
ಮುಂಡಗೋಡ : ಮಂಗಳವಾರ ಸಂಜೆ ಬೀಸಿದ ಬಿರುಗಾಳಿ ಹಾಗೂ ಮಳೆಗೆ ಅವಾಂತರಗಳು ಸೃಷ್ಟಿಯಾಗಿದೆ.

ತಾಲೂಕಿನ ಸಾಲಗಾಂವ ಬಳಿ ಬೃಹತ್ ಮಾವಿನಮರ ರಸ್ತೆ ಮೇಲೆ ಬಿದ್ದ ಪರಿಣಾಮವಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ತಾಲೂಕಿನ ನ್ಯಾಸರ್ಗಿಯಲ್ಲಿ ರಸ್ತೆ ಮೇಲೆ ವಿದ್ಯುತ್ ಕಂಬ ಹಾಗೂ ಮರ ಬಿದ್ದಿದೆ. ಪಿಎಲ್‌ಡಿ ಬ್ಯಾಂಕ್ ಪಕ್ಕದಲ್ಲಿ ಮೊಬೈಲ್ ಟವರ್ ನೆಲಕ್ಕೆ ಬಿದ್ದಿದೆ.


ಮೌಲಾನಾ ಆಜಾದ ಶಾಲೆಯ ನೂತನ ಕಟ್ಟಡದ ಮೇಲ್ಛಾವಣಿ ಗಾಳಿಗೆ ಹಾರಿ ಬಿದ್ದಿದೆ. ಮಳೆಗಾಳಿಗೆ ಪಟ್ಟಣದ ನೆಹರುನಗರ, ಗಾಂಧಿನಗರದ ಹಲವು ಮನೆಗಳ ಮೇಲ್ಚಾವಣಿ ಹಾರಿ ಹೋಗಿದೆ.



ತಾಲೂಕಿನಲ್ಲಾದ ಅನಾಹುತಗಳ ಮಾಹಿತಿ ಇನ್ನೂ ಬರಬೇಕಾಗಿದೆ.