ನವದೆಹಲಿ : ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 30, 941 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 350 ಮಂದಿ ಮೃತಪಟ್ಟಿರುವುದಾಗಿ ಇಂದು (ಆಗಸ್ಟ್ 31, ಮಂಗಳವಾರ) ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿ ಅಂಶದಲ್ಲಿ ಮಾಹಿತಿ ನೀಡಿದೆ.
ದೇಶದಾದ್ಯಂತ ದಾಖಲಾಗಿರುವ ಒಟ್ಟು ದಾಖಲಾಗಿರುವ ಪ್ರಕರಣಗಳ ಸಂಖ್ಯೆಯಲ್ಲಿ 19,622 ಹೊಸ ಸೋಂಕು ಕೇರಳವೊಂದರಲ್ಲೇ ಪತ್ತೆಯಾಗಿದ್ದು, ಕೇರಳದಲ್ಲಿ ಸೋಂಕಿಗೆ ಕಳೆದೊಂದು ದಿನದ ಅವಧಿಯಲ್ಲಿ 132 ಮಂದಿ ಸಾವಿಗೀಡಾಗಿದ್ದಾರೆಂದು ಕೂಡ ತಿಳಿಸಿದೆ. ಇನ್ನು, ದೇಶದಾದ್ಯಂತ 3,70,640 ಸಕ್ರಿಯ ಪ್ರಕರಣಗಳಿದ್ದು, ದೇಶದಲ್ಲಿ ಈವರೆಗೆ ದಾಖಲಾಗಿರುವ ಒಟ್ಟು ಪ್ರಕರಣಗಳ ಪೈಕಿ ಶೇಕಡಾ 1.13 ರಷ್ಟು ಸಕ್ರಿಯ ಪ್ರಕರಣಗಳಿವೆ.
ಈವರೆಗೆ ದೇಶದಾದ್ಯಂತ 52.15 ಕೋಟಿಯಷ್ಟು ಕೋವಿಡ್ ಸೋಂಕಿನ ಪರೀಕ್ಷೆಗಳು ನಡೆದಿದ್ದು, ಸದ್ಯಕ್ಕೆ ಒಟ್ಟು ಪಾಸಿಟಿವಿಟಿ ರೇಟ್ ಶೇಕಡಾ 2.22 ಇದೆ. ಲಸಿಕಾ ಅಭಿಯಾನದ ಅಡಿಯಲ್ಲಿ ಈವರೆಗೆ ದೇಶದಲ್ಲಿ ಒಟ್ಟು 64.05 ಕೋಟಿ ಲಸಿಕಾ ಡೋಸ್ ಗಳನನು ನೀಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.