ಬೆಂಗಳೂರು ಅಭಿವೃದ್ಧಿ ಕುರಿತು ಸಿಎಂ ಅಧ್ಯಕ್ಷತೆಯಲ್ಲಿ ಸಭೆ

ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಅಭಿವೃದ್ಧಿ ಕುರಿತಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರಿನ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. • ಬೆಂಗಳೂರು ನಗರದ ಅಭಿವೃದ್ಧಿಯ ಯೋಜನೆಗಳು ಇನ್ನಷ್ಟು ಚುರುಕಾಗಿ ಅನುಷ್ಠಾನಗೊಳ್ಳಬೇಕು. ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಭ್ರಷ್ಟಾಚಾರಕ್ಕೆ ಆಸ್ಪದ ನೀಡಬಾರದು ಎಂದು ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚಿಸಿದರು. • ಬೆಂಗಳೂರು ಅಭಿವೃದ್ಧಿಯ ವಿಚಾರದಲ್ಲಿ ಸಚಿವರೊಂದಿಗೆ ಒಂದು ತಂಡವಾಗಿ ಕಾರ್ಯನಿರ್ವಹಿಸಲಾಗುವುದು. ಒಟ್ಟಾಗಿ ಕುಳಿತು ಚರ್ಚಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು. ಶಾಸಕರ…

Read More

ಬಾಚಣಕಿ ಜಲಾಶಯಕ್ಕೆ ಬಾಗಿನ ಅರ್ಪಣೆ

ಮುಂಡಗೋಡ : ತಾಲೂಕಿನಲ್ಲಿ ರಾಮಕೃಷ್ಣ ಹೆಗಡೆಯವರು ಜಲಾಶಯಗಳನ್ನು ನಿರ್ಮಿಸಿ ರೈತರಿಗೆ ಹೆಚ್ಚಿನ ಅನುಕೂಲ ಮಾಡಿದ್ದಾರೆ. ಜಲಾಶಯಗಳ ನೀರನ್ನು ರೈತ ಸಮೂಹ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ ಮಂಗಳವಾರ ಹೇಳಿದರು. ತಾಲೂಕಿನ ಬಾಚಣಕಿ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಹಿಂದೆ ನಿರ್ಮಿಸಿರುವ ಜಲಾಶಯಗಳನ್ನು ಇಂದು ನಿರ್ವಹಣೆ ಮಾಡಲು ನಾವು ಕಷ್ಟ ಪಡುತ್ತಿದ್ದೇವೆ. ರೈತರು ಜಲಾಶಯದ ನೀರನ್ನು ಅನಾವಶ್ಯಕವಾಗಿ ಬಳಕೆ ಮಾಡಬಾರದು. ನೀರನ್ನು ಅವಶ್ಯಕತೆಗೆ ತಕ್ಕಷ್ಟು ಬಳಕೆ…

Read More

ಸೂರ್ಯನ ಸುತ್ತ ಕಾಣಿಸಿಕೊಂಡ ವರ್ಣದ ಉಂಗುರ….!

ಮುಂಡಗೋಡ : ನೀಲ ಆಕಾಶದಲ್ಲಿ ಜಗಮಗಿಸುವ ಸೂರ್ಯನ ಸುತ್ತ ಉಂಟಾದ ತೇಜೋಮಂಡಲ (ಪರಿಧಿ) ದೃಶ್ಯ ನೋಡಿದ ಮುಂಡಗೋಡ ನಗರದ ಜನರು ಆಶ್ಚರ್ಯಚಕಿತರಾದರು. ಮಂಗಳವಾರ ಮಧ್ಯಾಹ್ನ 12.30ರಿಂದ 1.40ರವರೆಗೆ ಸೂರ್ಯನ ಸುತ್ತ ಮೂಡಿದ್ದ ವರ್ಣದುಂಗುರ ನೋಡಲು ಜನರು ಮುಗಿಬಿದ್ದರು. ಯುವಕ-ಯುವತಿಯರು ಮೊಬೈಲ್‌ಗಳಲ್ಲಿ ಈ ದೃಶ್ಯವನ್ನು ಸೆರೆ ಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ಇದೇನು ಅಪಾಯದ ಮುನ್ಸೂಚನೆಯಾ? ಎಂದು ಕೆಲವು ಜನರು ಆತಂಕವನ್ನೂ ವ್ಯಕ್ತಪಡಿಸಿದರು. ಸೂರ್ಯನ ಬೆಳಕು ಮತ್ತು ವಾಯುಮಂಡಲದಲ್ಲಿ ತೇಲಾಡುತ್ತಿರುವ ಹಿಮ ಸ್ಫಟಿಕಗಳು ಪರಸ್ಪರ ಪ್ರಭಾವ ಬೀರುವುದರಿಂದ ಸೃಷ್ಟಿಯಾಗುವ ದ್ಯುತಿ…

Read More

ಮನು ವಿಕಾಸ ಸಂಸ್ಥೆಯಿಂದ ಆಶಾ ಕಾರ್ಯಕರ್ತೆಯರಿಗೆ ಮೆಡಿಕಲ್ ಕಿಟ್

ಮುಂಡಗೋಡ : ತಾಲೂಕಿನಲ್ಲಿ 80 ಆಶಾ ಕಾರ್ಯಕರ್ತೆಯರಿಗೆ ಮನು ವಿಕಾಸ ಸಂಸ್ಥೆಯಿಂದ ಇಂದು ಮೆಡಿಕಲ್ ಕಿಟ್ ವಿತರಿಸಲಾಯಿತು. ಸಂಸ್ಥೆಯ ತಾಲೂಕಾ ಸಂಯೋಜಕರಾದ ಗಣಪತಿ ಯಲಿವಾಳ, ವಲಯ ನಿರ್ವಾಹಕರಾದ ಬಸವರಾಜ ರಡ್ಡೇರ ಇದ್ದರು.

Read More

ಜೋಳದರಾಶಿ ಗುಡ್ಡದಲ್ಲಿ ಹಾರಾಡಲಿದೆ ತ್ರಿವರ್ಣ ಧ್ವಜ

ಹೊಸಪೇಟೆ (ವಿಜಯನಗರ) : ನಗರ ಹೊರವಲಯದ ಜೋಳದರಾಶಿ ಗುಡ್ಡದ ಮೇಲೆ ಆ. 15ರಂದು ತ್ರಿವರ್ಣ ಧ್ವಜ ಹಾರಾಡಲಿದೆ. ಈಗಾಗಲೇ 100 ಅಡಿ ಎತ್ತರದ ಧ್ವಜ ಸ್ತಂಭ ಸ್ಥಾಪಿಸುವ ಕೆಲಸ ಭರದಿಂದ ನಡೆದಿದೆ. ಸಚಿವ ಆನಂದ್‌ ಸಿಂಗ್‌ ಅವರು ವೈಯಕ್ತಿಕವಾಗಿ ₹45 ಲಕ್ಷ ವೆಚ್ಚದಲ್ಲಿ ಈ ಧ್ವಜ ಸ್ತಂಭ ನಿರ್ಮಿಸುತ್ತಿರುವುದು ವಿಶೇಷ. ಬಜಾಜ್‌ ಕಂಪನಿಗೆ ಕೆಲಸ ವಹಿಸಲಾಗಿದ್ದು, ಆ. 14ರೊಳಗೆ ಎಲ್ಲ ಕೆಲಸ ಪೂರ್ಣಗೊಳ್ಳಲಿದೆ. ಆ. 15ರ ಸ್ವಾತಂತ್ರ್ಯ ದಿನದಂದು ರಾಷ್ಟ್ರ ಧ್ವಜ ನೆರವೇರಿಸಲು ಉದ್ದೇಶಿಸಲಾಗಿದೆ. ಜೋಳದರಾಶಿ ಗುಡ್ಡ ನಗರದಲ್ಲಿ…

Read More

ದೀನದಯಾಳ್ ಉಪಾಧ್ಯಾಯ, ಸಾವರ್ಕರ್, ಶ್ಯಾಂಪ್ರಸಾದ ಮುಖರ್ಜಿ ಬ್ರಿಟಿಷರ ಏಜೆಂಟ್ ಗಳು : ಹರಿಪ್ರಸಾದ್

ಬೆಂಗಳೂರು : ದೀನ ದಯಾಳ್ ಉಪಾಧ್ಯಾಯ, ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಅವರ ಹೆಸರು ಇಟ್ಟಿರುವ ಕಡೆಯೆಲ್ಲಾ ಮಸಿ ಬೆಳೆಯುತ್ತೇವೆ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ಯಾಂ ಪ್ರಸಾದ ಮುಖರ್ಜಿ ಸೇರಿ ಇವರೆಲ್ಲಾ ದೇಶದ ಸ್ವಾತಂತ್ರ್ಯಕ್ಕೆ ವಿರೋಧ ಇದ್ದವರು. ಇವರೆಲ್ಲಾ ಬ್ರಿಟಿಷರ ಏಜೆಂಟ್. ಇಂದಿರಾಗಾಂಧಿ ರಾಜೀವ್ ಗಾಂಧಿ ದೇಶಕ್ಕೆ ತ್ಯಾಗ ಮಾಡಿದವರು. ಇವರ ಹೆಸರು ಬದಲಾವಣೆ ಮಾಡಿದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಕಿಡಿಕಾರಿದರು. ಗಮನ ಬೇರೆಡೆ ಸೆಳೆಯಲು ಖೇಲ್ ರತ್ನ ಪ್ರಶಸ್ತಿಗೆ…

Read More

ಹಿಂದುಳಿದ ವರ್ಗಗಳ ಪಟ್ಟಿ ರಚನೆ : ಸಚಿವ ಈಶ್ವರಪ್ಪ ಹರ್ಷ

ಬೆಂಗಳೂರು : ‘ಹಿಂದುಳಿದ ವರ್ಗಗಳ ಪಟ್ಟಿ ರಚನೆ ಅಧಿಕಾರವನ್ನು ಆಯಾಯ ರಾಜ್ಯಗಳಿಗೆ ನೀಡಿದ ಕೇಂದ್ರ ಸರ್ಕಾರದ ತೀರ್ಮಾನವನ್ನು ಸ್ವಾಗತಿಸುತ್ತೇನೆ‌’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ವಿಧಾನ ಸೌಧದಲ್ಲಿ ಸುದ್ದಿಗಾರರ ಜತೆಗೆ ಮಂಗಳವಾರ ಮಾತನಾಡಿದ ಅವರು, ‘ಹಿಂದುಳಿದ ವರ್ಗಕ್ಕೆ ಬಿಜೆಪಿ ಸಾಕಷ್ಟು ಅವಕಾಶ ನೀಡಿದೆ. ಸಮುದಾಯಕ್ಕೆ ಅತಿ ಹೆಚ್ಚಿನ ಸಚಿವ ಸ್ಥಾನಗಳನ್ನು ನೀಡಿದೆ’ ಎಂದರು. ‘ವೈದ್ಯಕೀಯ ಸೀಟುಗಳಲ್ಲಿ ಶೇ 27ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆಯಂಥವರು ಯಾವುದೇ ರಾಜಕೀಯ ಮಾಡದೇ ಸ್ವಾಗತ ಮಾಡಿದ್ದಾರೆ.‌…

Read More

ಇಂದು ವಿಶ್ವ ಸಿಂಹಗಳ ದಿನ, ಕಾಡಿನ ರಾಜನ ಬಗ್ಗೆ ಒಂದಿಷ್ಟು ಮಾಹಿತಿ…..

ಬೆಂಗಳೂರು : ಆಗಸ್ಟ್‌ 10ನ್ನು ವಿಶ್ವ ಸಿಂಹಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಕಾಡಿನ ರಾಜ ರಕ್ಷಣೆ ಬಗ್ಗೆ ಅರಿವು ಮೂಡಿಸುವ ಮತ್ತು ಸಿಂಹ ಸಂತತಿಯನ್ನು ಕಾಪಾಡಿಕೊಂಡು ಹೋಗುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಸಿಂಹದ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ….. ಈ ದಿನವನ್ನು ಡೆರೆಕ್ ಮತ್ತು ಬೆವರ್ಲಿ ಜೌಬರ್ಟ್ 2013 ರಲ್ಲಿ ಆರಂಭಿಸಿದರು. ಸಿಂಹಗಳು ಹೆಚ್ಚಾಗಿ ಗುಂಪಿನಲ್ಲಿ ಬದುಕಲು ಇಷ್ಟ ಪಡುತ್ತವೆ. ಅಲ್ಲದೆ ತೋಳಗಳ ಜೀವನ ಮಾದರಿಯಲ್ಲಿ ಬದುಕುತ್ತವೆ ಕಾಡಿನ ರಾಜನು ಹುಲ್ಲುಗಾವಲು-ಬಯಲು ಪ್ರದೇಶದಲ್ಲಿ ಮಾತ್ರ ವಾಸಿಸುತ್ತಾನೆ ಗಂಡು…

Read More

ದೇವೇಗೌಡರನ್ನು ಭೇಟಿ ಮಾಡಿದ ಸಿ.ಟಿ. ರವಿ

ಬೆಂಗಳೂರು : ದೆಹಲಿಯಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರವಿ ಮತ್ತು ದೇವೇಗೌಡರ ಭೇಟಿ ಸಹಜವಾಗಿಯೇ ರಾಜ್ಯದ ರಾಜಕೀಯ ನಾಯಕರು ಹಾಗೂ ಜನ ಸಾಮಾನ್ಯರಲ್ಲಿ ಕುತೂಹಲ ಮೂಡಿಸಿದೆ. ಬಹಳ ಹೊತ್ತು ಇಬ್ಬರೂ ನಾಯಕರು ರಾಜಕೀಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿರುವ ಮಾಹಿತಿ ಸಿಕ್ಕಿದೆ. ಜೊತೆಗೆ ಭೇಟಿಯ ಬಳಿಕ ಎಚ್.ಡಿ. ದೇವೇಗೌಡರನ್ನು ಸಿಟಿ ರವಿ ಮನತುಂಬಿ ಹೊಗಳಿರುವುದು ವಿಶೇಷ. ಅಷ್ಟಕ್ಕೂ…

Read More

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಮರೆತ ಸರಕಾರ!

ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಸಂದಿರುವ ಈ ಸಂದರ್ಭ ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲು ಕೇಂದ್ರ ಸರಕಾರ ನಿರ್ಧರಿಸಿದ್ದು, ಅದರಂತೆ ಎಲ್ಲ ರಾಜ್ಯ ಸರಕಾರಗಳಿಗೆ ಕಾರ್ಯಕ್ರಮಗಳನ್ನು ರೂಪಿಸಲು ಸೂಚಿಸಿದೆ. ಆದರೆ, ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಯಾವುದೇ ಯೋಜನೆ ರೂಪಿಸಿಕೊಳ್ಳಲು ಮುಂದಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಅಮೃತ ಮಹೋತ್ಸವ ಆಚರಣೆ ಸಂಬಂಧ ಸಚಿವ ಸಂಪುಟದ ಉಪ ಸಮಿತಿ ರಚನೆ, ವರ್ಷ ಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಾರ್ಯಕ್ರಮಗಳ ರೂಪುರೇಷೆ…

Read More