
ಬೆಂಗಳೂರು : ಇಂದು ಎಲ್ಲೆಡೆ ಹೋಳಿ ಹಬ್ಬದ ಅಂಗವಾಗಿ ಪ್ರತಿಯೊಬ್ಬರೂ ಬಣ್ಣದಲ್ಲಿ ಮಿಂದೆದ್ದು ಅತ್ಯಂತ ಸಡಗರ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸುತ್ತಾರೆ. ಆದರೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲಿನಲ್ಲಿ ಹೋಳಿ ಹಬ್ಬ ಆಚರಣೆಗೆ ನಿರ್ಬಂಧ ವಿಧಿಸಲಾಗಿದ್ದು, ಈ ಕುರಿತು BMRCL ಮೆಟ್ರೋ ಪ್ರಯಾಣಿಕರಿಗೆ ಹೋಳಿ ಹಬ್ಬದ ಶುಭಾಶಯ ತಿಳಿಸಿ ಈ ಮೂಲಕ ಸೂಚನೆ ನೀಡಿದೆ.
ಹೌದು ನಮ್ಮ ಮೆಟ್ರೋ ರೈಲಿನಲ್ಲಿ ಹೋಳಿ ಹಬ್ಬ ಆಚರಣೆಗೆ ನಿರ್ಬಂಧ ಹೋಳಿ ಮುಗಿಯುವವರೆಗೂ ಮೆಟ್ರೋದಲ್ಲಿ ಬಣ್ಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹೋಳಿ ಹಬ್ಬದ ಶುಭಾಶಯಗಳು ತಿಳಿಸಿ BMRCL ಈ ಸಂದೇಶ ನೀಡಿದೆ. ಒಗ್ಗಟ್ಟು ಸಂತೋಷದಿಂದ ಹೋಳಿ ಹಬ್ಬವನ್ನು ಆಚರಿಸಿ ಎಂದು ಪ್ರಯಾಣಿಕರಿಗೆ ಸುರಕ್ಷಿತ ಹೋಳಿ ಹಬ್ಬದ ಶುಭಾಶಯಗಳು ತಿಳಿಸಿದೆ. ಮೆಟ್ರೋದಲ್ಲಿ ಪ್ರಯಾಣಿಸಿ ಎಂದು ಹೋಳಿ ಹಬ್ಬದ ಪ್ರಯುಕ್ತ ಬಿಎಂಆರ್‌ಸಿಎಲ್ ಪ್ರಯಾಣಿಕರಿಗೆ ಶುಭಾಶಯಗಳು ಹೇಳಿ ಆದರೆ ಮೆಟ್ರೋದಲ್ಲಿ ಬಣ್ಣ ತರಬೇಡಿ ಎಂದು ಪ್ರಯಾಣಿಕರಿಗೆ ಸೂಚನೆ ನೀಡಿದೆ.ಒಗ್ಗಟ್ಟು, ಸಂತೋಷ ಮತ್ತು ವರ್ಣರಂಜಿತ ನೆನಪುಗಳ ಪ್ರಯಾಣದೊಂದಿಗೆ ಈ ಹೋಳಿ ಹಬ್ಬವನ್ನು ಆಚರಿಸೋಣ. #ಬಿಎಂಆರಸಿಎಲ್ ನಿಮಗೆ ಸುರಕ್ಷಿತ ಮತ್ತು ವರ್ಣರಂಜಿತ ಹೋಳಿಯನ್ನು ಹಾರೈಸುತ್ತದೆ.