
ಮುಂಡಗೋಡ : ತಾಲೂಕಿನ ಜೋಗೇಶ್ವರ ಹಳ್ಳದ ಬಳಿ ಕರಡಿಯೊಂದು ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿ, ತೀವ್ರ ಗಾಯಗೊಳಿಸಿದ ಘಟನೆ ಗುರುವಾರ ನಡೆದಿದೆ.

ಜೋಗೇಶ್ವರ ಹಳ್ಳದ ಸಿದ್ದು ಯಮಕರ ಎಂಬಾತನೇ ಕರಡಿ ದಾಳಿಯಿಂದ ಗಾಯಗೊಂಡ ವ್ಯಕ್ತಿಯಾಗಿದ್ದಾನೆ.
ಹೊಲದಲ್ಲಿ ಬೋರವೆಲ್ ಚಾಲು ಮಾಡಲು ಹೋದಾಗ ಕರಡಿ ದಾಳಿ ಮಾಡಿತು. ಕರಡಿ ದಾಳಿಯಿಂದ ಭಯಗೊಂಡ ಸಿದ್ದು ಯಮಕರ ಕೂಗಿದಾಗ ಜನರು ಬಂದು ಕರಡಿಯಿಂದ ರಕ್ಷಿಸಿದ್ದಾರೆ. ಸಿದ್ದು ಯಮಕರ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
