ತೆ ಮಾಡಿತ್ತು. ಇದು ದೇಶಕ್ಕೆ ಅತ್ಯಂತ ಅಪಾಯಕಾರಿ. ಇದರ ಹಿಂದಿನ ಜಾಲಾವನ್ನ ತನಿಖೆಯಿಂದ ಪತ್ತೆ ಹಚ್ಚಬೇಕು. ದೇಶ ವಿರೋಧಿ ಚಟುವಟಿಕೆ ನಡೆಸಿದವರನ್ನ ಸಮಗ್ರ ತನಿಖೆ ನಡೆಸಬೇಕಿತ್ತು. ಆದರೆ ಯಾರೋ ಪ್ರಭಾವಿಗಳು ಹೇಳಿದ್ದಾರೆಂದು ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ, ಇದು ಸರಿಯಲ್ಲ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. 

ಬಂಧಿಸುವ ಬದಲು ಬಿರಿಯಾನಿ ಊಟ ಹಾಕಿದ್ದಾರೆ:
ಇದೇ ವೇಳೆ‌ ಬಿಜೆಪಿ ಶಾಸಕ ಮುನಿರತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮುನಿರತ್ನ ಆಡಿಯೋ ಪ್ರಕರಣದ ಹಿಂದೆ ಟೂಲ್ ಕಿಟ್ ಕೆಲಸ ಮಾಡಿದೆ. ಹನಮಂತಪ್ಪ ಆಡಿಯೋಯಿಂದ ಇದು ಸಾಬೀತಾಗಿದೆ. ಕಾಂಗ್ರೆಸ್ ತಮ್ಮ ಪಕ್ಷದವರಿಗೆ ಒಂದು ನ್ಯಾಯ ಬಿಜೆಪಿಗೆ ಒಂದು ನ್ಯಾಯ ಅನ್ನೋ ನೀತಿ ಅನುಸರಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕ ಚೆನ್ನರೆಡ್ಡಿ ಮೇಲೂ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಆತನನ್ನು ಬಂಧಿಸುವ ಬದಲು ಸಿಎಂ ತಮ್ಮ ಮನೆಯಲ್ಲಿ ಬಿರಿಯಾನಿ ಊಟ ಹಾಕಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.