ಕವನ ಸಂಕಲನ “ಕೇಳು ಮನುಜ” ಲೋಕಾರ್ಪಣೆ

Share Now

ಮುಂಡಗೋಡ : ಕನ್ನಡ ಸಾಹಿತ್ಯ ಪರಿಷತ್ತು  ತಾಲೂಕು ಘಟಕ ಮುಂಡಗೋಡ  ಹಾಗೂ ಶ್ರೀ ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್ ಇಂದೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀಕಾಂತ್ ಚನ್ನಪ್ಪ ಹೊಂಡದಕಟ್ಟಿ ಅವರು ಸ್ವರಚಿತ ಕವನ ಸಂಕಲನ ಕೇಳು ಮನುಜ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮವು ತಾಲೂಕಿನ ಇಂದೂರಿನ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವದಲ್ಲಿ ನಡೆಯಿತು. 

ಈ ಕಾರ್ಯಕ್ರಮವನ್ನು ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್  ಅಧ್ಯಕ್ಷರಾದ  ವಿರುಪಾಕ್ಷಿ ಗೌಡ ಪಾಟೀಲ್ ಉದ್ಘಾಟಿಸಿದರು.  ಕೇಳು ಮನುಜ ಪುಸ್ತಕನ್ನು  ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮು ಬೈಲಸೀಮಿ ಬಿಡುಗಡೆ ಮಾಡಿದರು. 

ಮುಖ್ಯ ಅತಿಥಿಗಳಾಗಿ ಡಾ.ಪಿ.ಪಿ.ಛಬ್ಬಿ ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ. ಅಧ್ಯಕ್ಷರಾದ ವಸಂತ ಕೊಣಸಾಲಿ  ಮಾತನಾಡುತ್ತಾ,  ಇಂದೂರಿನ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವದಲ್ಲಿ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡು ವತಿಯಿಂದ ಇಂದೂರಿನ ಶ್ರೀಕಾಂತ್ ಚನ್ನಪ್ಪ ಹೊಂಡದಕಟ್ಟಿ ಅವರ ಕೇಳು ಮನುಜ ಪುಸ್ತಕ ಬಿಡುಗಡೆ ಸಮಾರಂಭ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಇಂದೂರು ಗ್ರಾಮವು ತನ್ನದೇ ಆದ ವಿಶೇಷವಾದ ಇತಿಹಾಸವನ್ನು ಹೊಂದಿದೆ. ನೆಲ ಅದರ ವಿಶೇಷತೆಯನ್ನು ಪುಸ್ತಕ ಮೂಲಕ ಈ ಜಗತ್ತಿಗೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಕಾರ್ಯಕ್ಕೆ ನಮ್ಮ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ನಿಮ್ಮೊಂದಿಗೆ ನಿಲ್ಲುತ್ತದೆ. ನಾನು ಅಧ್ಯಕ್ಷನಾದ ಮೇಲೆ ಇಂತಹ ಹಲವಾರು ಸಾಹಿತಿಗಳನ್ನು ಮತ್ತು ಲೇಖಕರನ್ನು ಸಮಾಜದ ಮುನ್ನೆಲೆಗೆ ತಂದಿದ್ದೇನೆ. ಅಲ್ಲದೇ ತಾಲೂಕಿನ ವಿವಿಧ ಕಲೆಗಳು ಮತ್ತು ವಿವಿಧ ಸಾಹಿತ್ಯ ಪ್ರಕಾರಗಳು ಪರಿಚಯಕರಿಗೆ ಸಹಕಾರ ನೀಡುತ್ತಾ ಬಂದಿದ್ದೇನೆ ಎಂದರು. 

ಈ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಹದೇವಪ್ಪ ನಡಗೇರಿ, ಚಿದಾನಂದ ಪಾಟೀಲ್, ಬಿ.ಕೆ.ಪಾಟೀಲ, ಬಿ.ಆರ್.ಸಿ. ಸಮನ್ವಯಾಧಿಕಾರಿಗಳಾದ ಡಾ.ರಮೇಶ ಅಂಬಿಗೇರ, ನಿವೃತ್ತ ಮುಖ್ಯ ಶಿಕ್ಷಕರಾದ ಎಸ್.ಎಸ್.ಸುಂಕದ, ಎಸ್.ಎನ್.ಸೌದತ್ತಿ, ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ಎಸ್ ಡಿ ಮುಡೆಣ್ಣವರ ಮತ್ತು  ವಿನಾಯಕ್ ಶೇಟ್ ಮತ್ತು ಗೌರವ ಕೋಶಾಧ್ಯಕ್ಷರಾದ ನಾಗರಾಜ ಅರ್ಕಸಾಲಿ, ಮಲ್ಲಿಕಾರ್ಜುನ ಮಡಿವಾಳ
ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಶಾರದಾಬಾಯಿ ರಾಠೋಡ. ಸುಭಾಷ್ ವಡ್ಡರ, ಮಲ್ಲಮ್ಮ ನೀರಲಗಿ, ಶಿಕ್ಷಕರಾದ ಮಂಜುನಾಥ ನೀಲಮ್ಮನವರ, ಮಂಜುನಾಥ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಧರ್ಮರಾಜ್ ನಡಗೇರಿ, ಶ್ರೀಕೃಷ್ಣ ಗುಜುಮಾಗಡಿ, ಶೈಲೇಶ್ ನಾಯಕ, ಮತ್ತು ಕಲ್ಮೇಶ್ವರ ದೇವಸ್ಥಾನದ ಕಮಿಟಿಯ ಸದಸ್ಯರು ಊರಿನ ಹಿರಿಯರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಕೀಳು ಮನುಜ ಪುಸ್ತಕದ ಕವಿ ಶ್ರೀಕಾಂತ ಚೆನ್ನಪ್ಪ ಹೊಂಡದಕಟ್ಟಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇಂದೂರಿನ ಕಲ್ಮೇಶ್ವರ ಟ್ರಸ್ಟ್ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು.
ಶಿಕ್ಷಕ ರಮೇಶ ಪವಾರ ಪುಸ್ತಕದ ವಿಮರ್ಶೆ ಮಾಡಿದರು.
ಗೌರವ ಕಾರ್ಯದರ್ಶಿಗಳಾದ ಎಸ್.ಡಿ.ಮುಡಣ್ಣವರ್ ಸ್ವಾಗತಿಸಿದರು. ಸಂತೋಷ್ ಅಂಗಡಿ ಲೇಖಕರ ಪರಿಚಯಿಸಿದರು. ಕಲ್ಮೇಶ್ ದುಗ್ಗಳ್ಳಿ ಕಾರ್ಯಕ್ರಮದ ನಿರೂಪಿಸಿದರು.