
ಈಜಿಪ್ಟ್ (Egypt) ನಲ್ಲಿ ಮೂರು ಸಾವಿರ ವರ್ಷಗಳು ಹಳೆಯದಾದ ನಗರವೊಂದು ಪತ್ತೆಯಾಗಿದೆ. ಪತ್ತೆಯಾಗಿರೋ ನಗರವನ್ನು ‘ಅಟೆನ್’ (Aten City) ಎಂದು ಗುರುತಿಸಲಾಗಿದೆ. ಪ್ರಾಚೀನ ಈಜಿಪ್ಟಿನ ಫೇರೋ ಟುಟಾಂಖಾಮೆನ್ (Egyptian pharaoh Tutankhamen) ಸಮಾಧಿಯ ನಂತರ ಈಜಿಪ್ಟ್ ಶಾಸ್ತ್ರಜ್ಞರು ಮತ್ತು ಪುರಾತತ್ತ್ವ ಶಾಸ್ತ್ರಜ್ಞರು ಇದನ್ನು ಅತ್ಯಂತ ಮಹತ್ವದ ಸಂಶೋಧನೆ ಎಂದು ಕರೆದಿದ್ದಾರೆ.ಸೆಪ್ಟೆಂಬರ್ 2020 ರಲ್ಲಿ, ಪುರಾತತ್ತ್ವ ಶಾಸ್ತ್ರಜ್ಞರ ತಂಡವು ಈಜಿಪ್ಟ್‌ನ ಲಕ್ಸಾರ್ ನ ಪಶ್ಚಿಮ ದಂಡೆಯಲ್ಲಿದೆ (Western bank of Luxor in Egypt) ಎನ್ನಲಾದ ಶವಾಗಾರದ ದೇವಾಲಯ (Mortuary temple)ವನ್ನು ಹುಡುಕಲು ಪ್ರಾರಂಭಿಸಿದ್ದರು. ಆದರೆ ಈ ಸಮಯದಲ್ಲಿ ತಂಡಕ್ಕೆ ಕಳೆದು ಹೋಗಿದ್ದ ನಗರ ಸಿಗುತ್ತೆ ಎಂದು ಊಹಿಸಿರಲಿಲ್ಲ. ಕಿಂಗ್ ಟುಟಾಂಖಾಮೆನ್ ಅವರ ಶವಾಗಾರದ ದೇವಾಲಯವನ್ನು ಕಂಡುಹಿಡಿಯುವುದು ಆರಂಭಿಕ ಉದ್ದೇಶವಾಗಿತ್ತು ಎಂದು ಪುರಾತತ್ವ ಮಿಷನ್ (Archaeological Mission) ಹೇಳಿದೆ.
ಏಪ್ರಿಲ್ 2021ರ ಆರಂಭದಲ್ಲಿ ಮೂರು ಸಾವಿರ ವರ್ಷಗಳ ಹಿಂದಿನ ಪುರಾತನ ಈಜಿಪ್ಟ್ ನ ಲಾಸ್ಟ್ ಗೋಲ್ಡನ್ ಸಿಟಿ (Lost Golden City) ಎಂಬ ಅಟೆನ್ ಪತ್ತೆ ಮಾಡಿರೋದಾಗಿ ಎಂದು ಈಜಿಪ್ಟ್ ನ ಖ್ಯಾತ ಶಾಸ್ತ್ರಜ್ಞ ಜಾಹಿ ಹವಾಸ್ ಹೇಳಿಕೆ ನೀಡಿದ್ದರು.
‘ಲಾಸ್ಟ್ ಸಿಟಿ’ ಅಟೆನ್ ಉತ್ಖನನ ಮಾಹಿತಿ
ಪ್ರಾಚೀನ ಈಜಿಪ್ಟ್‌ನ 18ನೇ ರಾಜವಂಶದ ಒಂಬತ್ತನೇ ರಾಜ, ಕಿಂಗ್ ಅಮೆನ್‌ಹೋಟೆಪ್ III (Egypt’s 18th dynasty, King Amenhotep III) ಅವರು ಅಟೆನ್ ನಗರ ಸ್ಥಾಪಿಸಿದ್ದರು ಎಂದು ನಂಬಲಾಗಿದೆ. ದಕ್ಷಿಣದ ನಗರವಾದ ಲಕ್ಸಾರ್ ನಲ್ಲಿರುವ ಆ ಯುಗದಲ್ಲಿ ಅಟೆನ್ ಅತಿದೊಡ್ಡ ಆಡಳಿತ ಮತ್ತು ಕೈಗಾರಿಕಾ ವಸಾಹತು ಆಗಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ.
ಅಂದಿನ ಜನರ ಜೀವನಶೈಲಿಯ ಮಾಹಿತಿ
ಪ್ರಾಚೀನ ಈಜಿಪ್ಟ್ ಶ್ರೀಮಂತವಾಗಿದ್ದ ಸಂದರ್ಭದಲ್ಲಿ ಅಂದಿನ ಜೀವನಶೈಲಿ ಹೇಗಿತ್ತು ಎಂಬುದನ್ನು ಕಳೆದುಹೋಗಿದ್ದ ಅಟೆನ್ ನಗರ ಅಪರೂಪದ ಮಾಹಿತಿಯಜ್ನು ಸಂಶೋಧಕರಿಗೆ ಒದಗಿಸುತ್ತಿದೆ. ಇದೊಂದು ಅಸಾಧಾರಣ ಅವಿಷ್ಕಾರ ಆಗಿದ್ದು, ಹಿಂದಿನ ನಾಗರೀಕತೆಗಳ ಜನರ ದೈನಂದಿನ ಜೀವನಶೈಲಿಯನ್ನು ತಿಳಿದುಕೊಳ್ಳಲು ಈ ಸಂಶೋಧನೆ ಸಹಾಯ ಮಾಡಲಿದೆ ಎಂದು ಪುರಾತತ್ವಶಾಸ್ತ್ರಜ್ಞರು ಹೇಳುತ್ತಾರೆ.
ದೊಡ್ಡ ನಗರದ ಸೈಟ್ ಪತ್ತೆ
ಈ ಉತ್ಖನನ ಪ್ರಕ್ರಿಯೆ ಸೆಪ್ಟೆಂಬರ್ ನಲ್ಲಿ ಅಮೆನ್‌ಹೋಟೆಪ್ III ಮತ್ತು ಕಿಂಗ್ ರಾಮ್‌ಸೆಸ್ III ರ (Amenhotep III and King Ramses III) ದೇವಾಲಯಗಳ ನಡುವೆ ಪ್ರಾರಂಭವಾಗಿತ್ತು. ಈ ಸಮಯದಲ್ಲಿ ಉತ್ತಮ ಸ್ಥಿತಿಯಲ್ಲಿ ದೊಡ್ಡ ನಗರದ ಸೈಟ್ ನ್ನು ಸಂಶೋಧನಾ ತಂದ ಪತ್ತೆ ಹಚ್ಚಿದೆ. ಬಹುತೇಕ ಸಂಪೂರ್ಣ ಗೋಡೆಗಳು ಮತ್ತು ದೈನಂದಿನ ಬಳಕೆಯ ಸಾಧನಗಳಿಂದ ತುಂಬಿದ ಕೊಠಡಿಗಳು ಉತ್ಖನದಲ್ಲಿ ಸಿಕ್ಕಿವೆ ಎಂದು ವರದಿಯಾಗಿದೆ.
ಮರಳಿನಲ್ಲಿ ಹುದುಗಿ ಹೋಗಿದ್ದ ಅಟೆನ್ ನಗರ
ಇಡೀ ಅಟೆನ್ ನಗರ ಮರಳಿನಲ್ಲಿ ಹುದುಗಿ ಹೋಗಿತ್ತು ಎಂದು ಹೇಳಲಾಗುತ್ತದೆ. ಇದು ಜಗತ್ತಿನ ಅತ್ಯಂತ ಪ್ರಮುಖ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳಲ್ಲಿ ಒಂದಾಗಿದೆ.
ಅಮೆನ್‌ಹೋಟೆಪ್ III ರ ಮುದ್ರೆಗಳನ್ನು ಹೊಂದಿರುವ ಬಣ್ಣದ ಮಡಿಕೆಗಳು, ಆಭರಣಗಳು, ಮಣ್ಣಿನ ಇಟ್ಟಿಗೆಗಳಂತಹ ಅಮೂಲ್ಯವಾದ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳು ಕಂಡುಬಂದಿವೆ.
ಮುಂದುವರಿದ ಉತ್ಖನನ ಪ್ರಕ್ರಿಯೆ
ಸಂಶೋಧನಾ ತಂಡವು ಸಂಪತ್ತಿನಿಂದ ತುಂಬಿದ ಗೋರಿಗಳನ್ನು ಪತ್ತೆಮಾಡುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಉತ್ಖನನ ಕಾರ್ಯವನ್ನು ಮುಂದುವರಿಸಿವೆ. ಈ ಸಂಬಂಧ ವಿಶೇಷ ತಂಡದ ಜೊತೆಗೆ ಕೆಲಸ ನಡೆದಿದೆ ಎಂದು ಪುರಾತತ್ವ ಇಲಾಖೆ ತನ್ನ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದೆ.