ಕಾತೂರ ಮೆಹಬೂಬ ಸುಭಾನಿ ದರ್ಗಾಕ್ಕೆ ಶಾಸಕ ಹೆಬ್ಬಾರ ಭೇಟಿ

Spread the love

ಮುಂಡಗೋಡ : ತಾಲೂಕಿನ ಕಾತೂರ ಗ್ರಾಮದಲ್ಲಿ ಅಹಲೆ ಸುನ್ನತ ಮುಸ್ಲಿಂ ಜಮಾತಿನವರು ಹಾಗೂ ಗ್ರಾಮಸ್ಥರು ಕಾತೂರ ಗ್ರಾಮದಲ್ಲಿ ಮೆಹಬೂಬ ಸುಭಾನಿ ದರ್ಗಾದಲ್ಲಿ ಸಾರ್ವಜನಿಕವಾಗಿ ಗ್ಯಾರವಿ ಧಾರ್ಮಿಕ ಕಾರ್ಯಕ್ರಮಗಳಾದ ಬುಧವಾರ ಸಂಜೆ ಗಲೀಫ್, ಗುರುವಾರ ಬೆಳಗಿನ ನಮಾಜ ಮುಗಿದ ನಂತರ ಸಂದಲ್ ಹಾಗೂ ಶುಕ್ರವಾರ ರಾತ್ರಿ ಸಾರ್ವಜನಿಕರಿಗೆ ಅನ್ನಪ್ರಸಾದ(ಲಂಗರ್) ಕಾರ್ಯಕ್ರಮ ಹಮ್ಮಿಕೊಂಡಿರುವ ಪ್ರಯುಕ್ತ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ ಭಕ್ತರ ಕರೆಗೆ ಓಗೊಟ್ಟು ಬುಧವಾರ ಕಾತೂರ ಗ್ರಾಮದ ಹಜರತ ಮಹಬೂಬ ಸುಭಾನಿ ದೇವರ ದರ್ಗಾಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದು ಎಲ್ಲರ ಒಳಿತಿಗಾಗಿ ಪ್ರಾರ್ಥಿಸಿ ಸರ್ವರಲ್ಲಿ ಭಾತೃತ್ವ ಬೆಳೆಯಲಿ ಎಂದು ದೇವರಲ್ಲಿ ಬೇಡಿಕೊಂಡರು. 

ನಂತರ ಅಹಲೆಸುನ್ನತ ಜಮಾತಿನವರು ಹಾಗೂ ಗ್ರಾಮಸ್ಥರು ಶಾಸಕರಿಗೆ ಶಾಲು ಹೊದಿಸಿ ಶಾಸಕರಿಗೆ ಸನ್ಮಾನ ಮಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೆಹಳ್ಳಿ ಹಾಗೂ ಪತ್ರಕರ್ತ ನಜೀರುದ್ದಿನ ತಾಡಪತ್ರಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಖಾದರಅಲಿ ಗುಳೇದಕೊಪ್ಪ(ಕಾತೂರ ನಾನಾ), ರಾಮಕೃಷ್ಣ ಮೂಲಿಮನಿ, ಖುರ್ಷಿದ ಬಾಳೂರ, ಕಾತೂರ ಸೊಸೈಟಿ ಅಧ್ಯಕ್ಷ ಶಿವಾಜಿ ಶಿಂದೆ, ಮುನ್ನಾ ಮರಗಡಿ, ಸೊಸೈಟಿ ನಿರ್ದೇಶಕ ನಿತೀನ ರಾಯ್ಕರ್, ದುಲೇಃ ಭಕ್ಷ ಸವಣೂರ, ಕಾತೂರ ಪಂಚಾಯತ್ ಸದಸ್ಯ ಪೀರಪ್ಪ ಲಕ್ಮಾಪೂರ, ಶಫೀ ಬೊಮ್ಮನಳ್ಳಿ, ಪತ್ರಕರ್ತ ಪಾಂಡುರಂಗ ಪಾಟೀಲ, ಅಲ್ತಾಫ ನೆಗಳೂರ ಚಂದ್ರಕಾಂತ ಅರಬಾಳ, ಖಲಂದರ ನೆಗಳೂರ, ಗಂಗಾಧರ ಹಿರೇಮಠ, ಮಲ್ಲಿಕ ಮುಜಾವರ ಕೃಷ್ಣ ವಾಸನ್, ಮಹಬೂಶಾ ಮುಜಾವರ ಮುಂತಾದವರಿದ್ದರು.