ಮುಂಡಗೋಡ : ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘದವರು ಗುರುವಾರ ಮಳಗಿಯಲ್ಲಿ ರಸ್ತೆ ತಡೆ ನಡೆಸಿದರು.
ಅತಿವೃಷ್ಟಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಆದರೆ, ಈವರೆಗೂ ವಿಮಾ ಕಂಪನಿ ಪರಿಹಾರ ಜಮಾ ಮಾಡಿಲ್ಲ. ರೈತರ ಸಮಸ್ಯೆಯನ್ನು ಸಹ ಆಲಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಕೂಡಲೇ ರೈತರ ಖಾತೆಗಳಿಗೆ ಪರಿಹಾರ ಜಮಾ ಮಾಡಬೇಕು. ಸರ್ಕಾರ ರೈತರ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಅರಣ್ಯ ಅತಿಕ್ರಮಣದಾರರಿಗೆ ಸಹ ಬೆಳೆ ಪರಿಹಾರ ಸಿಗಬೇಕು. ಅತಿಕ್ರಮಣ ಭೂಮಿ ಜಿಪಿಎಸ್ ಪ್ರಕ್ರಿಯೆ ಲೋಪ ಸರಿಪಡಿಸಬೇಕು ಎಂದು ಆಗ್ರಹಿಸಿದರು.