ಬೇಲಿಗೆ ಸೀರೆ ಹಾಕಿ ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಣೆ

Spread the love


ಮುಂಡಗೋಡ : ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ವಿಶೇಷವಾದ ಮಾರ್ಗವನ್ನು ಕಂಡು ಹಿಡಿಯುವ ಮೂಲಕ ತಮ್ಮ ಬೆಳೆಯನ್ನು ರಕ್ಷಣೆಗೆ ಮುಂದಾಗಿದ್ದಾರೆ.ತಾಲೂಕಿನ ರೈತರಿಗೆ ಭತ್ತದ ಪ್ರಮುಖ ಬೆಳೆಯಾಗಿದ್ದು ಬಹುತೇಕ ರೈತರು ಭತ್ತದ ಬೆಳೆಯ ನ್ನು ಬೆಳೆಯುತ್ತಾರೆ.
ಆದರೆ ಮಳೆಯ ಏರುಪೇರಿನಿಂದ ಕೆಲ ವರ್ಷಗಳಿಂದ ತಾಲೂಕಿನ ರೈತರು ಗೋವಿನಜೋಳವನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ. ಈ ಬಾರಿ ತಾಲೂಕಿನಲ್ಲಿ ಐದುಸಾವಿರ ಹೆಕ್ಟರಗೂ ಅಧಿಕ ಪ್ರದೇಶದಲ್ಲಿ ಗೋವಿನಜೋಳ ಬೆಳೆ ಬೆಳೆಯಲಾಗಿದೆ.
ಗೋವಿನಜೋಳ ಬೆಳೆಗಾರರು ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಗದ್ದೆಯ ಸುತ್ತಲು ಬೇಲಿಯನ್ನು ಹಾಕುತ್ತಾರೆ. ಬೇಲಿಗೆ ಸೀರೆಗಳನ್ನು ಕಟ್ಟಲಾಗುತ್ತದೆ. ಈ ಸೀರೆಗಳು ಗಾಳಿ ಬೀಸಿದಾಗ ಅಲುಗಾಡುತ್ತವೆ. ಇದರಿಂದಾಗಿ ಗದ್ದೆಗೆ ದಾಳಿ ಮಾಡಲು ಬಂದು ಕಾಡು ಪ್ರಾಣಿಗಳು ಸೀರೆ ಅಲುಗಾಡುವುದನ್ನು ಕಂಡು ಪ್ರಾಣ ಭಯದಿಂದ ಓಡಿ ಹೋಗುತ್ತವೆ. ಆದ್ದರಿಂದ ಗೋವಿನಜೋಳ ಬೆಳೆಗಾರರು ತಮ್ಮ ಗದ್ದೆಗಳಿಗೆ ಸೀರೆಗಳನ್ನು ಬೇಲಿಗೆ ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.
ಮುAಡಗೋಡ ಸಂತೆಯಲ್ಲಿ ಕಳೆಪೆ ಮಟ್ಟದ ಹಾಗೂ ಹಳೆಯ ಸೀರೆಗಳು ಮಾರಾಟಕ್ಕೆ ಬರುತ್ತವೆ. ಗೋವಿನಜೋಳ ಬೆಳೆಗಾರರು ಇಂತಹ ಸೀರೆಗಳನ್ನು ೧೫-೨೦ಗೆ ಒಂದು ಸೀರೆಯನ್ನು ಖರೀದಿಸಿ ಗದ್ದೆಯ ಬೇಲಿಗೆ ಹಾಕುವುದು ಈಗ ಸಾಮಾನ್ಯವಾಗಿದೆ.