Headlines

ಮನೆ ಹಿಂಭಾಗದಲ್ಲಿ ಅಡಗಿದ್ದ ನಾಗರಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿಗಳು

Share Now

ಮುಂಡಗೋಡ : ಪಟ್ಟಣದ ಕಂಬಾರಗಟ್ಟಿ ಪ್ಲಾಟನ ಮನೆಯೊಂದರ ಹಿಂಭಾಗದಲ್ಲಿ ಅಡಗಿ ಕುಳಿತಿದ್ದ ನಾಗರಹಾವನ್ನು ಅರಣ್ಯ ಸಿಬ್ಬಂದಿಗಳು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಘಟನೆಯೊಂದು ಶುಕ್ರವಾರ ನಡೆದಿದೆ.

ಪಟ್ಟಣ ಪಂಚಾಯಿತಿಯ ನಿವೃತ್ತ ಅಧಿಕಾರಿ ರುದ್ರಯ್ಯ ಬಿ.ಹಿರೇಮಠ ಅವರ ಮನೆಯ ಹಿಂಭಾಗದಲ್ಲಿ ಅಡಗಿ ಕುಳಿತ ನಾಗರಹಾವನ್ನು ಅರಣ್ಯ ಸಿಬ್ಬಂದಿಗಳು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ನಾಗರಹಾವನ್ನು ಕಾಡಿಗೆ ಬಿಡುವ ಮೊದಲು ನಾಗರಹಾವಿದ್ದ ಪೆಟ್ಟಿಗೆಗೆ ರುದ್ರಯ್ಯ ಹಿರೇಮಠ ಅವರ ಕುಟುಂಬದವರು ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.