
ಮುಂಡಗೋಡ : ಮಳೆ, ಬೆಳೆ ಸಂಪಾಯಿತಲೇ ಪರಾಕ್…..
ಇಂದು ಚವಡಳ್ಳಿಯ ಶ್ರೀಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ನಡೆದ ಕಾರಣಿಕವಾಗಿದೆ.
ಈ ವರ್ಷ ಉತ್ತಮ ಮಳೆಯಾಗಿ ಸಮೃದ್ಧಿಯ ಬೆಳೆ ಬರಲಿದೆ. ಅನ್ನದಾತನ ಕಷ್ಟಗಳು ದೂರ ಸರಿಯಲಿದೆ. ರೈತನಿಗೆ ಈ ವರ್ಷ ಮಳೆ, ಬೆಳೆ ಕೈ ಹಿಡಿಯಲಿದೆ ಎಂಬುದು ಈ ವರ್ಷದ ಕಾರಣಿಕದ ಅರ್ಥ ಎಂದು ಗೊರವಪ್ಪಜ್ಜರು ಹೇಳಿದರು.

ಚವಡಳ್ಳಿಯ ಶ್ರೀಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ನಡೆಯುವ ಕಾರಣಿಕವು ತುಂಬಾ ಪ್ರಸಿದ್ದಿಯನ್ನು ಪಡೆದಿದೆ.
ಚವಡಳ್ಳಿಯಲ್ಲಿ ಶ್ರೀಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವವು ಇಂದು ವಿಜೃಂಭಣೆಯಿಂದ ಜರುಗಿತು.

ಚವಡಳ್ಳಿ ಮತ್ತು ಕ್ಯಾಸನಕೇರಿ ಮಧ್ಯವಿರುವ ಬೃಹತ್ ಆಲದಮರದ ಅಡಿಯಲ್ಲಿರುವ ಶ್ರೀಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೆಯ ಅಂಗವಾಗಿ ಪೂಜಾ ಕಾರ್ಯಕ್ರಮ, ಶ್ರೀಮೈಲಾರಲಿಂಗೇಶ್ವರನ ಪಲ್ಲಕ್ಕಿ ಉತ್ಸವ ನಡೆಯಿತು.
ದೇವಸ್ಥಾನದಲ್ಲಿ ಸರಪಳಿ ಪವಾಡ, ಶಿವದಾರ ಪವಾಡ, ಶಸ್ತ್ರ ಪವಾಡ ಜರುಗಿತು.