ವಾಣಿಜ್ಯ ಬಂದರು ನಿರ್ಮಾಣ : ಮೀನುಗಾರರ ಮುಖಂಡರೊಂದಿಗೆ ಸಚಿವ ಹೆಬ್ಬಾರ ಸಭೆ
ಯಲ್ಲಾಪುರ : ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದಲ್ಲಿ ಹೊನ್ನಾವರ ಪೋರ್ಟ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಂದು ಯಲ್ಲಾಪುರ ಪಟ್ಟಣದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಮಾನ್ಯ ಕಾರ್ಮಿಕ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಹಾಗೂ ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಸಭೆ ನಡೆಸಿದರು. ಬಂದರು ನಿರ್ಮಾಣದ ಸಾಧಕ ಬಾದಕಗಳ ಬಗ್ಗೆ ಕುರಿತು ಸ್ಥಳೀಯ ಮುಖಂಡರೊಂದಿಗೆ ವಿಸ್ತೃತವಾಗಿ ಚರ್ಚಿಸಿದರು,…
30 ವರ್ಷಗಳ ಹಿಂದೆ ಮುಳುಗಡೆಯಾಗಿದ್ದ ಹಡಗಿನ ಅವಶೇಷ ಪತ್ತೆ
ಕಾರವಾರ : ಸುಮಾರು 30 ವರ್ಷಗಳ ಹಿಂದೆ ಕಾರವಾರದ ಸಮುದ್ರ ಭಾಗದಲ್ಲಿ ಮುಳುಗಡೆಯಾಗಿದ್ದ ಸಿಂಗಾಪುರ ದೇಶದ ಚೆರಿಮಾಜು ಎಂಬ ಹೆಸರಿನ ಸರಕು ಸಾಗಾಣಿಕೆ ಹಡಗಿನ ಅವಶೇಷಗಳು ಇಂದು ಕಾರವಾರದ ಕಡಲ ತೀರದಲ್ಲಿ ಪತ್ತೆಯಾಗಿದೆ.
ಹೆಬ್ಬಾರ ರೇಶನ್ ಕಿಟ್ ವಿತರಣೆಗೆ ಸಿದ್ದತೆ
ಮುಂಡಗೋಡ: ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಬಡ ಕುಟುಂಬಗಳಿಗೆ ಹೆಬ್ಬಾರ ರೇಷನ್ ಕಿಟ್ ವಿತರಣೆ ಮಾಡಲು ಸಕಲ ಸಿದ್ಧತೆ ನಡೆಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಬಡ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದು ಇದರಿಂದ ಕ್ಷೇತ್ರದ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಸಚಿವ ಶಿವರಾಮ ಹೆಬ್ಬಾರ ಅವರು ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ 63ಸಾವಿರ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಹೆಬ್ಬಾರ ರೇಷನ್ ಕೀಟ್‍ನ್ನು ಸಚಿವ ಹೆಬ್ಬಾರ ಅವರ ಕುಟುಂಬದ ವತಿಯಿಂದ ಜನರಿಗೆ ಸದ್ಯದಲ್ಲಿಯೆ ವಿತರಿಸಲಾಗುವುದು. ಪಡಿತರ ಚೀಟಿ…
ಬಾಡಿಗೆದಾರರಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಮುಂಡಗೋಡ: ಪಟ್ಟಣ ಪಂಚಾಯತ ವಾಣಿಜ್ಯ ಮಳಿಗೆಗಳ ಮೂರು ತಿಂಗಳ ಬಾಡಿಗೆ ಹಣವನ್ನು ವಿನಾಯತಿ ನೀಡುವಂತೆ ವಾಣಿಜ್ಯ ಮಳಿಗೆ ಬಾಡಿಗೆದಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ನಾವುಗಳು ಪಟ್ಟಣ ಪಂಚಾಯತಕ್ಕೆ ಸೇರಿದ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಪಡೆದುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಆದರೆ ಕೋವಿಡ್ ಎರಡನೆ ಅಲೆ ಆರಂಭವಾದ ನಂತರ ನಾವು ನಮ್ಮ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿಕೊಂಡು ಮನೆಯಲ್ಲಿ ಉಳಿದುಕೊಂಡಿದ್ದೆವು. ಇದೀಗ ಲಾಕ್‍ಡೌನ್ ತೆರವುಗೊಳಿಸಿದ ಪರಿಣಾಮ ನಮ್ಮ ಅಂಗಡಿಗಳನ್ನು ಆರಂಭಿಸಿದ್ದೇವೆ. ಆದರೆ ಸರಿಯಾದ ವ್ಯಾಪಾರ ನಡೆಯುತ್ತಿಲ್ಲ. ಆದ್ದರಿಂದ ವಾಣಿಜ್ಯ…
ಸಚಿವ ಶಿವರಾಮ ಹೆಬ್ಬಾರ ಅವರಿಂದ ರಾಜ ನ್ಯೂಸ್ ಲೈನ್ ಡಿಜಿಟಲ್ ಮಿಡಿಯಾಕ್ಕೆ ಚಾಲನೆ
ಮುಂಡಗೋಡ : ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ ಅವರು ಇಂದು ರಾಜ ನ್ಯೂಸ್ ಲೈನ್ ಡಿಜಿಟಲ್ ಮಿಡಿಯಾಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜ ನ್ಯೂಸ್ ಲೈನ್ ಮಾಲೀಕರೂ, ಸಂಪಾದಕರಾದ ರಾಜಶೇಖರ ನಾಯ್ಕ, ತಹಶೀಲದಾರ ಶ್ರೀಧರ ಮುಂದಲಮನಿ, ಜಿಲ್ಲಾ ಪಂಚಾಯತ ಸದಸ್ಯರಾದ ಎಲ್.ಟಿ.ಪಾಟೀಲ ಮತ್ತು ರವಿಗೌಡ ಪಾಟೀಲ, ಬಿ.ಜೆ.ಪಿ. ಅಧ್ಯಕ್ಷರಾದ ನಾಗಭೂಷಣ ಹಾವಣಗಿ ಮುಂತಾದವರಿದ್ದರು.