Headlines

ರಾಜ್ಯದ ‘ವಿವಿಧ ಹಗರಣ’ಗಳ ತನಿಖೆಗಳ ಪ್ರಗತಿ, ಸಮನ್ವಯ ಕಾರ್ಯಗಳಿಗೆ ಸಮಿತಿ ರಚಿಸಿ ಸಿಎಂ ಆದೇಶ

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯ ಹಗರಣಗಳ ಬಗ್ಗೆ ತನಿಖೆ ನಡೆಸುವುದಾಗಿ ಈಗಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಲಾಗಿತ್ತು. ಈಗ ಮುಂದುವರೆದ ಭಾಗವಾಗಿ ವಿವಿಧ ಹಗರಣಗಳ ತನಿಖೆಗಳ ಪ್ರಗತಿ, ಸಮನ್ವಯ ಕಾರ್ಯಗಳಿಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಸಿಎಂ ಸಿದ್ಧರಾಮಯ್ಯ ಆದೇಶಿಸಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಡವಳಿಯನ್ನು ಹೊರಡಿಸಿದ್ದು, ಸರ್ಕಾರದ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿ ಚಾಲ್ತಿಯಲ್ಲಿರುವ ವಿವಿಧ ಹಗರಣಗಳ ತನಿಖೆಗಳ ಪ್ರಗತಿ, ಸಮನ್ವಯ ಮುಂತಾದ ಕಾರ್ಯಗಳಿಗೆ ಸಂಬಂಧಿಸಿದಂತೆ ಕ್ರಮ ವಹಿಸಲು…

Read More

ಚಹಾ ಅಂಗಡಿಯಲ್ಲಿ ರಾತ್ರಿ ಸರಾಯಿ ಮಾರಾಟ..!

ಮುಂಡಗೋಡ : ಬಂಕಾಪುರ ರಸ್ತೆಯಲ್ಲಿರುವ ಚಹಾ ಅಂಗಡಿಯಲ್ಲಿ ರಾತ್ರಿ ಸರಾಯಿ ಮಾರಾಟ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಂಬೇಡ್ಕರ್ ಓಣಿಯ ಪೀಟರ್ ಲಾರೆನ್ಸ ಫರ್ನಾಂಡಿಸ್ ಎಂಬಾತ ಬಂಕಾಪುರ ರಸ್ತೆಯಲ್ಲಿ ಚಹಾ ಅಂಗಡಿ ಹೊಂದಿದ್ದ. ರಾತ್ರಿ 8 ಗಂಟೆ ನಂತರ ಅಲ್ಲಿ ಬರುವವರಿಗೆ ಮದ್ಯ ಮಾರಾಟ ಮಾಡುತ್ತಿದ್ದ. ಸೆ 9ರಂದು ಆತ ಚಹಾ ಅಂಗಡಿಯ ಮುಂದೆ ನಿಂತು ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸ್ ನಿರೀಕ್ಷಕ ರಂಗನಾಥ ನೀಲಮ್ಮನವರ್ ಅಲ್ಲಿಗೆ ತೆರಳಿದ್ದರು. ಆಗ ಆತ ಸಿಕ್ಕಿಬಿದ್ದಿದ್ದು, ಪ್ರಶ್ನಿಸಿದಾಗ ಆತನ ಬಳಿ…

Read More

ದರ್ಶನ್ & ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ : ಚಾರ್ಜ್ ಶೀಟ್ ಪ್ರತಿ ವೈರಲ್!

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ 3991 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಇದೀಗ ಚಾರ್ಜ್ ಶೀಟ್ನ ಪ್ರತಿಯೊಂದು ಇದೀಗ ವೈರಲ್ ಆಗಿದೆ. ರೇಣುಕಾಸ್ವಾಮಿ ಪವಿತ್ರ ಗೌಡಗೆ ಮೆಸೇಜ್ ಮಾಡಿರುವುದರಿಂದ ಹಿಡಿದು ಆತನನ್ನು ಕಿಡ್ನ್ಯಾಪ್ ಮಾಡಿಕೊಂಡು ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಪಟ್ಟಣಗೆರೆ ಶೆಡ್ಗೆ ತಂದಿದ್ದು, ಅಲ್ಲಿ ರೇಣುಕಾ ಸ್ವಾಮಿಯ ಮೇಲೆ ಉಳಿದ ಆರೋಪಿಗಳು ಹಲ್ಲೆ ಮಾಡಿದ್ದು, ನಂತರ ದರ್ಶನ್ ಪವಿತ್ರ ಗೌಡ ಕೂಡ ರೇಣುಕಾ ಸ್ವಾಮಿಯ…

Read More

ಭೂಮಿ, ಆಕಾಶ, ಅಗ್ನಿ, ವಾಯು, ಜಲಕಂಟಕ ತಪ್ಪಿಲ್ಲ: ಇನ್ನೂ ಅನಾಹುತವಿದೆ – ಕೋಡಿ ಶ್ರೀ ಸ್ಪೋಟಕ ಭವಿಷ್ಯ

ಹಾಸನ: ಇನ್ನೂ ಅನಾಹುತ ಕಡಿಮೆಯಾಗಿಲ್ಲ. ಮಳೆ ಹೆಚ್ಚಾಗಲಿದೆ. ಐದು ಕಡೆಯಲ್ಲಿ ತೊಂದರೆ ಎದುರಾಗಲಿದೆ. ಆಕಾಶದಲ್ಲಿ ದೊಡ್ಡ ಆಘಾತವೇ ಉಂಟಾಗಲಿದೆ. ಭೂಮಿ, ಆಕಾಶ, ಅಗ್ನಿ, ವಾಯು, ಜಲಗಳಿಂದ ಕಂಟಕ ಎದುರಾಗಲಿದೆ ಎಂಬುದಾಗಿ ಕೋಡಿಮಠದ ಶಿವಾನಂದ ಶಿವಾಚಾರ್ಯ ಶ್ರೀಗಳು ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಳೆ ಇನ್ನೂ ಜಾಸ್ತಿ ಆಗಲಿದೆ. ಪ್ರಾಕೃತಿಕ ದೋಷವಿದೆ. ಐದು ಕಡೆ ತೊಂದರೆಯಿದೆ. ಭೂಮಿ, ಆಕಾಶ, ಅಗ್ನಿ, ವಾಯು ಎಲ್ಲಾ ಕಡೆಗೂ ತೊಂದರೆ ಆಗ್ತಿದೆ. ಯುದ್ಧದಲ್ಲಿ ಸಾಯುತ್ತಾರೆ ಅಂದಿದ್ದೆ, ಗುಡ್ಡ ಹೋಗುತ್ತದೆ ಎಂದಿದ್ದೆ,…

Read More

ಮುಡಾ ಹಗರಣ : ಹೈಕೋರ್ಟ್‌ ತೀರ್ಪಿನ ಬಳಿಕ ರಾಜ್ಯದಲ್ಲಿ ಅಸಲಿ ಗೇಮ್‌ ಶುರು?

ಬೆಂಗಳೂರು: ಮುಡಾ ಸೈಟ್ ಹಗರಣದ ವಿಚಾರಣೆ ಬಹುತೇಕ ಮುಕ್ತಾಯದ ಹಂತ ತಲುಪಿದೆ. ಸೆ.12ಕ್ಕೆ ವಿಚಾರಣೆ ನಡೆದ ಬಳಿಕ ತೀರ್ಪು ಪ್ರಕಟವಾಗುವ ಸಾಧ್ಯತೆಯಿದೆ. ಹೈಕೋರ್ಟ್‌ ತೀರ್ಪಿನ ನಂತರ ರಾಜ್ಯ ರಾಜಕೀಯದಲ್ಲಿ ಅಸಲಿ ಗೇಮ್‌ ಶುರುವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಮುಡಾ ಕೇಸಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆಯಲಿದೆ. ಸರ್ಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಲಿದ್ದಾರೆ. ಇದಲ್ಲದೇ ಸೆ. 12ರಂದು ಕೂಡ…

Read More

ಎತ್ತಿನಹೊಳೆ ಯೋಜನೆ: ಪರಿಸರ ಹಾನಿ ಕುರಿತು ರಾಜ್ಯದಿಂದ ವರದಿ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ಎತ್ತಿನಹೊಳೆ ಯೋಜನೆಯು ಪಶ್ಚಿಮ ಘಟ್ಟಗಳಲ್ಲಿ ಪರಿಸರ ನಾಶಕ್ಕೆ ಕಾರಣವಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ, ಕೇಂದ್ರ ಪರಿಸರ ಸಚಿವಾಲಯವು ಪರಿಸರಕ್ಕೆ ಉಂಟಾದ ಹಾನಿ ಸೇರಿದಂತೆ ಯೋಜನೆಯ ಬಗ್ಗೆ ಸ್ಥಿತಿಗತಿ ವರದಿಯನ್ನು ರಾಜ್ಯದಿಂದ ಕೇಳಿದೆ. ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿದರೂ ಯೋಜನೆಯು ಅಪೇಕ್ಷಿತ ಫಲಿತಾಂಶಗಳನ್ನು ನೀಡಿಲ್ಲ ಎಂಬ ಮಾಧ್ಯಮ ವರದಿಗಳ ನಂತರ ಸಚಿವಾಲಯವು ಸ್ಥಿತಿ ವರದಿಯನ್ನು ಪಡೆಯಲು ನಿರ್ಧರಿಸಿತು. ಇದಲ್ಲದೆ, ಯೋಜನೆಯನ್ನು ಕಾರ್ಯಗತಗೊಳಿಸುವಾಗ, ದೊಡ್ಡ ಪ್ರಮಾಣದ ಪರಿಸರ ಹಾನಿ ಸಂಭವಿಸಿದೆ ಮತ್ತು ಹಲವಾರು ಸ್ಥಳಗಳಲ್ಲಿ ಭೂಕುಸಿತಗಳು ವರದಿಯಾಗಿವೆ…

Read More

ರಾಜ್ಯ ಸರ್ಕಾರಿ ನೌಕರರಿಗೆ’ ಮತ್ತೊಂದು ಗುಡ್ ನ್ಯೂಸ್ : `ವೈದ್ಯಕೀಯ ಭತ್ಯೆ’ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು; ರಾಜ್ಯ ಸರ್ಕಾರಿ ನೌಕರರಿಗೆ ಈಗಾಗಲೇ 7ನೇ ವೇತನ ಆಯೋಗದ ವೇತನ ಶ್ರೇಣಿಯಂತೆ ವೇತನ ಜಾರಿಗೊಳಿಸಲಾಗಿತ್ತು. ಎನ್ ಪಿ ಎಸ್ ರದ್ದುಗೊಳಿಸಿ, ಓಪಿಎಸ್ ಜಾರಿಗೊಳಿಸುವ ಬಗ್ಗೆಯೂ ಸಮಿತಿಯನ್ನು ರಚಿಸಲಾಗಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿಸುದ್ದಿ ಎನ್ನುವಂತೆ ವೈದ್ಯಕೀಯ ಭತ್ಯೆ ದರಗಳನ್ನು ಪರಿಷ್ಕರಿಸಿ ಆದೇಶಿಸಿದೆ. ಈ ಕುರಿತಂತೆ ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿಯವರು ನಡವಳಿಯನ್ನು ಹೊರಡಿಸಿದ್ದು, ರಾಜ್ಯ ಸರ್ಕಾರದ ನೀತಿ ನಿರ್ಣಯದಂತೆ 05-09-2022ರ ಸರ್ಕಾರಿ ಆದೇಶದಲ್ಲಿ ನಗದುರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (ಕೆ.ಎ.ಎಸ್.ಎಸ್)…

Read More

ಇಡಗುಂಜಿಯಲ್ಲಿ ಭಕ್ತ ಸಾಗರ… ಗಣಪತಿಗೆ ತೆಂಗು, ಬಾಳೆ, ಅಡಿಕೆ ಅರ್ಪಣೆ

ಕಾರವಾರ : ಹೊನ್ನಾವರ ತಾಲೂಕಿನ ಇಡಗುಂಜಿಯಲ್ಲಿನ ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಪ್ರಸಿದ್ಧವಾದ ಗಣಪತಿ ದೇವಸ್ಥಾನಕ್ಕೆ ಭಕ್ತರೆ ದಂಡೇ ಹರಿದು ಬಂದಿದೆ.   ಇಡಗುಂಜಿ ಗಣಪತಿ ರಾಜ್ಯ ಅಷ್ಟೇ ಅಲ್ಲ ದೇಶ ವಿದೇಶಗಳಲ್ಲೂ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಗಣೇಶ ಚತುರ್ಥಿಯಂದು ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದರೆ ಹರಕೆ ಈಡೆರುತ್ತದೆ ಎಂಬ ನಂಬಿಕೆ ಇದೆ.ಹಾಗಾಗಿ ಮನೆಯಲ್ಲಿ ಹಬ್ಬ ಇದ್ದರೂ ಸಹಿತ ಬಹಳಷ್ಟು ಜನ ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮನೆಯಲ್ಲಿ ಗಣೇಶನನ್ನ ಪ್ರತಿಷ್ಠಾಪನೆ ಮಾಡುತ್ತಾರೆ….

Read More

ಬೆಳಗಾವಿ : ಗಣೇಶ ಮೂರ್ತಿ ಮೆರವಣಿಗೆ ವೇಳೆ ಪಟಾಕಿ ಸಿಡಿಸುವ ವಿಚಾರಕ್ಕೆ ಯುವಕರ ನಡುವೆ ಗಲಾಟೆ!

ಬೆಳಗಾವಿ : ಇಂದು ರಾಜ್ಯಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗಿತ್ತಿದ್ದೂ, ಎಲ್ಲ ಕಡೆಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.ಆದರೆ ಬೆಳಗಾವಿಯಲ್ಲಿ 2 ಗಣೇಶ ಮಂಡಳಿ ಯುವಕರ ನಡುವೆ ಗಲಾಟೆ ನಡೆದಿರುವ ಘಟನೆ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ನಡೆದಿದೆ. ಕರೋಶಿ ಗ್ರಾಮದಲ್ಲಿ ಎರಡು ಯುವಕರ ಮಧ್ಯ ಗಲಾಟೆ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗ್ರಾಮದಲ್ಲಿ ಘಟನೆ ನಡೆದಿದೆ. ಒಂದು ಕಡೆ ಗಣೇಶ ಮಂಡಳಿ ಯುವಕರು ಮೆರವಣಿಗೆಯಲ್ಲಿ ಗಣೇಶ ಮೂರ್ತಿ…

Read More

ಗಣೇಶನ ಪೂಜೆಗೆ ಗರಿಕೆ ಯಾಕೆ ಬೇಕು? – ಇದರ ಹಿಂದಿದೆ ಪೌರಾಣಿಕ ರೋಚಕ ಕಥೆ..!

@ ರಾಜಶೇಖರ ನಾಯ್ಕಯಾವುದೇ ರೀತಿಯ ಶುಭ ಕಾರ್ಯಗಳು ನಿರ್ವಿಘ್ನವಾಗಿ ಆಚರಣೆ ಮಾಡುವುದಕ್ಕಾಗಿಯೇ ಮೊದಲು ಗಣೇಶನನ್ನು ಪೂಜಿಸುತ್ತಾರೆ. ಪೂಜಾ ಸಂದರ್ಭದಲ್ಲಿ ಒಂದೆರಡು ಗರಿಕೆಗಳನ್ನು ಇಡುವ ಪದ್ಧತಿ ಇದೆ.ಈ ಗರಿಕೆಯನ್ನು ಪೂಜಾ  ಕೈಂಕರ್ಯಕ್ಕೆ  ಬಳಸುವುದಕ್ಕೂ ಒಂದು ಕಾರಣವಿದೆ. ಅದೇನು ಅಂತಿರಾ..? ಹಾಗಿದ್ದರೆ ಮುಂದೆ ಓದಿ… ಒಂದು ಸಾರಿ ಯಮಲೋಕದಲ್ಲಿ ಉತ್ಸವ ನಡೆದಿತ್ತು. ಉತ್ಸವದಲ್ಲಿ ಅಪ್ಸರೆಯರು ಮತ್ತು ನರ್ತಕಿಯರು ನೃತ್ಯ ಮಾಡುತ್ತಿದ್ದರು. ತಿಲೋತ್ತೆಮೆ ನೃತ್ಯ ಕಂಡ ಯಮ ಮೋಹಿತನಾದನು. ಯಮ ಅನುರಕ್ತನಾದ ಪರಿಣಾಮ ತಿಲೋತ್ತಮೆಯ ಗರ್ಭದಲ್ಲಿ ಭಯಂಕರ, ಕ್ರೂರ ಮತ್ತು ವಿಕಾರವಾದ ಅನಲಾಸುರ…

Read More