ಛತ್ರಪತಿ ಶಿವಾಜಿ ಸೊಸೈಟಿಯ ಅಧ್ಯಕ್ಷರಾಗಿ L.T.ಪಾಟೀಲ್ ಉಪಾಧ್ಯಕ್ಷರಾಗಿ K.F.ಪುರದವರ ಆಯ್ಕೆ

Spread the love

ಮುಂಡಗೋಡ : ಛತ್ರಪತಿ ಶಿವಾಜಿ ಕೋ-ಆಪ್. ಕ್ರೆಡಿಟ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯರು ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕರಾದ ಎಲ್‌.ಟಿ.ಪಾಟೀಲ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣರಾದ ಕೆ.ಎಫ್.ಪುರದವರ್ ಆಯ್ಕೆಯಾಗಿದ್ದಾರೆ. 

ಈ ಸಂದರ್ಭದಲ್ಲಿ ನೂತನ ಸದಸ್ಯರಾದ ಅಣ್ಣಪ್ಪ ಪಾಟೀಲ್, ಕೃಷ್ಣಪ್ಪ ಸಿಗ್ನಳ್ಳಿ, ಗೋಪಾಲ ಪಾಟೀಲ್, ಮಾದೇವ ಕುಸೂರ, ವಸಂತ ಪಾಟೀಲ್, ರೇಣುಕಾ ಕಟ್ಟಿಮನಿ, ಕುಸುಮಾ ತಳವಾರ, ಸಂಜೀವ ಪಿಸೆ, ರಾಮು ಸುಬ್ಬಾಯವರ್, ಅನ್ನಪೂರ್ಣ ಬೆಣ್ಣಿ ಹಾಗೂ ಸ್ಮೀತಾ ಗೌಳೇರ, ಪ್ರಮುಖರಾದ ಶ್ರೀಧರ ಡೋರಿ, ಡಿ.ಎಫ್.ಮಡ್ಲಿ, ಬಾಬಣ್ಣ ಕೋಣನಕೇರಿ, ಯಾಕೂಬ ಯಲಿವಾಳ, ಛತ್ರಪತಿ ಶಿವಾಜಿ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕರಾದ ದಶರಥ ಸಾಳುಂಕೆ ಹಾಗೂ ಸಿಬ್ಬಂದಿಗಳು ಇದ್ದರು.