Headlines

ಗಣೇಶ ಚತುರ್ಥಿ ಆಚರಿಸಲು ಅವಕಾಶ ಕೊಡಿ : ಹಿಂ.ಜಾ.ವೇ.

ಮುಂಡಗೋಡ : ಗಣೇಶ ಚತುರ್ಥಿ‍ ಆಚರಿಸಲು ಅವಕಾಶ ಮಾಡಿಕೊಡಬೇಕೆಂದು ಹಿಂದು ಜಾಗರಣಾ ವೇದಿಕೆಯವರು ಇಂದು ತಹಶೀಲದಾರರಿಗೆ ಮನವಿ ಸಲ್ಲಿಸಿದ್ದಾರೆ. ಈ ವರ್ಷ ಸರಕಾರ ನಿರ್ಬಂಧಗಳನ್ನು ಹೇರಿ ಕೋವಿಡ್ ಹೆಸರಿನಲ್ಲಿ ಪರೋಕ್ಷವಾಗಿ ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆ ಬಂದ್ ಮಾಡಲು ಯತ್ನಿಸುತ್ತಿರುವುದು ಹಿಂದುಗಳ ಧಾರ್ಮಿಕ ಮತ್ತು ಸಾಮಾಜಿಕ ಹಕ್ಕನ್ನು ಕಸಿದಂತೆ ಆಗಿದೆ. ಗಣೇಶ ಚತುರ್ಥಿ ಆಚರಣೆಗೆ ನಿರ್ಬಂಧ ಹೇರದೆ ಗಣೇಶ ಚತುರ್ಥಿ ಆಚರಿಸಲು ಅನುವು ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಹಿಂದು ಜಾಗರಣಾ ವೇದಿಕೆಯ ತಾಲೂಕಾ ಅಧ್ಯಕ್ಷ…

Read More

1ರಿಂದ 8 ನೇ ತರಗತಿ ವರೆಗೆ ಶಾಲೆ ಆರಂಭ: ಆಗಸ್ಟ್ 30ರ ಸಭೆಯಲ್ಲಿ ತೀರ್ಮಾನ

ಬೆಳಗಾವಿ: 1 ರಿಂದ 8ನೇ ತರಗತಿಯವರೆಗೆ ಶಾಲೆಗಳು ಆರಂಭಿಸುವ ಕುರಿತು ಆಗಸ್ಟ್ 30ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.ಶಾಲೆ ಆರಂಭಕ್ಕೆ ಪೋಷಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ತಾಂತ್ರಿಕ ಸಮಿತಿಯಲ್ಲಿರುವ ಡಾ. ದೇವಿ ಪ್ರಸಾದ್ ಶೆಟ್ಟಿಯವರು 6 ರಿಂದ 8ನೇ ತರಗತಿ ಆರಂಭ ಮಾಡಬಹುದು ಎಂದು ಹೇಳಿದ್ದಾರೆ. ಆಗಸ್ಟ್ 30ರಂದು ಸಭೆ ಸೇರಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಅವರು ಮಾಹಿತಿ…

Read More

ಮೈಸೂರು ಗ್ಯಾಂಗ್ ರೇಪ್ ಪ್ರಕರಣ: ಪೊಲೀಸರಿಗೆ ಸಿಕ್ಕ ಸುಳಿವು..?

ಬೆಂಗಳೂರು: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮೈಸೂರಿನ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೊಲೀಸರಿಗೆ  ಸುಳಿವು ಸಿಕ್ಕಿದೆ ಎನ್ನಲಾಗಿದೆ. ವಿದ್ಯಾರ್ಥಿನಿ ಮೇಲೆ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.ಮೈಸೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಕೇರಳ ಮೂಲದ ಮೂವರು ಹಾಗೂ ತಮಿಳುನಾಡಿನ ಓರ್ವ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ. ಘಟನೆ ಬಳಿಕ ಈ ನಾಲ್ವರು ವಿದ್ಯಾರ್ಥಿಗಳು ತಲೆ ಮರೆಸಿಕೊಂಡಿದ್ದು, ಬೆಂಗಳೂರು ಮತ್ತು…

Read More

ನಾಳೆಯಿಂದ ಸಿಇಟಿ-2021 ಪರೀಕ್ಷೆ : ಪ್ರತಿ ಕೊಠಡಿಯಲ್ಲಿ 24 ಅಭ್ಯರ್ಥಿಗಳು, ಒಂದು ಡೆಸ್ಕಿಗೆ ಇಬ್ಬರಿಗೆ ಅವಕಾಶ

28ರಂದು ಬೆಳಿಗ್ಗೆ 10.30ರಿಂದ 11.50ರ ವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರ ವರೆಗೆ ಗಣಿತದ ಪರೀಕ್ಷೆ 29ರಂದು ಬೆಳಿಗ್ಗೆ 10.30ರಿಂದ 11.50ರ ವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರ ವರೆಗೆ ರಸಾಯನಶಾಸ್ತ್ರ ಪರೀಕ್ಷೆ 30ರಂದು ಬೆಳಗ್ಗೆ 11.30ರಿಂದ 12.50 ರ ವರೆಗೆ ಹೊರನಾಡು, ಗಡಿನಾಡ ಕನ್ನಡಿಗ ಹಾಗೂ ಕನ್ನಡಿಗ ಅಭ್ಯರ್ಥಿಗಳಿಗೆ ಪರೀಕ್ಷೆ ಬೆಂಗಳೂರು: 2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಾಳೆಯಿಂದ ರಾಜ್ಯದಲ್ಲಿ ನಡೆಯಲಿದೆ.ಈ ಸಂಬಂಧ ಶುಕ್ರವಾರ ಬೆಂಗಳೂರಿನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಉನ್ನತ…

Read More

ಕರ್ನಾಟಕದಲ್ಲಿ ಶುಕ್ರವಾರ ಹೊಸದಾಗಿ 1,301 ಜನರಿಗೆ ಕೊರೊನಾ ಸೋಂಕು

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಶುಕ್ರವಾರ (ಆಗಸ್ಟ್ 27) ಹೊಸದಾಗಿ 1,301 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ.ಇದೇ ಸಮಯದಲ್ಲಿ 17 ಕೊರೊನಾ ಸೋಂಕಿತರ ಸಾವು ಸಂಭವಿಸಿದೆ.ಇದೇ ಸಮಸದಲ್ಲಿ 1614 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,44,764 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 28,88,520 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 37,248 ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 18,970 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.ಬೆಂಗಳೂರಿನಲ್ಲಿ…

Read More

ಶಿರಸಿ: ಉರುಳಿಗೆ ಸಿಲುಕಿ ಕಪ್ಪು ಚಿರತೆ ಸಾವು

ಶಿರಸಿ: ಕಾಡು ಪ್ರಾಣಿ ಸೆರೆ ಹಿಡಿಯಲು ಹಾಕಿದ್ದ ಉರುಳಿಗೆ ಅಪರೂಪದ ಕರಿ ಚಿರತೆಯೊಂದು ಸಿಲುಕಿಕೊಂಡು ಪ್ರಾಣಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದ ಹುಲೆಮಳಗಿ- ಮಂಟಕಾಲ ಮಧ್ಯೆ ನಡೆದಿದೆ.ಕಪ್ಪು ಚಿರತೆಯನ್ನು ಅಪರೂಪದ್ದು ಎಂದು ಹೇಳಲಾಗುತ್ತದೆ. ಮೃತ ಕಪ್ಪು ಚಿರತೆ ಹೆಣ್ಣಾಗಿದೆ. ಬನವಾಸಿ ಅರಣ್ಯ ಭಾಗದಲ್ಲಿ ಪತ್ತೆಯಾದ ಪತ್ತೆಯಾದ ಮೊದಲ ಕಪ್ಪು ಚಿರತೆ ಇದಾಗಿದ್ದು, ಅಂದಾಜು 4 ವರ್ಷದ ಇರಬಹುದು ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.

Read More

ಮೈಸೂರು ಗ್ಯಾಂಗ್​ರೇಪ್​ ಪ್ರಕರಣ: ತನಿಖಾಧಿಕಾರಿಗಳಿಗೆ ತಲೆನೋವಾದ ಸಂತ್ರಸ್ತೆಯ ನಡೆ!

ಮೈಸೂರು: ಚಾಮುಂಡಿ ತಪ್ಪಲಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್​ರೇಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಪ್ರಕ್ರಿಯೆಗೆ ಸಂತ್ರಸ್ತೆ ಅಸಹಕಾರ ನೀಡುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ. ಪೊಲೀಸ್ ಹೇಳಿಕೆ ನೀಡಲೂ ಸಹ ಸಂತ್ರಸ್ತೆ ನಿರಾಕರಿಸುತ್ತಿದ್ದಾಳೆ. ಇದುವರೆಗೂ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ಮಾತ್ರ ಆಕೆ ಸಂಭಾಷಣೆ ನಡೆಸಿದ್ದಾಳೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ ಪ್ರಮೀಳಾ ನಾಯ್ಡು ಅವರ ಭೇಟಿಗೂ ಸಂತ್ರಸ್ತೆ ಒಪ್ಪುತ್ತಿಲ್ಲ. ಸಂತ್ರಸ್ತೆ ನನ್ನನ್ನು ಯಾರೂ, ಏನನ್ನೂ…

Read More

ನೀವು ಎಲ್ಲೇ ಅವಿತಿದ್ದರೂ ಹೆಕ್ಕಿ ಹೆಕ್ಕಿ ಕೊಲ್ಲುತ್ತೇವೆ; ಅಮೆರಿಕ ಯೋಧರನ್ನು ಕೊಂದ ಉಗ್ರರಿಗೆ ಎಚ್ಚರಿಕೆ ನೀಡಿದ ಜೋ ಬೈಡನ್​

ವಾಷಿಂಗ್ಟನ್ : ನೀವು ನಮ್ಮ ತಂಟೆಗೆ ಬಂದು ತಪ್ಪು ಮಾಡಿದ್ದೀರಿ. ಇದಕ್ಕೆ ತಕ್ಕ ಪಾಠವನ್ನು ಕಲಿಯುತ್ತೀರಿ. ಎಲ್ಲೇ ಹೋಗಿ ಅವಿತರೂ ನಿಮ್ಮನ್ನು ಹುಡುಕಿ ಕೊಲ್ಲುವುದು ನಮಗೆ ಗೊತ್ತಿದೆ: ಉಗ್ರರಿಗೆ ಖಡಕ್​ ಸಂದೇಶ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅಫ್ಘಾನಿಸ್ತಾನದ ಕಾಬೂಲ್​​ನಲ್ಲಿ ಸರಣಿ ಸ್ಫೋಟದಲ್ಲಿ ಅಮೆರಿಕ ಯೋಧರೂ ದುರ್ಮರಣಕ್ಕೀಡಾಗಿದ್ದು, ಉಗ್ರರ ಈ ದುಷ್ಕೃತ್ಯದ ವಿರುದ್ಧ ಅಮೆರಿಕ ಕೆಂಡಾಮಂಡಲವಾಗಿದೆ. ಸ್ಫೊಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಸಂಘಟನೆಗೆ ಖಡಕ್​ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಅಮೆರಿಕ ವಿರುದ್ಧ ದಾಳಿ…

Read More

ಕಾಬೂಲ್‌ ಐಸಿಸ್‌ ದಾಳಿ: ಅಮೆರಿಕದ 13 ಯೋಧರ ಸಾವು, ಖಚಿತ ಪಡಿಸಿದ ಪೆಂಟಗನ್‌

ವಾಷಿಂಗ್ಟನ್‌: ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಕಾಬೂಲ್‌ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಡೆ ನಡೆಸಿರುವ ಬಾಂಬ್‌ ದಾಳಿಯಲ್ಲಿ ಅಮೆರಿಕದ ಹದಿಮೂರು ಯೋಧರು ಸಾವಿಗೀಡಾಗಿದ್ದು, 18 ಯೋಧರು ಗಾಯಗೊಂಡಿದ್ದಾರೆ. ಐಸಿಸ್ ಉಗ್ರರ ಇತ್ತೀಚಿನ ಭೀಕರ ದಾಳಿ ಇದಾಗಿದೆ ಎಂದು ಪೆಂಟಗನ್‌ ಹೇಳಿದೆ. ಗುರುವಾರ ವಿಮಾನ ನಿಲ್ದಾಣದ ಹೊರ ಭಾಗದಲ್ಲಿ ಭದ್ರತೆಗೆ ನಿಯೋಜನೆಯಾಗಿದ್ದ ಅಮೆರಿಕದ ಯೋಧರು ಮತ್ತು ನಾಗರಿಕರ ಮೇಲೆ ಐಸಿಸ್‌ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಮೆರಿಕದ ಸೆಂಟ್ರಲ್‌ ಕಮಾಂಡ್‌ನ ಕಮಾಂಡರ್‌ ಜನರಲ್‌ ಕೆನೆತ್‌ ಫ್ರಾಂಕ್ಲಿನ್‌ ಮೆಕೆಂಜಿ…

Read More

ಇಲ್ಲಿವರೆಗೆ 61 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ : ಶೇ 50ರಷ್ಟು ಫಲಾನುಭವಿಗಳಿಗೆ ಮೊದಲ ಡೋಸ್

ನವದೆಹಲಿ : ಗುರುವಾರದ ವರೆಗೆ ದೇಶದಲ್ಲಿ 61 ಕೋಟಿಗೂ ಹೆಚ್ಚು ಕೋವಿಡ್-19 ಲಸಿಕೆಗಳನ್ನು (Covid 19 vaccine)ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ (Health minister)ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ. ಕೋವಿಡ್ ಲಸಿಕೆಯ ಮೊದಲ ಡೋಸ್ ನೊಂದಿಗೆ ಶೇಕಡಾ ಐವತ್ತರಷ್ಟು ಅರ್ಹ ಭಾರತೀಯರಿಗೆ ಚುಚ್ಚುಮದ್ದು ನೀಡಿದ ಕಾರಣ ಭಾರತ ಮೈಲಿಗಲ್ಲು (milestone ) ಸಾಧಿಸಿದೆ ಎಂದು ಅವರು ಹೇಳಿದರು. ‘ಭಾರತ ಅಭೂತಪೂರ್ವ ಮೈಲಿಗಲ್ಲು ಸಾಧಿಸಿದೆ! 50% ಅರ್ಹ ಜನಸಂಖ್ಯೆಯು #COVID19 ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಅದನ್ನು…

Read More