ಗುಂಜಾವತಿ ಇರುವೆ ಗುಡ್ಡಕ್ಕೆ ಬೆಂಕಿ..!

Spread the love

ಮುಂಡಗೋಡ : ತಾಲೂಕಿನ ಗುಂಜಾವತಿ ಬಳಿಯ ಇರುವೆ ಗುಡ್ಡಕ್ಕೆ ಬೆಂಕಿ ಹತ್ತಿಕೊಂಡ ಪರಿಣಾಮವಾಗಿ ಕೆಲವು ಗಿಡಗಳು ಸುಟ್ಟುಹೋದ ಘಟನೆ ನಡೆದಿದೆ. 

ರಾತ್ರಿ ಹತ್ತಿಕೊಂಡ ಬೆಂಕಿ ಕೆಲವು ಕಡೆ ಇನ್ನೂ ಆರಿಲ್ಲ ಎನ್ನಲಾಗಿದೆ. ಸಂಬಂಧಪಟ್ಟ ಅರಣ್ಯ ಇಲಾಖೆಯವರು ಈ ಬಗ್ಗೆ ಕೂಡಲೇ ಗಮನ ಹರಿಸಲಿ. ಇರುವೆ ಗುಡ್ಡಕ್ಕೆ ಬೆಂಕಿ ಹತ್ತಲು ಕಾರಣವೇನೆಂಬುದರ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಜನರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ತಿಂಗಳಿಗೆ ಒಮ್ಮೆಯಾದರೂ ಅರಣ್ಯದೊಳಗೆ ಹೋಗಿ ಮರಗಳ ಬಗ್ಗೆ ಪರಿಶೀಲಿಸಲಿ ಎಂಬುದೇ ಸಾರ್ವಜನಿಕರ ಮನದಾಳದ ಮಾತಾಗಿದೆ.