ಮುಂಡಗೋಡ : PUC ದ್ವಿತೀಯ ವರ್ಷದ ಫಲಿತಾಂಶ ಶೇ.81.57

Share Now

ಮುಂಡಗೋಡ : ಮುಂಡಗೋಡ ತಾಲೂಕಿನ ಪಿ.ಯು.ಸಿ. ದ್ವಿತೀಯ ವರ್ಷದ ಫಲಿತಾಂಶ ಶೇ. 81.57ರಷ್ಟಾಗಿದೆ. 

ಒಟ್ಟು 673 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 549 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಮುಂಡಗೋಡದ ಲೊಯೋಲಾ ಸಂಯುಕ್ತ ಪದವಿಪೂರ್ವ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಶೇ.87.18ರಷ್ಟಾಗಿದೆ. 

ಮುಂಡಗೋಡದ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಶೇ.85.71ರಷ್ಟಾಗಿದೆ.
ಮುಂಡಗೋಡ ತಾಲೂಕಿನ ಮಳಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಶೇ.80.65ರಷ್ಟಾಗಿದೆ.
ಮುಂಡಗೋಡದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಶೇ.74.21ರಷ್ಟಾಗಿದೆ.  

ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮಳಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವೀಣಾ ಜಿ.ನಾಯ್ಕ(ಶೇ.94.17),
ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಲೊಯೋಲಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹನುಮಂತ ಗೋಣೆಪ್ಪನವರ್(ಶೇ.94.17) ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮುಂಡಗೋಡದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಠಕ್ಕು ಯಮಕರ(ಶೇ.91.67)ಪಡೆದಿದ್ದಾರೆ.