
ಮುಂಡಗೋಡ : ಯಲ್ಲಾಪುರ ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಚಿದಾನಂದ ಹರಿಜನ ಮತ್ತು ದಲಿತ ಮುಖಂಡರಾದ ಹನುಮಂತಪ್ಪ ಆರೇಗೊಪ್ಪ ಒತ್ತಾಯಿಸಿದ್ದಾರೆ.

ಬಾಲಕಿಯ ಅತ್ಯಾಚಾರಿ ಅಪ್ರಾಪ್ತನಲ್ಲ..!
ಯಲ್ಲಾಪುರದಲ್ಲಿ ಒಂದನೇ ತರಗತಿ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪಿ ಅಪ್ರಾಪ್ತನಲ್ಲ. ಹೀಗಾಗಿ ಆತನ ಹೆಸರನ್ನು ಈಗ ಬಹಿರಂಗಪಡಿಸಲಾಗಿದೆ.

ಏಪ್ರಿಲ್ ಒಂದರಂದು ಯಲ್ಲಾಪುರ ತಾಲೂಕಿನ ಕಿರವತ್ತಿ ಬಳಿಯ ಕಾಡು ಸಿದ್ದೇಶ್ವರ ದೇವಾಲಯದಲ್ಲಿ ಹಳಿಯಾಳದ ಭಾಗವತಿಯ ಅಸ್ಲಾಂ ಆದಮಸಾಬ ಸುತಾರ್ ಎಂಬಾತನು ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದನು.
ಅತ್ಯಾಚಾರ ಆರೋಪಿ ಸಹ ಅಪ್ರಾಪ್ತ ಎಂದು ಹೇಳಲಾಗಿದ್ದು ಆತನ ವಯಸ್ಸಿನ ಬಗ್ಗೆ ನಿಖರತೆ ಇರಲಿಲ್ಲ. ಹೀಗಾಗಿ ಏಪ್ರಿಲ್ ಒಂದರ ವರದಿಯಲ್ಲಿ ಅತ್ಯಾಚಾರಿಯ ಹೆಸರು ನಮೂದಿಸಿರಲಿಲ್ಲ. ಇದೀಗ ಆತ ಅಪ್ರಾಪ್ತ ಅಲ್ಲ ಎಂಬ ವಿಷಯ ಹೊರಬಂದಿದೆ.