
ಮುಂಡಗೋಡ : ಮೂವರು ಮಕ್ಕಳಿಗೆ ಹುಚ್ಚುನಾಯಿ ಕಚ್ಚಿ ಗಾಯಗೊಳಿಸಿದ ಘಟನೆ ಎಂದು ಪಟ್ಟಣದ ನಂದೀಶ ನಗರದಲ್ಲಿ ರವಿವಾರ ಸಂಭವಿಸಿದೆ ಅರುಣಿತಾ ಮಹೇಶ ಪಾಟೀಲ್(3), ನಂದೀಶ ಶಾಂತಪ್ಪ ಹಂಚಿನಮನಿ(9), ಚಿರಂಜೀವಿ ಸುನೀಲ ಮತ್ತಿಗಟ್ಟಿ(5) ಇವರಿಗೆ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿದೆ. ಮುಂಡಗೋಡ ತಾಲೂಕ ಆಸ್ಪತ್ರೆಯಲ್ಲಿ ಮೂವರು ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಕಳೆದ ರವಿವಾರ ಕೂಡ ಮೂವರು ಮಕ್ಕಳಿಗೆ ಹುಚ್ಚುನಾಯಿ ಕಚ್ಚಿ ಗಾಯಗೊಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು

ಪಟ್ಟಣದಲ್ಲಿ ಬೀದಿ ನಾಯಿ ಹಾಗೂ ಹುಚ್ಚುನಾಯಿ ಹಾವಳಿ ಹೆಚ್ಚಾಗಿದೆ. ಪಟ್ಟಣ ಪಂಚಾಯತದವರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ.
ನಂದೀಶ್ವರ ನಗರದ ವಾರ್ಡ ಮೆಂಬರ ಇಲ್ಲಿ ಬರುವುದೇ ಇಲ್ಲ. ಇಲ್ಲಿಯ ಕೆಲಸ ಕಾರ್ಯಗಳ ಬಗ್ಗೆ ಗಮನವೇ ಹರಿಸುತ್ತಿಲ್ಲ. ನಂದೀಶ್ವರ ನಗರದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ.