ಕಾಯಕಬಂಧುಗಳ ತಾಲೂಕಾ ಮಟ್ಟದ ತರಬೇತಿ ಕಾರ್ಯಾಗಾರ

Spread the love

ಮುಂಡಗೋಡ : ತಾಲೂಕಿನ 16 ಗ್ರಾಮ ಪಂಚಾಯತಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಯಕ ಬಂಧುಗಳನ್ನು ಸಜ್ಜುಗೊಳಿಸುವ ಸಲುವಾಗಿ ಕಾಯಕಬಂಧುಗಳ ತಾಲೂಕಾ ಮಟ್ಟದ ತರಬೇತಿ ಕಾರ್ಯಾಗಾರವು ಗುರುವಾರ ಮುಂಡಗೋಡ ತಾಲೂಕ ಪಂಚಾಯತ ಸಭಾಭವನದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ.ವೈ.ದಾಸನಕೊಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು. 

ಈ ತರಬೇತಿಯು ಲೋಯಲಾ ವಿಕಾಸ ಕೇಂದ್ರ ಮುಂಡಗೋಡ ರವರ ಸಹಭಾಗಿತ್ವದಲ್ಲಿ ದಿ.12-02-2025ರ ವರೆಗೆ ಜರುಗಲಿದ್ದು ಒಟ್ಟೂ 300 ಕಾಯಕ ಬಂಧುಗಳಿಗೆ ತರಬೇತಿ ನೀಡುವ ಉದ್ದೇಶಹೊಂದಲಾಗಿದೆ.
ತರಬೇತಿ ಕಾರ್ಯಾಗಾರವನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ.ವೈ.ದಾಸನಕೊಪ್ಪ ಉದ್ಘಾಟಿಸಿ ಮಾತನಾಡುತ್ತಾ,  ನರೇಗಾ ಯೋಜನೆಯಡಿ ಕಾಯಕ ಬಂಧುಗಳ ಪಾತ್ರ ಮಹತ್ವದ್ದಾಗಿದ್ದು, ಅವರು ಈ ತರಬೇತಿಯ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದು ಗ್ರಾಮೀಣ ಪ್ರದೇಶದ ಎಲ್ಲಾ ಜನರಿಗೆ ಉದ್ಯೋಗ ನೀಡುವ ಬಗ್ಗೆ ಹಾಗೂ ಯೋಜನೆಯಡಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಯೋಜನೆ ಯಶಸ್ವಿಯಾಗಿ ಅನುಷ್ಟಾನವಾಗುವಂತೆ ಮಾಡಲು ಮಾಹಿತಿ ನೀಡಿದರು.  

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲೊಯೋಲಾ ವಿಕಾಸ ಕೇಂದ್ರದ ಫಾದರ ಅನಿಲ್ ಡಿಸೋಜ  ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕಾಮಗಾರಿ ಸ್ಥಳದ ನಿರ್ವಹಣೆಯನ್ನು ಸುಧಾರಿಸಲು ಮತ್ತು ಕಾರ್ಯಕ್ರಮದ ಅನುಷ್ಟಾನವನ್ನು ಸುಗಮಗೊಳಿಸಲು, ಅಜೀಂ ಪ್ರೇಮ್ ಜಿ ಫೌಂಡೇಶನ್ ಹಾಗೂ ಸಮಾಜದ ಸೇವಾ ಸಂಸ್ಥೆಗಳು ಜಂಟಿಯಾಗಿ ತಾಲೂಕ ಪಂಚಾಯತ ಮೂಲಕ ಕಾಯಕ ಬಂಧುಗಳ ತರಬೇತಿ ಕಾರ್ಯಕ್ರಮ ನಡೆಸುತ್ತಿದ್ದು ಇದರಲ್ಲಿ ಭಾಗವಹಿಸುವ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಗಳ ಒಟ್ಟೂ 300 ಕಾಯಕ ಬಂಧುಗಳು ನರೇಗಾ ಯೋಜನೆಯ ಗುರಿ, ಉದ್ದೇಶ ವ್ಯಾಪ್ತಿಯ ಮಾಹಿತಿಯನ್ನು ಸಂಪೂರ್ಣವಾಗಿ ತರಬೇತಿ ಮೂಲಕ ಪಡೆದು ತರಬೇತಿ ಯಶಸ್ವಿಗೊಳಿಸಲು ಹೇಳಿದರು.
ಸಹಾಯಕ ನಿರ್ದೇಶಕರು(ಗ್ರಾ.ಉ.)   ಸೋಮನಿಂಗಪ್ಪಾ ಛಬ್ಬಿ ಅವರು ತರಬೇತಿಯ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಬೇತಿಯಲ್ಲಿ ತಾ.ಪಂ. ಸಹಾಯಕ ಲೆಕ್ಕಾಧಿಕಾರಿ ಪ್ರಕಾಶ ಎಮ್.ಕೆ., ಚವಡಳ್ಳಿ ಗ್ರಾ.ಪಂ. ಅಧ್ಯಕ್ಷೆ ಬಶಿರಾಬಿ ನದಾಫ ಮತ್ತು ನಂದಿಕಟ್ಟಾ ಗ್ರಾ.ಪಂ ಕಾಯಕ ಬಂಧುಗಳು, ನರೇಗಾ ಯೋಜನೆಯ ಎಲ್ಲಾ ಸಿಬ್ಬಂದಿಗಳು ಹಾಗೂ ಲೊಯೋಲಾ ವಿಕಾಸ ಕೇಂದ್ರದ ಸಿಬ್ಬಂದಿಗಳು ಹಾಜರಿದ್ದರು. ಮಲ್ಲಮ್ಮಾ ನೀರಲಗಿ ಕಾರ್ಯಕ್ರಮ ನಿರೂಪಿಸಿದರು.