ಇಲ್ಲಿವರೆಗೆ 61 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ : ಶೇ 50ರಷ್ಟು ಫಲಾನುಭವಿಗಳಿಗೆ ಮೊದಲ ಡೋಸ್

Spread the love

ನವದೆಹಲಿ : ಗುರುವಾರದ ವರೆಗೆ ದೇಶದಲ್ಲಿ 61 ಕೋಟಿಗೂ ಹೆಚ್ಚು ಕೋವಿಡ್-19 ಲಸಿಕೆಗಳನ್ನು (Covid 19 vaccine)ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ (Health minister)ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ. ಕೋವಿಡ್ ಲಸಿಕೆಯ ಮೊದಲ ಡೋಸ್ ನೊಂದಿಗೆ ಶೇಕಡಾ ಐವತ್ತರಷ್ಟು ಅರ್ಹ ಭಾರತೀಯರಿಗೆ ಚುಚ್ಚುಮದ್ದು ನೀಡಿದ ಕಾರಣ ಭಾರತ ಮೈಲಿಗಲ್ಲು (milestone ) ಸಾಧಿಸಿದೆ ಎಂದು ಅವರು ಹೇಳಿದರು.

‘ಭಾರತ ಅಭೂತಪೂರ್ವ ಮೈಲಿಗಲ್ಲು ಸಾಧಿಸಿದೆ! 50% ಅರ್ಹ ಜನಸಂಖ್ಯೆಯು #COVID19 ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಅದನ್ನು ಮುಂದುವರೆಸಿ ನಾವು ಕೊರೊನಾ ವಿರುದ್ಧ ಹೋರಾಡೋಣ, ‘ಎಂದು ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದಾರೆ.

ಏತನ್ಮಧ್ಯೆ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಬುಧವಾರ ಕೇಂದ್ರ ಫಾರ್ಮಾ ಕಾರ್ಯದರ್ಶಿ (Union Pharma Secretary )ಎಸ್.ಅಪರ್ಣಾ ಅವರ ಸಮ್ಮುಖದಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು.