ಜಂಬೂ ಸವಾರಿ ಸಂಪನ್ನದ ಬೆನ್ನಲ್ಲೆ ಮೈಸೂರಿನಲ್ಲಿ ಭಾರೀ ಮಳೆ : ಮನೆಗಳಿಗೆ ನುಗ್ಗಿದ ನೀರು

Share Now

ಮೈಸೂರು : ವಿಶ್ವ ವಿಖ್ಯಾತ ದಸರಾ ಜಂಬೂ ಸವಾರಿ ಮುಗಿದ ತಕ್ಷಣವೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರುಣನ ಅರ್ಭಟ ಜೋರಾಗಿದೆ.

ಜಂಬೂಸವಾರಿ ಮೆರವಣಿಗೆ ಮುಗಿಯುತ್ತಿದ್ದಂತೆ ಶುರುವಾದ ಭಾರೀ ಮಳೆ ನಗರದಲ್ಲಿ ಅವಾಂತರ ಸೃಷ್ಟಿಸಿದೆ. ಮೈಸೂರಿನ ಮಧುವನ ಬಳಿ ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುವಂತಾಗಿದೆ. ಮನೆಗಳಿಗೆ ಮಳೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ವಾಹಗಳು ಮಳೆ ನೀರಿನಲ್ಲಿ ಭಾಗಶಃ ಮುಳುಗಿದೆ.

ಇಂದು ವಿಜಯ ದಶಮಿ ಹಬ್ಬದ ಸಂಭ್ರಮದಲ್ಲಿದ್ದ ಮೈಸೂರು ಜಂಬೂ ಸವಾರಿಗೆ ವರುಣ ಸಾಥ್ ನೀಡಿದ್ದು, ಮೆರವಣೆಗೆ ಮುಗಿದ ಬಳಿಕ ಜೋರು ಮಳೆಯಾಗುತ್ತಿದೆ.