ಮುಂಡಗೋಡ : ತಾಲೂಕಿನ ಜೇನುಮುರಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 14 ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ, ಬಿಸಿಯೂಟ ಕಾಯ೯ಕತ೯ರಿಗೆ, ಶಿಕ್ಷಕರಿಗೆ ಮತ್ತು ಪಾಲಕರಿಗೆ ಅಗ್ನಿಶಾಮಕ ದಳದ ಮುಂಡಗೋಡ ಠಾಣೆಯ ಠಾಣಾಧಿಕಾರಿ ಚಂದ್ರಪ್ಪ ಪೂಜಾರ ತಮ್ಮ ಸಿಬ್ಬಂದಿ ಗಳೊಂದಿಗೆ ಆಗಮಿಸಿ ಅಗ್ನಿ ಸುರಕ್ಷತೆ, ಅನಾಹುತ ಮುಂಜಾಗ್ರತಾ ಕ್ರಮಗಳು ಮತ್ತು ಸಿಲಿಂಡರ್ ಬೆಂಕಿ, ಹುಲ್ಲಿನ ಬಣವೆ, ಕಾಡಿನ ಕಾಡ್ಗಿಚ್ಚು, ನಂದಿಸುವಿಕೆ ಕುರಿತು ಮಾಹಿತಿ ತಿಳಿಸಿ ಅರಿವು ಮೂಡಿಸಿದರು.
ಮಕ್ಕಳು ಪಾಲಕರಿಗೆ ಬೆಂಕಿ ನಂದಿಸುವ ವಿಧಾನಗಳ ಸಚಿತ್ರ ವಿವರವುಳ್ಳ ಪುಸ್ತಕ ವಿತರಿಸಿದರು. ಇದರೊಂದಿಗೆ ಭಾರತದ ಪೂವ೯ ಪ್ರದಾನ ಮಂತ್ರಿ ಜವಾಹರಲಾಲ್ ನೆಹರುರವರ ಜನ್ಮ ದಿನವನ್ನು ನೆನೆದು ಅವರು ಮಕ್ಕಳ ಮೇಲೆ ಇಟ್ಟು ಕೊಂಡ ಪ್ರೀತಿ ಯನ್ನು ಮಕ್ಕಳ ದಿನಾಚರಣೆಯನ್ನಾಗಿ ಭಾರತ ಸರಕಾರ ಪ್ರತಿ ವಷ೯ ಆಚರಿಸುತ್ತದೆ ಎಂದು ಶಾಲೆಯ ಶಿಕ್ಷಕರಾದ ವಸಂತ ರಾಥೋಡ್ ತಿಳಿಸಿದರು.
ಈ ದಿನ ಮಕ್ಕಳ ದಿನವೆಂದು ಮಕ್ಕಳಿಗೆ ಆಟೋಟಗಳನ್ನು ನಡೆಸಿಕೊಟ್ಟರು. ಶಾಲೆಯ ಮುಖ್ಯಾಧ್ಯಾಪಕರಾದ ಜಯಶ್ರೀ ದೈವಜ್ಞ ಅಧ್ಯಕ್ಷತೆ ವಹಿಸಿದ್ದರು. ಪಾಲಕರೊಂದಿಗೆ ಎಲ್.ವಿ.ಕೆ. ಸಿಬ್ಬಂದಿಗಳಾದ ಲಕ್ಷ್ಮಣ ಮುಳೆ, ಅಗ್ನಿ ಶಾಮಕ ಸಿಬ್ಬಂದಿ ಗಳಾದ ಅಮರ ಕಾಂಬಳೆ, ಚಂದ್ರಪ್ಪ ಲಮಾಣಿ, ಸಂತೋಷ ಪಾಟೀಲ, ದುಗ೯ಪ್ಪ ಹರಿಜನ, ವಿಜಯ ಅಮ್ಮಣಗಿ, ಅರುಣ ಮುಲಗೆ ಹಾಜರಿದ್ದರು.