ಮುಂಡಗೋಡ ಎಸ್.ಎಸ್.ಎಲ್.ಸಿ ಫಲಿತಾಂಶ : ಶೇ.99.92

Spread the love

ಮುಂಡಗೋಡ : ಮುಂಡಗೋಡ ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಶೇ.99.92ರಷ್ಟಾಗಿದೆ. ಪರೀಕ್ಷೆಗೆ ಹಾಜರಾಗಿದ್ದ 669 ವಿದ್ಯಾರ್ಥಿಗಳು ಮತ್ತು 742 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ತಾಲೂಕಿನಲ್ಲಿ ಒಟ್ಟು 17 ಪ್ರೌಢಶಾಲೆಗಳಿವೆ ಅದರಲ್ಲಿ 13 ಪ್ರೌಢಶಾಲೆಗಳು ಎ ಗ್ರೇಡ್ ಹೊಂದಿದೆ. ಉಳಿದ ನಾಲ್ಕು ಶಾಲೆಗಳು ಬಿ ಗ್ರೇಡ್ ಹೊಂದಿದೆ. ತಾಲೂಕಿನಲ್ಲಿ 40 ವಿದ್ಯಾರ್ಥಿಗಳು ಎ ಪ್ಲಸ್ ಪಡೆದು ತೇರ್ಗಡೆಯಾಗಿದ್ದಾರೆ. 222 ವಿದ್ಯಾರ್ಥಿಗಳು ಎ ಪ್ಲಸ್ ಮತ್ತು 738 ವಿದ್ಯಾರ್ಥಿಗಳು ಬಿ ಪ್ಲಸ್ ಪಡೆದರೆ, 411 ವಿದ್ಯಾರ್ಥಿಗಳು ಸಿ ಗ್ರೇಡ್  ಪಡೆದುಕೊಂಡಿದ್ದಾರೆ. ಒಟ್ಟು 1611 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಸಾಧನೆ ಮಾಡಿದವರು : ಮುಂಡಗೋಡ ತಾಲೂಕಿನ ಚಿಗಳ್ಳಿ ಸರಕಾರಿ ಪ್ರೌಢಶಾಲೆಯ ರಕ್ಷಿತಾ ಈರಪ್ಪ ಬೆಂಡ್ಲಗಟ್ಟಿ 613 ಅಂಕ (ಶೇ.98.08), ಮುಂಡಗೋಡ ರೋಟರಿ ಶಾಲೆಯ(ಆಂಗ್ಲ ಮಾಧ್ಯಮ) ಸಹನಾ ಶಿಂಧೆ 612 ಅಂಕ (ಶೇ.97.92), ಮಳಗಿ ಸರಕಾರಿ ಜ್ಯೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ದೀಕ್ಷಾ ಸುರೇಶ ನಾಯ್ಕ 602 ಅಂಕ (ಶೇ.96.32) ಪಡೆದಿದ್ದಾಳೆ.