
ಮುಂಡಗೋಡ : ದಿ.16ರಂದು ನಡೆಯಲಿರುವ 7ನೇ ಮುಂಡಗೋಡ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ ಬುಧವಾರ ಬಿಡುಗಡೆ ಮಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕಾ ಕ.ಸಾ.ಪ. ಅಧ್ಯಕ್ಷರಾದ ವಸಂತ ಕೊಣಸಾಲಿ ವಹಿಸಿದ್ದರು.
ಈ ಸಂದರ್ಭದಲ್ಲಿ ಕ.ಸಾ.ಪ. ಮಾಜಿ ಅಧ್ಯಕ್ಷರಾದ ಡಾ.ಪಿ.ಪಿ.ಛಬ್ಬಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಎಸ್.ಕೆ.ಬೋರಕರ, ಶಶಿಕಲಾ ಮಿರಜಕರ, ಜಗದೀಶ್ ಕಾನಡೆ, ಕ.ಸಾ.ಪ. ತಾಲೂಕಾ ಗೌರವ ಕಾರ್ಯದರ್ಶಿ ಎಸ್.ಡಿ.ಮೂಡಣ್ಣವರ್ ವೇದಿಕೆ ಮೇಲಿದ್ದರು. ಡಾ.ನಾಗೇಂದ್ರ ಮಾತನಾಡಿದರು.
ಮಲ್ಲಮ್ಮ ನೀರಲಗಿ ಪ್ರಾರ್ಥನೆ ಗೀತೆ ಹಾಡಿದರು. ಕ.ಸಾ.ಪ. ತಾಲೂಕಾ ಗೌರವ ಕಾರ್ಯದರ್ಶಿ ವಿನಾಯಕ ಶೇಟ ಕಾರ್ಯಕ್ರಮ ನಿರೂಪಿಸಿದರು.