ಒಣಗಿಸಿದ ಅಡಿಕೆ ಕಳ್ಳರ ಪಾಲು..!

Spread the love

ಮುಂಡಗೋಡ : ಅಡಿಕೆ ವ್ಯಾಪಾರ ನಡೆಸುವ ಪ್ರಭು ಪಾಟೀಲ್ ಅವರು ಒಣಗಿಸಿದ ಅಡಿಕೆ ಕಳ್ಳರ ಪಾಲಾಗಿದೆ. ಡಿ.21ರ ರಾತ್ರಿ ಈ ಕಳ್ಳತನ ನಡೆದಿದೆ.

ಮುಂಡಗೋಡ ತಾಲೂಕಿನ ಶಿಂಗನಳ್ಳಿ ಗ್ರಾಮದ ಹನುಮಂತ ನಾರ್ವೇಕರ್ ಅವರ ಹೊಲದಲ್ಲಿ ಪ್ರಭು ಪಾಟೀಲ ಅಡಿಕೆ ಒಣಗಿಸಿದ್ದರು. 4 ಲಕ್ಷರೂ. ಮೌಲ್ಯದ 9 ಕ್ವಿಂಟಾಲ್ ಅಡಿಕೆ ಅಲ್ಲಿದ್ದು, ಎಲ್ಲವನ್ನು ಕಳ್ಳರು ದೋಚಿದ್ದಾರೆ. 

ಅಡಿಕೆ ಮರದಿಂದ ಅಡಿಕೆ ಕೊಯ್ಲು ನಡೆಸಿದ್ದ ಪ್ರಭು ಅವರು ಅದರ ಸಂಸ್ಕರಣೆ ನಡೆಸಿ ಒಣಗಿಸಿದ್ದರು. ಅದನ್ನು ಕೆಂಪು ಅಡಿಕೆಯನ್ನಾಗಿ ಪರಿವರ್ತಿಸುವ ಸಿದ್ಧತೆ ನಡೆಸಿದ್ದರು. ಭಾನುವಾರ ಬೆಳಗ್ಗೆ 9 ಗಂಟೆಗೆ ಅಲ್ಲಿ ಹೋಗಿ ನೋಡಿದಾಗ ಒಣಗಿಸಿದ್ದ ಅಡಿಕೆ ಕಾಣಲಿಲ್ಲ.
ಅಡಿಕೆ ಕದ್ದವರನ್ನು ಪತ್ತೆ ಮಾಡುವಂತೆ ಅವರು ಪೊಲೀಸ್ ದೂರು ನೀಡಿದ್ದಾರೆ.