ಮುಂಡಗೋಡ : ಬೆಡಸಗಾಂವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 12 ಸ್ಥಾನಗಳ ನಿರ್ದೇಶಕರ ಆಯ್ಕೆಗೆ ನಾಳೆ ದಿ.24ರಂದು ಚುನಾವಣೆ ನಡೆಯಲಿದೆ.
ಸಾಲಗಾರರ ಸಾಮಾನ್ಯವಾಗಿ ವರ್ಗದ ಐದು ಸ್ಥಾನಕ್ಕೆ, ಪರಿಶಿಷ್ಟ ಜಾತಿ ಒಂದು ಸ್ಥಾನಕ್ಕೆ, ಪರಿಶಿಷ್ಟ ಪಂಗಡ ಒಂದು ಸ್ಥಾನಕ್ಕೆ, ಹಿಂದುಳಿದ ಅ ವರ್ಗದ ಒಂದು ಸ್ಥಾನಕ್ಕೆ, ಹಿಂದುಳಿದ ಬ ವರ್ಗದ ಒಂದು ಸ್ಥಾನಕ್ಕೆ, ಮಹಿಳಾ ಮೀಸಲು 2 ಸ್ಥಾನಕ್ಕೆ, ಸಾಲಗಾರರ ಸಾಮಾನ್ಯ ವರ್ಗದ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ದಿ.24 ರಂದು ಬೆಳಿಗ್ಗೆ 9ಗಂಟೆಯಿಂದ ಸಾಯಂಕಾಲ 4ಗಂಟೆವರೆಗೆ ಮತದಾನ ನಡೆಯಲಿದೆ.
ನಾಗರಾಜ ಭಟ್ಟ ಶ್ಯಾನವಳ್ಳಿ ಮನವಿ :
ಈ ಚುನಾವಣೆಗೆ ನಾಗರಾಜ ಮಂಜುನಾಥ ಭಟ್ಟ ಶಾನವಳ್ಳಿ ಅವರು ಸಾಮಾನ್ಯ ವರ್ಗದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಅವರ ಕ್ರಮ ಸಂಖ್ಯೆ 8 ಆಗಿದ್ದು, ಚಿನ್ಹೆ ಬ್ಯಾಟರಿ ಟಾರ್ಚ್ ಆಗಿದೆ.
8ನೇ ಕ್ರಮ ಸಂಖ್ಯೆಯಲ್ಲಿರುವ ಬ್ಯಾಟರಿ ಟಾರ್ಚ್ ಚಿನ್ಹೆಗೆ ತಮ್ಮ ಅಮೂಲ್ಯವಾದ ಮತ ನೀಡಿ, ತಮ್ಮ ಸೇವೆಗೆ ಅವಕಾಶ ಮಾಡಿಕೊಡಬೇಕೆಂದು ಮತದಾರರಲ್ಲಿ ರೈತರಲ್ಲಿ ನಾಗರಾಜ ಮಂಜುನಾಥ ಭಟ್ಟ ಶ್ಯಾನವಳ್ಳಿ ಅವರು ವಿನಂತಿಸಿಕೊಂಡಿದ್ದಾರೆ.