ರಾಜ್ಯ ಬಿಜೆಪಿಯಲ್ಲಿ ಮುಂದುವರೆದ ‘ಬಣ’ ಬಡಿದಾಟ : ಪ್ರತ್ಯೇಕ ಸಭೆ ನಡೆಸಿ ಬಿವೈವಿಗೆ ಸೆಡ್ಡು ಹೊಡೆದ ನಾಯಕರು

Spread the love

ಬೆಂಗಳೂರು : ಬಿಜೆಪಿಯಲ್ಲಿ ಬಣ ರಾಜಕೀಯ ಇದೀಗ ಮತ್ತೆ ಮುಂದುವರೆದಿದ್ದು, ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಅತೃಪ್ತ ನಾಯಕರು ಭೇಟಿ ನೀಡಿ ಸಭೆ ನಡೆಸಿದ್ದಾರೆ. ಅರವಿಂದ್ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ ಸೇರಿದಂತೆ ಅತೃಪ್ತ ಬಣದ ನಾಯಕರು ಭೇಟಿ ನೀಡಿ, ವಕ್ಫ್ ಹೋರಾಟದ ಕುರಿತು ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಸದಾಶಿವ ನಗರದಲ್ಲಿರುವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸುಮಾರು 20 ನಿಮಿಷಗಳ ಕಾಲ ಅತೃಪ್ತ ನಾಯಕರು ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ ಎನ್ನಲಾಗಿದೆ ಈ ಮೂಲಕ ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರಗೆ ಈ ನಾಯಕರು ಸೆಡ್ಡು ಹೊಡೆದಿದ್ದಾರೆ. ಭೇಟಿ ಬಳಿ ಒಂದೇ ಕಾರಿನಲ್ಲಿ ನಾಯಕರು ತೆರಳಿದ್ದಾರೆ ಹೀಗಾಗಿ ಅತೃಪ್ತ ನಾಯಕರು ಸಭೆ ಇದೀಗ ತೀವ್ರ ಕುತೂಹಲ ಮೂಡಿಸಿದೆ ಎಂದು ಹೇಳಲಾಗುತ್ತಿದೆ.