
ಮುಂಡಗೋಡ : ಇಲ್ಲಿಯ ನಂದೀಶ್ವರ ನಗರದ ವಿವಾಹಿತ ಮಹಿಳೆಯೋರ್ವಳು ನಾಪತ್ತೆಯಾದ ಕುರಿತು ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.

ನಂದೀಶ್ವರ ನಗರದಿಂದ ಅದಿತಿ ಆನಂದ ಬಸ್ತವಾಡ(29) ಎಂಬ ವಿವಾಹಿತೆ ಕಾಣೆಯಾಗಿದ್ದಾಳೆ. ದಿ.7ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯಲ್ಲಿ ಯಾರಿಗೂ ಹೇಳದೆ ಎಲ್ಲಿಯೋ ಹೋದವಳು ಮರಳಿ ಮನೆಗೆ ಬರದೆ ಕಾಣೆಯಾಗಿದ್ದಾಳೆ. ಈ ಕುರಿತಂತೆ ಕಾಣೆಯಾಗಿರುವ ವಿವಾಹಿತಳ ತಂದೆಯಾದ ಅಜ್ಜಪ್ಪ ಮತ್ತಿಗಟ್ಟಿ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ.