ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜೆಸಿಬಿ ಬಳಸಿ ಕೆಲಸ ಮಾಡಿದರೆ ಕ್ರಮ : ಒಂಬುಡ್ಸಮನ್ ಆರ್.ಜಿ.ನಾಯಕ

ಮುಂಡಗೋಡ : ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜೆಸಿಬಿ ಬಳಸಿ ಕೆಲಸ ಮಾಡುವುದಾಗಲಿ ಇಲ್ಲವೇ ಇದಕ್ಕೆ ಸಂಬಂಧಿಸಿದ ಯಾವುದೇ ದೂರು ನೀಡಿದರೆ ಅದನ್ನು ಸಮಗ್ರವಾಗಿ ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇನೆ ಎಂದು ಒಂಬುಡ್ಸಮನ್ ಆರ್.ಜಿ.ನಾಯಕ ತಿಳಿಸಿದರು. ಇಂದು ನಾಗನೂರು, ಕೋಡಂಬಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡುವುದಕ್ಕೂ ಮೊದಲು ಅವರು ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಯಂತ್ರಗಳನ್ನು ಬಳಸಿ ಕೆಲಸ ಮಾಡಲಾಗಿದೆ ಎಂಬ ದೂರು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಎರಡೂ ಪಂಚಾಯತಿಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ….

Read More

ವಿಜೇತರ ಹೆಸರು ಗೊತ್ತಿಲ್ಲದವರು ಅಧ್ಯಕ್ಷರಾಗಿರೋದು ದುರಂತ: ಕಾಶಿನಾಥ ನಾಯ್ಕ

ಕಾರವಾರ : ಕಾಮನ್‌ವೆಲ್ತ್ ಗೇಮ್ಸ್ ಪದಕ ಗೆದ್ದವರ ಹೆಸರೇ ಗೊತ್ತಿಲ್ಲದವರು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷರೋ ಅಥವಾ ಹೊರ ದೇಶದ ಅಧ್ಯಕ್ಷರೋ ಎಂದು ಕಾಶಿನಾಥ ನಾಯ್ಕ ಬೇಸರದ ಜೊತೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ನನ್ನ ಹೆಸರು ಅಡಿಲ್ಲೆ ಸುಮರಿವಾಲ್ಲಾ ಅವರಿಗೆ ಗೊತ್ತಿಲ್ಲದೆ ಇರೋದು ದುರಂತ.ಇವರಿಗೆ ಕಾಮನ್‌ವೆಲ್ತ್ ಗೇಮ್ಸ್​​ನಲ್ಲಿ ಪದಕ ಪಡೆದವರ ಹೆಸರೇ ಗೊತ್ತಿಲ್ಲ ಎಂಬುದು ನೋವುಂಟು ಮಾಡಿದೆ. ಅಲ್ಲದೆ ಆಶ್ಚರ್ಯದ ಜೊತೆ ಜೊತೆಗೆ ನಗು ಕೂಡ ಬಂದಿದೆ. ಇವರು…

Read More

ಮನೆಯಲ್ಲಿರುವ ಕೋವಿಡ್ ಸೋಂಕಿತರನ್ನು ಕೇರ್ ಸೆಂಟರ್‌ಗೆ ಸ್ಥಳಾಂತರ ಮಾಡಲು ಸಿಎಂ ಸೂಚನೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪಾಸಿಟಿವಿಟಿ ಪ್ರಮಾಣ ಇಳಿಸಬೇಕು. ಅದಕ್ಕಾಗಿ ಮನೆಯಲ್ಲಿರುವ ಕೋವಿಡ್ ಸೋಂಕಿತರನ್ನು ವೈಜ್ಞಾನಿಕ ರೀತಿಯಲ್ಲಿ ವಿಂಗಡಿಸಿ ವಾರದೊಳಗೆ ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು. ದ.ಕ. ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ಕೋವಿಡ್-19 ನಿಯಂತ್ರಣ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್ ಎರಡನೇ ಅಲೆಯನ್ನು ಜಿಲ್ಲೆ ಚೆನ್ನಾಗಿ ನಿಭಾಯಿಸಿದೆ. ಆದರೆ, ಒಂದು ತಿಂಗಳಿನಿಂದ ಕೋವಿಡ್ ಸಂಖ್ಯೆ ಹೆಚ್ಚುತ್ತಿದೆ. ಸಕ್ರಿಯ…

Read More

ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ನಾನಲ್ಲ : ವಿಜಯೇಂದ್ರ

ಕಲಬುರ್ಗಿ : ‘ನಾನು ಉಪ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನನಗೆ ಸಚಿವ ಸ್ಥಾನ ಕೊಡಿಸಲು ತಂದೆಯವರಾದ ಬಿ.ಎಸ್‌. ಯಡಿಯೂರಪ್ಪ ಹೈಕಮಾಂಡ್‌ ಮೇಲೆ ಒತ್ತಡ ಹೇರಿಲ್ಲ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದರು. ನಗರದಲ್ಲಿರುವ ಪಕ್ಷದ ಕಚೇರಿಗೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನಗೇನೂ 77-78 ವರ್ಷ ವಯಸ್ಸಾಗಿಲ್ಲ. ಸದ್ಯಕ್ಕೆ 45 ವರ್ಷಗಳಾಗಿದ್ದು, ಮುಂದೆ ಪಕ್ಷದಲ್ಲಿ ಉನ್ನತ ಹುದ್ದೆಗಳು ದೊರೆಯಬಹುದು. ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ…

Read More

ವಿಧಾನಸೌಧದ ಬಳಿ ಏಕಾಂಗಿಯಾಗಿ ಮೌನ ಪ್ರತಿಭಟನೆಗೆ ಕುಳಿತ ಶಾಸಕ

ಬೆಂಗಳೂರು : ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ತಮ್ಮ ಕ್ಷೇತ್ರವನ್ನು ಅತಿವೃಷ್ಟಿ ತಾಲೂಕು ಪಟ್ಟಿಯಲ್ಲಿ ಸೇರಿಸಿ ಮನೆ, ಬೆಳೆ ಹಾನಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಇಂದು ಧರಣಿ ನಡೆಸಿದರು. ವಿಧಾನಸೌಧ, ವಿಕಾಸಸೌಧದ ನಡುವೆ ಇರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ಮಾಲಾರ್ಪಣೆ ಮಾಡಿ ಪ್ರತಿಮೆ ಬಳಿ ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಂ.ಪಿ.ಕುಮಾರಸ್ವಾಮಿ, ಕಳೆದ ಎರಡು ವರ್ಷದಿಂದ ಮೂಡಿಗೆರೆ ಕ್ಷೇತ್ರ ಪ್ರವಾಹಕ್ಕೆ ತುತ್ತಾಗಿದೆ. ಆದರೂ ಪರಿಹಾರ ಕೊಡುವಲ್ಲಿ ಅನ್ಯಾಯವಾಗಿದೆ. ಅಲ್ಲದೆ…

Read More

ಅಪಘಾತದಲ್ಲಿ ಮೃತಪಟ್ಟ ಗಂಡನ ನೆನಪಿಗಾಗಿ ದೇವಾಲಯ ಕಟ್ಟಿದ ಪತ್ನಿ

ಹೈದರಾಬಾದ್ : ಅಪಘಾತದಲ್ಲಿ ಮೃತಪಟ್ಟ ಗಂಡನ ನೆನಪಿಗಾಗಿ ದೇವಾಲಯ ಕಟ್ಟಿಸಿ ಅಲ್ಲಿ ಗಂಡನ ಮೂರ್ತಿಯನ್ನೇ ಇಟ್ಟು ಪೂಜೆ ಮಾಡುತ್ತಿದ್ದಾರೆ ಪದ್ಮಾವತಿ. ಹೌದು, ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು , ಗೌರವಾನ್ವಿತ ವ್ಯಕ್ತಿಗಳಿಗಾಗಿ ಗುಡಿಕಟ್ಟಿಸುವ ಟ್ರೆಂಡ್ ನಡೆಯುತ್ತಿದೆ. ಕೆಲ ದಿನಗಳ ಹಿಂದೆ ದಿವಂಗತ ಪತಿ ಕನಸಲ್ಲಿ ಬಂದಿದ್ದು, ದೇವಾಲಯ ನಿರ್ಮಾಣ ಮಾಡಲು ಕೇಳಿಕೊಂಡಿದ್ದರಂತೆ. ಹೀಗಾಗಿ ಮಹಿಳೆ ತನ್ನ ಪತಿಗಾಗಿ ಗುಡಿ ಕಟ್ಟಿಸಿರುವುದಾಗಿ ಹೇಳಿಕೊಂಡಿದ್ದಾರೆ.ಈ ಅಪರೂಪದ ಪ್ರಸಂಗ ನಡೆದಿರುವುದು ಆಂಧ್ರಪ್ರದೇಶದಲ್ಲಿ. ಅಷ್ಟೇ ಅಲ್ಲ ದೇವಾಲಯದಲ್ಲಿ ಹಸಿದವರಿಗೆ ಬಡವರಿಗೆ ಅನ್ನದಾನ ಮಾಡುವುದಾಗಿಯೂ ಮಹಿಳೆ…

Read More

ಬೆಂಗಳೂರಲ್ಲಿ ಆಗಸ್ಟ್‌ನ ಮೊದಲ 10 ದಿನಗಳಲ್ಲಿ 499 ಮಕ್ಕಳಿಗೆ ಕೋವಿಡ್

ಬೆಂಗಳೂರು: ನಗರದಲ್ಲಿ ಆಗಸ್ಟ್ ಮೊದಲ ಹತ್ತು ದಿನಗಳಲ್ಲಿ 499 ಮಕ್ಕಳಲ್ಲಿ ಕೋವಿಡ್ -19 ದೃಢಪಟ್ಟಿದ್ದು, ಪೋಷಕರಲ್ಲಿ ಆತಂಕಕ್ಕೆ ಎಡೆಮಾಡಿದೆ. ಹೆಲ್ತ್ ಬುಲೆಟಿನ್ ಪ್ರಕಾರ, 9 ವರ್ಷದೊಳಗಿನ ಸುಮಾರು 88 ಮಕ್ಕಳು ಮತ್ತು 10 ರಿಂದ 19 ವರ್ಷದೊಳಗಿನ 305 ಮಂದಿ ಕೊರೊನಾ ವೈರಸ್‌ ತಗುಲಿರುವುದು ದೃಢಪಟ್ಟಿದೆ. 499 ಪ್ರಕರಣಗಳ ಪೈಕಿ, ಕಳೆದ ಐದು ದಿನಗಳಲ್ಲಿ 263 ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ 88 ಪ್ರಕರಣಗಳು 9 ವರ್ಷದೊಳಗಿನವರಾಗಿದ್ದರೆ, 175 ಪ್ರಕರಣ 10 ರಿಂದ 19 ವರ್ಷ ವಯಸ್ಸಿನವರಾಗಿದ್ದಾರೆ. ಆರೋಗ್ಯ ಇಲಾಖೆಯು…

Read More

ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ 10 ವರ್ಷದ ಬಾಲಕಿ: ಅಪಾಯಿಂಟ್ಮೆಂಟ್‌ ಸಿಕ್ಕಿದ್ದು ಹೇಗೆ ಗೊತ್ತಾ..?

ಅಹ್ಮದ್‌ನಗರದ ಸಂಸತ್ ಸದಸ್ಯ ಡಾ. ಸುಜಯ್ ವಿಖೆ ಪಾಟೀಲ್ ಮಗಳಾದ ಮತ್ತು ಮಹಾರಾಷ್ಟ್ರದ ಹಿರಿಯ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರ ಮೊಮ್ಮಗಳಾದ ಅನೀಶಾ, ಪ್ರಧಾನಿ ಮೋದಿಯವರನ್ನು ಭೇಟಿಯಾಗಲು ಹತಾಶಳಾಗಿದ್ದಳು ಮತ್ತು ತನ್ನನ್ನು ಕರೆದುಕೊಂಡು ಹೋಗುವಂತೆ ತನ್ನ ತಂದೆಯನ್ನು ಕೇಳುತ್ತಿದ್ದಳು. ಆದರೆ ಪ್ರಧಾನಮಂತ್ರಿ ಕಾರ್ಯನಿರತ ವ್ಯಕ್ತಿಯಾಗಿದ್ದರಿಂದ ಮತ್ತು ಅವಳಿಗೆ ಅಪಾಯಿಂಟ್‌ಮೆಂಟ್ ನೀಡಲು ಸಾಧ್ಯವಾಗದಿರುವುದರಿಂದ ಅವಳು ಕೇಳುತ್ತಿರುವುದು ಕಷ್ಟದ ಕೆಲಸ ಎಂದು ತಂದೆ ಅವಳಿಗೆ ವಿವರಿಸಿದ್ದರು. ನಂತರ ಬೇರೆ ದಾರಿ ಕಾಣದೆ ಅನೀಶಾ ಒಂದು ದಿನ ತನ್ನ ತಂದೆಯ…

Read More

ತಾಂತ್ರಿಕ ದೋಷದಿಂದ ಜಿಎಸ್​ಎಲ್​ವಿ-ಎಫ್​10 ಮಿಷನ್ ವಿಫಲ: ಇಸ್ರೋ

ನವದೆಹಲಿ: ಇಂದು (ಆಗಸ್ಟ್​ 12) ಬೆಳಗ್ಗೆ 5.43ರಲ್ಲಿ ಆಂಧ್ರ ಪ್ರದೇಶದ ಶ್ರೀಹರಿಕೋಟ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಿದ್ದ ಭೂ ನಿಗಾವಣೆಯ ಸ್ಯಾಟಲೈಟ್​ ಇಒಎಸ್​-03 ತಾಂತ್ರಿಕ ಅಡಚಣೆಯಿಂದಾಗಿ ವಿಫಲವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಕ್ರಯೋಜೆನಿಕ್ ಹಂತದ ವೇಳೆ ಉಂಟಾದ ತಾಂತ್ರಿಕ ಅಡಚಣೆಯಿಂದಾಗಿ ಮಿಷನ್​ ಅಪೂರ್ಣವಾಗಿದೆ ಎಂದು ಇಸ್ರೋ ತಿಳಿಸಿದೆ. ಇಒಎಸ್​-03 ಭೂ ನಿಗಾವಣೆಯ ಉಪಗ್ರಹ. ಇದನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ನಲ್ಲಿ ಇರಿಸಲು 51.70 ಮೀಟರ್​ ಎತ್ತರದ ಜಿಎಸ್​ಎಲ್​ವಿ-ಎಫ್​10 ರಾಕೆಟ್​ನಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು….

Read More

ಇಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸಿಎಂ ಭೇಟಿ

ಮಂಗಳೂರು/ಉಡುಪಿ: ಉಡುಪಿ ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದು, ಕರಾವಳಿಯ ಪರಿಚಯ ಹೊಂದಿರುವ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ರುವ ಹಿನ್ನೆಲೆಯಲ್ಲಿ ಕರಾವಳಿಯ ಹಲವು ಬೇಡಿಕೆಗಳು ಈಡೇರಬಹುದೆಂಬ ನಿರೀಕ್ಷೆ ಗರಿಗೆದರಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಅದರಂತೆಯೇ ಎರಡೂ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟ ಬೇಡಿಕೆಗಳಿಗೂ ಸ್ಪಂದಿಸಬೇಕೆಂಬ ಜನಾಗ್ರಹ ಕೇಳಿಬಂದಿದೆ. ಸಿಎಂ ಆದ ಮೇಲೆ ಪ್ರಥಮ ಬಾರಿಗೆ ಉಭಯ ಜಿಲ್ಲೆಗಳಿಗೆ ಬೊಮ್ಮಾಯಿ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭ ದಲ್ಲಿ ಕರಾವಳಿಯ ಬೇಡಿಕೆಗಳಿಗೆ ಸ್ಪಂದಿಸಬಹುದೆಂಬ ಆಶಾಭಾವ…

Read More