ʼUAEʼಯೊಂದಿಗೆ ಭಾರತದ ಐತಿಹಾಸಿಕ ಸಂಬಂಧವನ್ನ ʼExpo 2020ʼ ಬಲಪಡಿಸಲಿದೆ : ಪ್ರಧಾನಿ ಮೋದಿ

Spread the love

ನವದೆಹಲಿ : ದುಬೈ ಎಕ್ಸ್‌ಪೋ 2020 (Expo 2020 Dubai) ಇಂದಿನಿಂದ ಯುಎಇ(UAE)ಯಲ್ಲಿ ಆರಂಭವಾಗಿದೆ. ಇದರೊಂದಿಗೆ, ಇಂಡಿಯಾ ಪೆವಿಲಿಯನ್ʼನ್ನ ಸಹ ಇಲ್ಲಿ ಪ್ರಾರಂಭಿಸಲಾಯಿತು. ಇನ್ನು 2020ರ ದುಬೈ ಎಕ್ಸ್‌ಪೋದಲ್ಲಿ ಭಾರತೀಯ ಪೆವಿಲಿಯನ್ ಉದ್ಘಾಟನೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಯುಎಇಯೊಂದಿಗೆ ಭಾರತದ ಐತಿಹಾಸಿಕ ಸಂಬಂಧವನ್ನ ಎಕ್ಸ್‌ಪೋ ಬಲಪಡಿಸಲಿದೆ. ಇದು ಭಾರತ-ಯುಎಇ ನಡುವೆ ಬೆಳೆಯುತ್ತಿರುವ ಸ್ನೇಹದ ಸಂಕೇತವಾಗಿದೆ ಎಂದು ಅವರು ಹೇಳಿದರು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಇಂದು ದುಬೈನಲ್ಲಿ ಭಾರತೀಯ ಪೆವಿಲಿಯನ್ ಉದ್ಘಾಟಿಸಿದರು. ಇಂದು ಭಾರತವು ಅವಕಾಶಗಳ ಭೂಮಿ. ಭಾರತ ಮತ್ತು ಯುಎಇ ಸಾಮಾನ್ಯ ಹಿತಾಸಕ್ತಿಗಳನ್ನು ಹಂಚಿಕೊಳ್ಳುತ್ತವೆ. ಎಕ್ಸ್ಪೋ 2020 ರ ಮುಖ್ಯ ವಿಷಯವೆಂದರೆ, ಮನಸ್ಸುಗಳನ್ನು ಸಂಪರ್ಕಿಸುವುದು, ಭವಿಷ್ಯವನ್ನು ರಚಿಸುವುದು ಎಂದು ಪ್ರಧಾನಿ ಮೋದಿ ಹೇಳಿದರು. ನಾವು ನವ ಭಾರತವನ್ನು ನಿರ್ಮಿಸಲು ಮುಂದಾದಾಗ ಅದರ ಪ್ರಯತ್ನಗಳು ಭಾರತದ ಪ್ರಯತ್ನಗಳಲ್ಲಿ ಪ್ರತಿಫಲಿಸುತ್ತದೆ ಎಂದರು.