ಕರ್ನಾಟಕವನ್ನು ರಾಜ್ಯ ಸರ್ಕಾರ ‘ಪಾಕಿಸ್ತಾನ’ ಮಾಡಲು ಹೊರಟಿದೆ: ಸಂಸದ ತೇಜಸ್ವಿ ಸೂರ್ಯ ವಾಗ್ಧಾಳಿ

Spread the love

ಬೆಂಗಳೂರು: ಕರ್ನಾಟಕವನ್ನು ರಾಜ್ಯ ಸರ್ಕಾರ ಪಾಕಿಸ್ತಾನ ಮಾಡಲು ಹೊರಟಿದೆ. ವಿಜಯಪುರದ ಒಂದು ಜಿಲ್ಲೆಯ 15 ಸಾವಿರ ಎಕರೆ ರೈತರ ಜಮೀನನ್ನು ವಕ್ಫ್ ಬೋರ್ಡ್ ನನ್ನದು ಎಂದು ಹೇಳಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಿದೆ. ಸಚಿವ ಜಮೀರ್ ಅಹ್ಮದ್ ಅವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ರೈತರ ಜಮೀನನ್ನು ವಕ್ಫ್ ಬೋರ್ಡ್ ಬರೆಯಿಸಲು ಹೊರಟಿದ್ದಾರೆ ಎಂಬುದಾಗಿ ಸಂಸದ ತೇಜಸ್ವಿ ಸೂರ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

ಇಂದು ಬೆಂಗಳೂರಿನ ಜಯನಗರದ ಸಂಸದರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ವಿಜಯಪುರ ಜಿಲ್ಲೆ ತ್ರಿಕೋಟ ತಾಲೂಕಿನ ಹೊನ್ನವಾಡ ಗ್ರಾಮದಲ್ಲಿ 11,500 ಎಕರೆ ಪ್ರದೇಶದ ರೈತರ ಜಮೀನನ್ನು ಸರ್ಕಾರ ರಾತ್ರೋ ರಾತ್ರಿ ವಕ್ಫ್ ಬೋರ್ಡ್ ಗೆ ನೀಡಲು ಹೊರಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಕ್ಪ್ ಬೋರ್ಡ್ ಕಾನೂನಿಗೆ ತಿದ್ದುಪಡಿಯನ್ನು ತರಲು ಹೊರಟಿರುವ ಕಾರಣಕ್ಕೆ ಸಚಿವ ಜಮೀರ್ ಅವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ ಎಂಬುದಾಗಿ ಗುಡುಗಿದರು.

ಮುಸ್ಲಿಂರು ಕಾಂಗ್ರೆಸ್ ಗೆ ಮತ ಹಾಕುತ್ತಾರೆ ಎಂಬ ಕಾರಣದಿಂದ ಹಿಂದೂಗಳ ಜಮೀನನ್ನು ಮುಸ್ಲಿಮರಿಗೆ ಹೊರಟಿದೆ. ವಿಜಯಪುರ ಜಿಲ್ಲೆಯಲ್ಲಿ 15 ಸಾವಿರ ಎಕರೆ ಜಮೀನನ್ನು ವಕ್ಫ್ ಬೋರ್ಡ್ ನೀಡುಲು ಹೊರಟಿರುವ ಮರ್ಮ ಏನು? ಎಂದು ಪ್ರಶ್ನಿಸಿದರು. ಅಲ್ಲದೇ ಇದರ ವಿರುದ್ದು ಬಿಜೆಪಿ ಹೋರಾಟ ಮಾಡಲಾಗುತ್ತದೆ. ಕಾನೂನಾತ್ಮಕ ಹೋರಾಟ ರೂಪಿಸಲಾಗುವುದು. ಯಾವುದೇ ರೈತರು ವಕ್ಫ್ ಬೋರ್ಡ್ ನಿಂದ ಅಸ್ತಿ ಕಳೆದು ಕೊಂಡರೆ ನನ್ನ ಕಚೇರಿ ಸಂಪರ್ಕಿಸಿ ಎಂಬುದಾಗಿ ನಾಡಿನ ರೈತರಲ್ಲಿ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದರು.