ರಾಜ್ಯದಲ್ಲಿ ಮುಂದುವರೆದ `ಮೈಕ್ರೋ ಫೈನಾನ್ಸ್’ ಕಿರುಕುಳ : ಸಾಲ ಕಟ್ಟದಿದ್ದಕ್ಕೆ ಮನೆಗೆ ಬೀಗ ಹಾಕಿದ `IDFC’ ಬ್ಯಾಂಕ್ ಸಿಬ್ಬಂದಿ.!

Spread the love

ಚಿತ್ರದುರ್ಗ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚಾಗಿದ್ದು, ಈ ನಡುವೆ ಚಿತ್ರದುರ್ಗದಲ್ಲಿ ಐಡಿಎಫ್ ಸಿ ಬ್ಯಾಂಕ್ ಸಿಬ್ಬಂದಿ ಸಾಲ ಕಟ್ಟದಿದ್ದಕ್ಕೆ ಮನೆಗೆಬೀಗ ಹಾಕಿ ಅಮಾನವೀಯವಾಗಿ ವರ್ತಿಸಿರುವ ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಕೊಳಹಾಳ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಾಲ ಕಟ್ಟದಿದ್ದಕ್ಕೆ ಮನೆಗೆ ಬೀಗ ಹಾಕಿ ಐಡಿಎಫ್ ಸಿ ಬ್ಯಾಂಕ್ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿರುವ ಘಟನೆ ನಡೆದಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಯಾದಗಿರಿಯಲ್ಲಿ ವಿಧವೆ ಮಹಿಳೆ ಮನೆ ಸೀಜ್ ಮಾಡಿ ಜಪ್ತಿ ಮಾಡಿದ ಮೈಕ್ರೋ ಫೈನಾನ್ಸ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚಾಗಿದ್ದು, ಸಾಲದ ಕಂತು ಕಟ್ಟಲಾಗದ ವಿಧವೆ ಮಹಿಳೆಯ ಮನೆ ಜಪ್ತಿ ಮಾಡಿದ ಮೈಕ್ರೋ ಫೈನಾನ್ಸ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಯಾದಗಿರಿ ತಾಲೂಕಿನ ಯಡಹಳ್ಳಿ ಗ್ರಾಮದ ಗೀತಮ್ಮ ಎಂಬುವರ ಮನೆಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಜಪ್ತಿ ಮಾಡಿದ್ದರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಸೂಚನೆ ಮೇರೆಗೆ ಪೊಲೀಸರು ತಕ್ಷಣವೇ ಮೈಕ್ರೋ ಫೈನಾನ್ಸ್ ವಿರುದ್ಧ ಪ್ರಕರಣ ದಾಖಲಿಸಿ ಮನೆಯ ಬೀಗ ತೆರೆಸಿದ್ದಾರೆ. ಘಟನೆ ಸಂಬಂಧ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.