ಮಾನವೀಯತೆ ಮೆರೆದ ಮುಂಡಗೋಡದ ಇನ್ನರ್ ವೀಲ್ ಕ್ಲಬ್

ಮುಂಡಗೋಡ : ಪತಿಯ ನಿಧನದ ನಂತರ ತನ್ನ 4 ಮಕ್ಕಳೊಂದಿಗೆ ಬಡತನದ ಹಲವಾರು ಸಂಕಷ್ಟದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿರುವ ಮಹಿಳೆಯೋರ್ವಳಿಗೆ ರವಿವಾರ ಮುಂಡಗೋಡದ ಇನ್ನರ್ ವೀಲ್ ಕ್ಲಬನವರು ದಿನನಿತ್ಯದ ಉಪಯೋಗಿಸುವ ಸಾಮಗ್ರಿಗಳ ಕಿಟ್ ನೀಡಿ ಮಾನವೀಯತೆ ಮೆರೆದಿದ್ದಾರೆ. ತೀರಾ ಸಂಕಷ್ಟದಲ್ಲಿರುವ ಮುಂಡಗೋಡ ತಾಲೂಕಿನ ಚವಡಳ್ಳಿ ಗ್ರಾಮದ ಲಲಿತಾ ಗೋಸಾವಿ ಎಂಬ ಮಹಿಳೆಗೆ ಇನ್ನರ್ ವೀಲ್ ಕ್ಲಬನವರು ದಿನನಿತ್ಯದ ಉಪಯೋಗದ ಸಾಮಾಗ್ರಿಗಳನ್ನು ನೀಡಿದರು. ಈ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಶಿರೇಖಾ ಬೈಜು, ಕಾರ್ಯದರ್ಶಿ ಸಂಗೀತಾ ಬಾಡ್ಕರ,…

Read More

ಪುಣೆಯ ಆರ್ಮಿ ಕ್ರೀಡಾಂಗಣಕ್ಕೆ ಚಿನ್ನದ ಹುಡುಗ ನೀರಜ್ ಚೋಪ್ರಾ ಹೆಸರು

ನವದೆಹಲಿ : ಭೂಸೇನೆಯಲ್ಲಿ ಸುಬೇದಾರ್ ಆಗಿರುವ 23 ವರ್ಷದ ನೀರಜ್ ಜತೆಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಇತರ ಸೈನಿಕರನ್ನೂ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ (ಎಎಸ್‌ಐ) ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಟೋಕಿಯೊ ಒಲಿಂಪಿಕ್ಸ್​ 2020 (Tokyo Olympics) ರಲ್ಲಿ ಭಾಗವಹಿಸಿದ್ದ, ದೇಶದ ರಕ್ಷಣಾ ಪಡೆಗಳಲ್ಲಿ ಕಾರ್ಯನಿರ್ವಹಿಸುವ ಕ್ರೀಡಾಪಟುಗಳನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್​ನಲ್ಲಿ (ಎಎಸ್‌ಐ) ಸನ್ಮಾನಿಸಿದರು. ಇದೇವೇಳೆ ಪುಣೆಯ ಆರ್ಮಿ ಕ್ರೀಡಾ ಸಂಸ್ಥೆಯಲ್ಲಿರುವ ಕ್ರೀಡಾಂಗಣಕ್ಕೆ ಅಥ್ಲೀಟ್‌ ನೀರಜ್‌ ಚೋಪ್ರಾ (Neeraj Chopra Stadium) ಹೆಸರನ್ನು…

Read More

ರಾಷ್ಟ್ರೀಯ ಕ್ರೀಡಾದಿನ ಆಚರಣೆ: ಕೋಚ್ ಕಾಶೀನಾಥ ನಾಯ್ಕಗೆ ಸನ್ಮಾನ

ಶಿರಸಿ: ರಾಷ್ಟ್ರೀಯ ಕ್ರೀಡಾದಿನದ ಅಂಗವಾಗಿ ರಾಷ್ಟ್ರೀಯ ಸೇನಾ ಅಕಾಡೆಮಿಯ ಜಾವೆಲಿನ್ ಕೋಚ್ ಕಾಶೀನಾಥ ನಾಯ್ಕ ಅವರನ್ನು ಕ್ರೀಡಾ ಇಲಾಖೆ ವತಿಯಿಂದ ಭಾನುವಾರ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಕಾಶೀನಾಥ ನಾಯ್ಕ, ಕ್ರೀಡಾ ಸಾಧಕನ ಜತೆ ತರಬೇತುದಾರರನ್ನೂ ಗುರುತಿಸಿದ್ದು ಅವಿಸ್ಮರಣೀಯ ಎಂದರು. ಸೇನೆಯಲ್ಲಿ ನಿವೃತ್ತಿಯಾದ ಬಳಿಕ ಶಿರಸಿಯಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪಿಸುವ ಗುರಿ ಇದೆ. ಖೇಲೊ ಇಂಡಿಯಾ ಸೇರಿದಂತೆ ಕ್ರೀಡೆಗೆ ಸಂಬಂಧಿಸಿದ ಸೌಲಭ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ’ ಎಂದರು. ‘ವಿದೇಶಿ ಕೋಚ್ ಗಳಿಗೆ ಸಿಕ್ಕ ಪ್ರೋತ್ಸಾಹ ಸ್ವದೇಶಿ ಕೋಚ್…

Read More

ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ: ಪೊಲೀಸ್ ವಶದಲ್ಲಿದ್ದ ಆರೋಪಿ ಸಾವು?

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಕುರಿತು ದೂರು ದಾಖಲಾಗಿದೆ. ಸದರಿ ಪ್ರಕರಣದಲ್ಲಿ ಪೊಲೀಸರ ವಶದಲ್ಲಿದ್ದ ಆರೋಪಿ ಮೃತಪಟ್ಟ ಘಟನೆ ಜರುಗಿದೆ. ದೂರು ಸ್ವೀಕರಿದ್ದ ಪೊಲೀಸರು ಪ್ರಕರಣದಲ್ಲಿ ಆರೋಪಿಯನ್ನು ವಿಚಾರಣೆಗಾಗಿ ಠಾಣೆಗೆ ಕರೆ ತಂದಿದ್ದರು ಎನ್ನಲಾಗಿದೆ. ಪೊಲೀಸರ ವಶದಲ್ಲಿದ್ದ ಆರೋಪಿ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ. ಮೃತ ಆರೋಪಿಯನ್ನು ಯಂಕಂಚಿ ಗ್ರಾಮದ ದೇವೇಂದ್ರ ಭೀಮರಾಯ ಸಂಗೋಗಿ ಎಂದು ಗುರುತಿಸಲಾಗಿದೆ. ಸದರಿ ಆರೋಪಿ ಡಾಬಾ ಮಾಲೀಕನಾಗುದ್ದು, ತನ್ನ ಡಾಬಾದಲ್ಲಿ ಕಾರ್ಮಿಕನ 13 ವರ್ಷದ ಅಪ್ರಾಪ್ತ ಮಗಳ ಮೇಲೆ…

Read More

ಆಗಸ್ಟ್ 29; ನರೇಂದ್ರ ಮೋದಿ ಮನ್ ಕೀ ಬಾತ್ ಮುಖ್ಯಾಂಶಗಳು

ನವದೆಹಲಿ : ಭಾರತದ ಪ್ರಧಾನಿ ನರೇಂದ್ರ ಮೋದಿ ‘ಮನ್ ಕೀ ಬಾತ್’ ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಆಗಸ್ಟ್ ತಿಂಗಳ ಮನ್ ಕೀ ಬಾತ್ ಕಾರ್ಯಕ್ರಮ ಇದಾಗಿತ್ತು. ಈ ಬಾರಿಯ ‘ಮನ್ ಕೀ ಬಾತ್‌’ನಲ್ಲಿ ನರೇಂದ್ರ ಮೋದಿ ಒಲಂಪಿಕ್ಸ್‌ನಲ್ಲಿ ಕ್ರೀಡಾಪಟುಗಳ ಸಾಧನೆ, ಕೃಷ್ಣ ಜನ್ಮಾಷ್ಠಾಮಿ, ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಮಾತನಾಡಿದರು. ದೇಶದ ಜನರಿಗೆ ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳನ್ನು ನರೇಂದ್ರ ಮೋದಿ ಕೋರಿದರು. “ಒಲಿಂಪಿಕ್ಸ್‌ ಹಾಕಿಯಲ್ಲಿ ನಾವು 40 ವರ್ಷಗಳ ಬಳಿಕ ಪದಕ ಗೆದ್ದೆವು….

Read More

ಅತ್ಯಾಚಾರ ಆರೋಪಿಗಳನ್ನು ಎನ್ ಕೌಂಟರ್ ಮಾಡಿ; ಪೊಲೀಸರು ದಿಟ್ಟತನ ತೋರಿಸಿ; ಶಾಸಕ ಸಾ.ರಾ. ಮಹೇಶ್ ಆಗ್ರಹ

ಮೈಸೂರು: ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಸಾ.ರಾ. ಮಹೇಶ್, ಆರೋಪಿಗಳನ್ನು ಎನ್ ಕೌಂಟರ್ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಅತ್ಯಾಚಾರದಂತಹ ಪ್ರಕರಣ ನಡೆದಾಗ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಮತ್ತೆ ಅಂತಹ ನೀಚ ಘಟನೆಗಳು ಮರುಕಳಿಸಲ್ಲ, ಆರೋಪಿಗಳಲ್ಲಿ ಭಯ ಹುಟ್ಟಿಸುತ್ತದೆ. ಇಂಥ ಘಟನೆ ನಡೆದಾಗ ಆರೋಪಿಗಳನ್ನು ಎನ್ ಕೌಂಟರ್ ಮಾಡುವ ದಿಟ್ಟತನವನ್ನು ಪೊಲೀಸರು ತೋರಿಸಬೇಕು ಎಂದರು. ಕಾನೂನಿನಲ್ಲಿ ತೊಡಕಿದೆ ಎಂಬ ಅರಿವು ನನಗೂ ಇದೆ. ಆರೋಪಿಗಳ…

Read More

ಮಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ : ನಾಯಂಡಹಳ್ಳಿ – ಕೆಂಗೇರಿ ನಡುವಿನ ಮೆಟ್ರೋ ಸಂಚಾರ ಆರಂಭ

ಬೆಂಗಳೂರು : ಈಗಾಗಲೇ ಸಿಲಿಕಾನ್ ಸಿಟಿಯ ವಿವಿಧ ಭಾಗಗಳಿಗೆ ನಮ್ಮ ಮೆಟ್ರೋ ಸಂಚಾರ ಆರಂಭಗೊಂಡಿದೆ. ಇದೀಗ ಮುಂದುವರೆದು ನಾಯಂಡಹಳ್ಳಿ – ಕೆಂಗೇರಿ ನಡುವಿನ ಮೆಟ್ರೋ ವಿಸ್ತರಿತ ಮಾರ್ಗ ಆರಂಭಗೊಂಡಿದೆ. ಈ ಮೂಲಕ ಇನ್ಮುಂದೆ ನಾಯಂಡಹಳ್ಳಿಯಿಂದ ಕೆಂಗೇರಿಯವರೆಗೆ ಮಟ್ರೋ ಸಂಚಾರವಿದ್ದು, ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಬೆಂಗಳೂರಿನ ನಾಯಂಡಹಳಅಳಿ – ಕೆಂಗೇರಿ ನಡುವಿನ ಮೆಟ್ರೋ ವಿಸ್ತರಿತ ಮಾರ್ಗಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕ 7.5 ಕಿಲೋಮೀಟರ್…

Read More

ಕೊರೋನಾದಿಂದ ಚೇತರಿಸಿಕೊಂಡವರಿಗೆ ಕೋವ್ಯಾಕ್ಸಿನ್‌ ಒಂದೇ ಡೋಸ್ ಸಾಕು: ಅಧ್ಯಯನ

ನವದೆಹಲಿ: ಕೊರೋನಾದಿಂದ ಚೇತರಿಸಿಕೊಂಡವರಿಗೆ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್‌ನ ಒಂದು ಡೋಸ್ ಲಸಿಕೆ ಸಾಕಾಗಬಹದು ಎಂದು ಐಸಿಎಂಆರ್ ಅಧ್ಯಯನವೊಂದು ತಿಳಿಸಿದೆ. ಈ ಹಿಂದೆ ಕೋವಿಡ್ -19 ಸೋಂಕಿತ ವ್ಯಕ್ತಿಗಳಲ್ಲಿ ಭಾರತ್ ಬಯೋಟೆಕ್‌ನ ಕೋವಾಕ್ಸಿನ್‌ನ ಒಂದು ಡೋಸ್ ಲಸಿಕೆಯು ಎರಡು ಡೋಸ್‌ಗಳಷ್ಟು ಪ್ರತಿಕಾಯ ಪ್ರತಿಕ್ರಿಯೆಯನ್ನು ಪಡೆಯುತ್ತದೆ. ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಪ್ರತಿರೋಧಕ ಶಕ್ತಿಯು ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತದೆ ಎಂದು ಐಸಿಎಂಆರ್ ಅಧ್ಯಯನ ತಿಳಿಸಿದ್ದು, ಈ ಅಧ್ಯಯನವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪತ್ರಿಕೆಯಲ್ಲಿ ಶನಿವಾರ ಪ್ರಕಟಿಸಲಾಗಿದೆ. “ದೊಡ್ಡ ಜನಸಂಖ್ಯೆಯ ಅಧ್ಯಯನಗಳಲ್ಲಿ ನಮ್ಮ ಪ್ರಾಥಮಿಕ…

Read More

ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

ಬೀದರ್‌: ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಒಟ್ಟು 30 ಪರೀಕ್ಷಾ ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ) ನಡೆಯಿತು. 9,241 ಅಭ್ಯರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿದ್ದರು. 8,891 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 350 ಮಂದಿ ಜೀವವಿಜ್ಞಾನ ಪರೀಕ್ಷೆಗೆ ಗೈರಾದರು. ಬೀದರ್‌ನ 17 ಪರೀಕ್ಷಾ ಕೇಂದ್ರಗಳಲ್ಲಿ 4,614, ಔರಾದ್‌ನ ಅಮರೇಶ್ವರ ಪದವಿ ಪೂರ್ವ ಕಾಲೇಜಿನ ಒಂದು ಪರೀಕ್ಷಾ ಕೇಂದ್ರದಲ್ಲಿ 458, ಬಸವಕಲ್ಯಾಣದ ನಾಲ್ಕು ಪರೀಕ್ಷೆ ಕೇಂದ್ರಗಳಲ್ಲಿ 1,142, ಹುಮನಾಬಾದ್‌ನ ಮೂರು ಪರೀಕ್ಷಾ ಕೇಂದ್ರಗಳಲ್ಲಿ 863. ಭಾಲ್ಕಿಯ…

Read More

ಶಿರಾ: ರಸ್ತೆ ಅಪಘಾತದಲ್ಲಿ ದಂಪತಿ ಸಾವು

ಶಿರಾ: ರಾಷ್ಟ್ರೀಯ ಹೆದ್ದಾರಿ-48ರ ಶಿರಾ ಬೈಪಾಸ್‌ನಲ್ಲಿ ಶನಿವಾರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ದಂಪತಿ ಮೃತಪಟ್ಟಿದ್ದಾರೆ. ಹಾವೇರಿ ಮೂಲದ ವಿನಾಯಕಸ್ವಾಮಿ ಬೆಳಗಿ ಹಾಗೂ ಅವರ ಪತ್ನಿ ಶಿಲ್ಪ ಮೃತರು. ಸಾಪ್ಟ್‌ವೇರ್ ಎಂಜಿನಿಯರ್ ಆಗಿದ್ದು, ಬೆಂಗಳೂರಿನ ಅಂತನಕೆರೆಯ ಎಂ.ಎಸ್.ರಾಯಲ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ. ಹಾವೇರಿಯಿಂದ ಬೆಂಗಳೂರಿಗೆ ವ್ಯಾಗನರ್ ಕಾರಿನಲ್ಲಿ ತೆರಳುತ್ತಿದ್ದ ಸಮಯದಲ್ಲಿ ಕಾರಿನ ಟೈರ್ ಸಿಡಿದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಶಿಲ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ವಿನಾಯಕ ಸ್ವಾಮಿಬೆಳಗಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುತ್ತಿದ್ದ ಸಮಯದಲ್ಲಿ…

Read More