ಬೆಂಗಳೂರು: ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆಗೆ ಅವಕಾಶ ವಿಚಾರವಾಗಿ ಸರಿಯಾದ ನಿರ್ಧಾರ ಸರಿಯಾದ ಸಮಯಕ್ಕೆ ತೆಗೆದುಕೊಳ್ಳ ಬೇಕಾಗುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಿನ್ನೆಯ (ಸೋಮವಾರ) ಸಭೆಯಲ್ಲಿ ಸರಿಯಾದ ಮಾಹಿತಿ ಇರಲಿಲ್ಲ. ಯಾವುದೇ ನಿರ್ಣಯ ಆದರೂ ಸರಿಯಾದ ಮಾಹಿತಿಗಳ ಮೇಲೆ ಆಗಬೇಕು. ಹೀಗಾಗಿ ಯಾವ ರೀತಿ ಆಚರಣೆ ಮಾಡಿದರೆ ಒಳ್ಳೆಯದು ಎಂಬುದರ ಬಗ್ಗೆ ತಜ್ಞರಿಂದ ಸಲಹೆ ಕೇಳಿದ್ದೇವೆ ಎಂದರು.
ತಜ್ಞರು ನಾಲ್ಕೈದು ದಿನ ಸಮಯ ಕೇಳಿದ್ದಾರೆ. ಸೆ.5ನೇ ತಾರೀಖು ಭಾನುವಾರವಾದರೂ ಸಭೆ ಕರೆದಿದ್ದೇವೆ. ಅಂದೇ ಈ ಬಗ್ಗೆ ಅಂತಿಮ ನಿರ್ಧಾರ ಮಾಡುತ್ತೇವೆ ಎಂದರು.
ಬೆಂಗಳೂರಿನಲ್ಲಿ ಭೀಕರ ಅಫಘಾತದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾತ್ರಿ ನಡೆದಿರುವುದು ಬಹಳ ಆಘಾತಕರವಾದ ಅಪಘಾತ. 7 ಜನ ದುರ್ಮರಣ ಹೊಂದಿದ್ದಾರೆ. ಪೊಲೀಸರು ಈಗಾಗಲೇ ತನಿಖೆ ಮಾಡುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು. ಸುರಕ್ಷತಾ ಕ್ರಮಗಳೊಂದಿಗೆ ಯಾರೇ ಆದರೂ ವಾಹನ ಚಲಾಯಿಸಬೇಕು. ಈ ಮೂಲಕ ಇಂತಹ ಅವಘಡ ಆಗದ ರೀತಿ ಎಚ್ಚರ ವಹಿಸಬೇಕು ಎಂದರು.