ಹುಬ್ಬಳ್ಳಿ: ಅಪ್ಪ-ಮಕ್ಕಳಿಬ್ಬರು ಒಬ್ಬೊರನ್ನ ಕೈ ಬಿಡ್ತಾರೆ, ಇದೇ ದಂಧೆ ಮಾಡ್ತಾರೆ. ವಕ್ಫ್ ಬೋರ್ಡ್ ಬಗ್ಗೆ ಕಾಳಜಿ ಇಲ್ಲ. ಮುಡಾ, ವಾಲ್ಮೀಕಿ ಹಗರಣಗಳ ಬಗ್ಗೆ ಕಾಳಜಿ ಇಲ್ಲ. ಅವರ ಕಾಳಜಿ ಸಿಎಂ ಹೇಗೆ ಆಗಬೇಕು? ಅಪ್ಪನ ಹಾಗೇ ಹೇಗೆ ಲೂಟಿ ಮಾಡಬೇಕು ಅಂತ ಅಷ್ಟೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಮತ್ತೊಮ್ಮೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ಹುಬ್ಬಳ್ಳಿಯಲ್ಲಿ ಜನ ಜಾಗೃತಿ ತಂಡದಲ್ಲಿ ಪ್ರತಾಪ್ ಸಿಂಹ ಕೈ ಬಿಟ್ಟ ವಿಚಾರವಾಗಿ ಮಾತನಾಡಿದ ಅವರು, ಈ ತಿಂಗಳ 25 ರಿಂದ ಡಿ.25 ರ ತನಕ ಜನ ಜಾಗೃತಿ ಮಾಡುತ್ತೇವೆ.
ನಮ್ಮನ್ನು ನೋಡಿ ಅವರದ್ದು ಮೂರು ತಂಡ ಮಾಡಿದ್ದಾರೆ. ಅದಕ್ಕೆ ಡೆಟ್ ಇಲ್ಲ ಏನು ಇಲ್ಲ ಅವ್ವ-ಇಲ್ಲ ಅಪ್ಪ ಇಲ್ಲ. ಯತ್ನಾಳ್ ಮಾಡಿದ್ದಾರೆ ಅಂತ ಅವರದ್ದು ಒಂದು ಟೀಮ್ ಮಾಡಿದ್ದಾರೆ ಎಂದರು.
ಮಾಜಿ ಸಚಿವ ರೇಣುಕಾಚಾರ್ಯ ಕುರಿತು ಪ್ರಶ್ನೆ ಮಾಡಿದಕ್ಕೆ, ಅಂತವನ ಹೆಸರು ಯಾಕೆ ತೆಗೆದುಕೊಳ್ಳತ್ತಿರಿ. ಒಳ್ಳೆಯ ರಾಜಕಾರಣಿಗಳ ಸಂದರ್ಶನ ಮಾಡಿ ಹಾದಿ, ಬಿದಿ ಹಂದಿ, ಪಂದಿಗೆಲ್ಲಾ ಯಾಕೆ ಮಾತನಾಡುತ್ತಿರಿ? ಇಂತದಕ್ಕೆಲ್ಲಾ ಪ್ರತಿಕ್ರಿಯೆ ನೀಡೋದಿಲ್ಲಾ ಎಂದು ಕಿಡಿಕಾರಿದರು.
ಕುದುರೆ ವ್ಯಾಪಾರದ ಬಗ್ಗೆ ವಿಜಯೇಂದ್ರ ಮತ್ತು ಡಿಕೆ ಶಿವಕುಮಾರ್‌ಗೆ ಮಾತ್ರ ಗೊತ್ತು. ಯಾರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಅಂತ ಸಿದ್ದರಾಮಯ್ಯ ಹೇಳಲಿ. ಜವಾಬ್ದಾರಿ ಹುದ್ದೆಯಲ್ಲಿ ಇದ್ದವರು ಬೇಕಾಬಿಟ್ಟಿಯಾಗಿ ಮಾತನಾಡಬಾರದು. ಹಾಗೆ ಮಾತನಾಡುವುದಕ್ಕೆ ಸಿಎಂ ಬಳಿ ಏನು ಸಾಕ್ಷಿಯಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆ ಮಾಡಿದ್ದಾರೆ.
ಕುದುರೆ ವ್ಯಾಪಾರದ ಬಗ್ಗೆ ಸಿಎಂ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯಿಂದ ಯಾರು 50 ಕೋಟಿ ರೂ. ಕೋಡ್ತಾರೆ ಹಾಗಿದ್ರೆ ನಿಮ್ಮ ಗುಪ್ತಚರ ಇಲಾಖೆಯ ಅಧಿಕಾರಗಳು ಏನು ಮಾಡುತ್ತಿದ್ದಾರೆ. ಇದನ್ನು ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆ ದೇವ್ರಾಣೆ ಮಾಡಿ ಹೇಳುತ್ತೇವೆ ಆಪರೇಷನ್ ನಮಗೆ ಅವಶ್ಯಕತೆ ಇಲ್ಲ. ವಿರೋಧ ಪಕ್ಷದಲ್ಲೆ ಕೂರುತ್ತೆವೆ. ಐವತ್ತು ಆರವತ್ತು ಜನ ತಂದು ನಾವು ಸರ್ಕಾರ ಮಾಡಿದ್ರೆ ನಾವು ಅವರಪ್ಪನಿಗಿಂತ ಭ್ರಷ್ಟರಾಗುತ್ತೆವೆ. ನಾವು ಬೇಕಿದ್ದರೆ ಚುನಾವಣೆಗೆ ಹೋಗುತ್ತೇವೆ. ಒಂದು ವೇಳೆ ಬಿಜೆಪಿಯಲ್ಲಿ ಆಪರೇಷನ್ ಮಾಡುತ್ತಿದ್ದರೂ ಅದಕ್ಕೆ ಬೆಂಬಲ ನೀಡುವುದಿಲ್ಲ. ಜನರ ಮತ್ತು ವಾಲ್ಮೀಕಿ ಹಣ ಲೂಟಿ ಮಾಡಿರುವ ಅಯ್ಯೋಗರ ಜೊತೆಗೆ ನಾವು ಸರ್ಕಾರ ಮಾಡುವುದಿಲ್ಲ ಎಂದಿದ್ದಾರೆ.
ಜಮೀರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ವೈಯಕ್ತಿಕ ಟೇಕೆ ಮಾಡಬಾರದು ಯಾರ ಬಣ್ಣ ಕೆಂಪೋ ಯಾರ ಬಣ್ಣ ಕಪ್ಪೋ, ರಾಜಕೀಯವಾಗಿ ಎದುರಿಸಿ. ಧೈರ್ಯ ಇದ್ರೆ ಹೋಗಿ ಜನರ ಮುಂದೆ ಹೇಳಬೇಕು. ಕರಿ, ಬಿಳಿ ಮಾತನಾಡೋದು ಸರಿಯಲ್ಲಾ, ವರ್ಣ ಜಾತಿ ನಿಂದನೆ ಮಾಡಬಾರದು ಎಂದು ಹೇಳಿದರು.