ಅಣಬೆಕೀಳಲು ಹೋದವನ ಮೇಲೆ ಕರಡಿ ದಾಳಿ

Spread the love

ಮುಂಡಗೋಡ : ಕಾಡಿನಲ್ಲಿ ಅಣಬೆ ಕೀಳಲು ಹೋದ ವ್ಯಕ್ತಿಯ ಮೇಲೆ ಕರಡಿಯೊಂದು ದಾಳಿ ಮಾಡಿದ ಘಟನೆ ಆಲಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ.

ಇಂದು ನಸುಕಿನ ಜಾವ ಆಲಳ್ಳಿ ಗ್ರಾಮದ ಧರ್ಮಣ್ಣ ಖಂಡೋಜಿ ಹಾಗೂ ಸಂಗಡಿಗರು ಸೇರಿ ಆಲಳ್ಳಿ ಅರಣ್ಯದಲ್ಲಿ ಅಣಬೆ ಕೀಳಲು ಹೋದಾಗ ಧರ್ಮಣ್ಣನ ಮೇಲೆ ಕರಡಿ ದಾಲಿ ಮಾಡಿದೆ ಎಂದು ಕಾತೂರ ಉಪವಲಯ ಅರಣ್ಯಾಧಿಕಾರಿ ನಾಗರಾಜ ಕಲಾಲ ತಿಳಿಸಿದ್ದಾರೆ.

ಅರಣ್ಯದಂಚಿನಲ್ಲಿರುವ ಗೋವಿನಜೋಳ ಹೊಲಕ್ಕೆ ಹೋದ ಸಂದರ್ಭದಲ್ಲಿ ಮಂಗಗಳನ್ನು ಓಡಿಸಲು ಹೋದಾಗ ಕರಡಿ ದಾಳಿ ಮಾಡಿದೆ. ಕರಡಿಯ ಜೊತೆ ಎರಡು ಮರಿಗಳಿದ್ದವು. ಜೋರಾಗಿ ಕೂಗಿದ್ದರಿಂದ ಕರಡಿ ಕಾಡಿನಲ್ಲಿ ಓಡಿತು ಎಂದು ಗಾಯಾಳು ಧರ್ಮಣ್ಣ ಹೇಳಿದ್ದಾರೆ.