ಬೆಳಗಾವಿ : ತಾಳಿ ಕಟ್ಟಿದ ಗಂಡನ ಕೊಲೆಗೆ ಪತ್ನಿಯೊಬ್ಬಳು ಸುಪಾರಿ ನೀಡಿದ್ದಾಳೆ. ಇದೀಗ ಪತಿ ಹತ್ಯೆಗೆ ಸುಪಾರಿ ನೀಡಿದ್ದ ಪತ್ನಿ ಸೇರಿ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊನ್ನೂರಿನಲ್ಲಿ ನಡೆದಿದೆ.
ಹೌದು ನಿನ್ನೆ ಕೊಡಲಿಯಿಂದ ಕೊಚ್ಚಿ ನಿಂಗಪ್ಪ ಅರವಳಿ (41) ಕೊಲೆಯಾಗಿದ್ದು, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಒಂದುವರೆ ಲಕ್ಷ ರೂಪಾಯಿಗೆ ಪತ್ನಿ ನೀಲಮ್ಮ (38) ಸುಪಾರಿ ಕೊಟ್ಟಿದ್ದಾಳೆ.ಪತ್ನಿ ನೀಲಮ್ಮ ಆಕೆಯ ಪ್ರಿಯಕರ ಮಹೇಶ್ ನಿಂದ ಕೊಲೆಗೆ ಸುಪಾರಿ ನೀಡಲಾಗಿತ್ತು. ಗಜಮನಾಳ ಗ್ರಾಮದ ಯಲ್ಲಪ್ಪ ಎಂಬಾತನಿಗೆ ಸುಪಾರಿ ನೀಡಿದ್ದರು.
ಮನೆಯ ಕಟ್ಟೆಯ ಮೇಲೆ ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ನಿನ್ನೆ ಗಲಾಟೆ ಮಾಡಿಕೊಂಡು ನಿಂಗಪ್ಪ ಮನೆಯ ಕಟ್ಟೆಯ ಮೇಲೆ ಮಲಗಿದ್ದ. ಈ ವೇಳೆ ಬೈಕ್ ನಲ್ಲಿ ಬಂದು ಯಲ್ಲಪ್ಪ ನಿಂಗಪ್ಪನನ್ನು ಭೀಕರವಾಗಿ ಕೊಲೆಗೈದಿದ್ದ. ನಿಂಗಪ್ಪನನ್ನು ಯಲ್ಲಪ್ಪ ಕೊಲೆ ಮಾಡಿ ಪರಾರಿಯಾಗಿದ್ದ. ಪತಿ ನಿಂಗಪ್ಪ ಹತ್ಯೆಗೆ ಸುಪಾರಿ ನೀಡಿದ್ದ ಪತ್ನಿ ನೀಲಮ್ಮ ಅರವಳ್ಳಿ, ಆಕೆಯ ಪ್ರಿಯಕರ ಮಹೇಶ್ ಗೂಳನ್ನವರ್ ಹಾಗೂ ಹಂತಕ ಯಲ್ಲಪ್ಪ ಇದೀಗ ಸೆರಿಯಾಗಿದ್ದಾರೆ.ನೇಸರಗಿ ಠಾಣೆ ಪೋಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.